Englishहिन्दीമലയാളംதமிழ்తెలుగు

In Pics: ಐಪಿಎಲ್ 6: ಧೋನಿ ಪಡೆ ಫೈನಲ್ ಗೆ ಲಗ್ಗೆ

Posted by:
Published: Wednesday, May 22, 2013, 11:08 [IST]
 

ನವದೆಹಲಿ, ಮೇ 21: ಐಪಿಎಲ್ 2013ರ ಮೊದಲ ಕ್ವಾಲಿಫಾಯರ್ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುಂಬೈ ಇಂಡಿಯನ್ಸ್ ನ್ನು 48 ರನ್ ಗಳ ಅಂತರದಲ್ಲಿ ಸೋಲಿಸಿ, 5ನೆ ಬಾರಿ ಫೈನಲ್ ಪ್ರವೇಶಿಸಿದೆ.

ಮುಂಬೈ ಇಂಡಿಯನ್ಸ್ ತಂಡ ಗೆಲ್ಲಲು 193 ರನ್ ಗಳ ಕಠಿಣ ಸವಾಲು ಎದುರಿಸಿ, 18.4 ಓವರ್‌ಗಳಲ್ಲಿ 144 ರನ್ ಮಾತ್ರ ಗಳಿಸಿ ಆಲೌಟ್ ಆಗಿ ಸೊಲೊಪ್ಪಿಕೊಂಡಿದೆ. ಮುಂಬೈ ಇಂಡಿಯನ್ಸ್ ತಂಡಕ್ಕೆ ಫೈನಲ್ ಪ್ರವೇಶಿಸಲು ಇನ್ನೊಂದು ಅವಕಾಶ ಇದೆ. ರಾಜಸ್ಥಾನ ರಾಯಲ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡದ ನಡುವಿನ ಪಂದ್ಯ ಗೆದ್ದವರ ವಿರುದ್ಧ ಮೇ.24ರಂದು ಮುಂಬೈ ಸೆಣಸಲಿದೆ.

ಚೆನ್ನೈ ಸೂಪರ್ ಕಿಂಗ್ಸ್20 ಓವರ್ 192/1
(ಮೈಕಲ್ ಹಸ್ಸಿ 86 ನಾಟೌಟ್, ಸುರೇಶ್ ರೈನಾ 82 ನಾಟೌಟ್, ವಿಜಯ್ 23, ಪೊಲಾರ್ಡ್ 1-28)

ಮುಂಬೈ ಇಂಡಿಯನ್ಸ್18.4 ಓವರ್ 144/10
(ಸ್ಮಿತ್ 68, ಪೊಲಾರ್ಡ್ 24, ರಾಯುಡು 15, ಕಾರ್ತಿಕ್ 11, ಜಡೇಜ 31ಕ್ಕೆ 3, ಬ್ರಾವೋ 9ಕ್ಕೆ 3, ಮೊನೀಷ್ ಶರ್ಮ 32ಕ್ಕೆ 2, ಮೊರ್ಕೆಲ್ 26ಕ್ಕೆ 1, ಮೊರಿಸ್ 26ಕ್ಕೆ 1). ಸ್ಕೋರ್ ಕಾರ್ಡ್ ನೋಡಿ

ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿನ ಸಂಭ್ರಮ ಹಾಗೂ ಇನ್ನಷ್ಟು ವಿವರಗಳನ್ನು ಚಿತ್ರಸರಣಿಯಲ್ಲಿ ನೋಡಿ...

ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿನ ಸಂಭ್ರಮ

ಮುಂಬೈ ಇಂಡಿಯನ್ಸ್ ತಂಡ ಎರಡನೆ ವಿಕೆಟ್ ಗೆ ಡ್ವೇಯ್ನ್ ಸ್ಮಿತ್ ಮತ್ತು ದಿನೇಶ್ ಕಾರ್ತಿಕ್ 6.4 ಓವರ್ ಗಳಲ್ಲಿ 11.25 ಸರಾಸರಿಯಂತೆ 75 ರನ್ ಗಳ ಚೆಚ್ಚಿ ಚೆನ್ನೈಗೆ ಆಂತಕ ಮೂಡಿಸಿದ್ದು ಬಿಟ್ಟರೆ ಉಳಿದವರು ಕ್ರೀಸ್ ನಲ್ಲಿ ನಿಲ್ಲಲಿಲ್ಲ

ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿನ ಸಂಭ್ರಮ

ಸ್ಮಿತ್ 28 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಐದು ಸಿಕ್ಸರ್ ನೆರವಿನಲ್ಲಿ 68 ರನ್ ಪೇರಿಸಿದ್ದರು. 8.2ನೆ ಓವರ್‌ನಲ್ಲಿ ಜಡೇಜ ಅವರು ಸ್ಮಿತ್ ಗೆ ಪೆವಿಲಿಯನ್ ಹಾದಿ ತೋರಿಸಿದರು.

