Englishहिन्दीമലയാളംதமிழ்తెలుగు

Pics: ಶ್ರೀಶಾಂತ್ ಗೆ ಕಾಲ್ ಗರ್ಲ್ಸ್ ನಂಟು, ಪ್ರತಿಭಟನೆ

Posted by:
Published: Friday, May 17, 2013, 