ಆದಿತ್ಯ ತಾರೆ ಮತ್ತು ಸ್ಮಿತ್ ಇನಿಂಗ್ಸ್ ಆರಂಭಿಸಿ 12 ರನ್ ಮಾಡಿದ್ದಾಗ ಅಲ್ಬಿ ಮೊರ್ಕೆಲ್ ಮುಂಬೈ ತಂಡಕ್ಕೆ ಆಘಾತ ನೀಡಿದರು.

ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿನ ಸಂಭ್ರಮ

11 ರನ್ ಗಳಿಸಿದ ಕಾರ್ತಿಕ್ ರನ್ನು ಎಡಗೈ ಸ್ಪಿನ್ನರ್ ಜಡೇಜ ಎಲ್ ಬಿಡಬ್ಲು ಬಲೆಗೆ ಕೆಡವಿದರು. ನಾಯಕ ರೋಹಿತ್ ಶರ್ಮ (8) ವಿಫಲರಾದರು.

ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿನ ಸಂಭ್ರಮ

ಅಂಬಟಿ ರಾಯುಡು ಮತ್ತು ಕೀರನ್ ಪೊಲಾರ್ಡ್ ಜೊತೆಯಾಗಿ ತಂಡಕ್ಕೆ ಗೆಲುವಿನ ಆಸೆ ಹುಟ್ಟಿಸಿದರು. 2.5 ಓವರ್ ಗಳಲ್ಲಿ ಐದನೆ ವಿಕೆಟ್ ಗೆ ಈ ಜೋಡಿ 26 ರನ್ ಚೆಚ್ಚಿತು ಅದರೆ, ಪೊಲಾರ್ಡ್ 24 ರನ್(16ಎ, 1ಬೌ, 2ಸಿ) ಸಿಡಿಸಿ ಜಡೇಜಗೆ ವಿಕೆಟ್ ಒಪ್ಪಿಸಿದರು.

ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿನ ಸಂಭ್ರಮ

ಉಳಿದಂತೆ ಹರ್ಭಜನ್ ಸಿಂಗ್ 4 ಎಸೆತ ಎದುರಿಸಿ ಶೂನ್ಯ ಸುತ್ತಿದರೆ, ಮಿಚೆಲ್ ಜಾನ್ಸನ್ 6 ರನ್ ಸೇರಿಸಿದರು. ಲಸಿತ್ ಮಾಲಿಂಗ (0),ಅಂಬಟಿ ರಾಯುಡು15 ರನ್(14ಎ,1ಬೌ) ಅವರು ವೇಗಿ ಮೋಹಿತ್ ಶರ್ಮ ಎಸೆತವನ್ನು ಕೆಣಕಲು ಹೋಗಿ ಔಟಾದರು.

ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿನ ಸಂಭ್ರಮ

18.4ನೆ ಓವರ್ ನಲ್ಲಿ ಮೋಹಿತ್ ಶರ್ಮ ಅವರು ಪ್ರಗ್ಯಾನ್ ಓಜಾ (0) ವಿಕೆಟ್ ಉರುಳಿಸುವ ಮೂಲಕ ಮುಂಬೈ ಇಂಡಿಯನ್ಸ್ ಆಲೌಟಾಯಿತು. ಚೆನ್ನೈ ಅಭಿಮಾನಿಗಳು ಸಂಭ್ರಮದಲ್ಲಿ ಪಟಾಕಿ ಸಿಡಿಸಿ ಕುಣಿದಾಡಿದರು

English summary
In Pics: Two-time champions Chennai Super Kings made it to a 5th final in 6 years of Indian Premier League (IPL) with a resounding 48-run victory over Mumbai Indians in Qualifier 1 here at Feroz Shah Kotla on Tuesday night.
ಅಭಿಪ್ರಾಯ ಬರೆಯಿರಿ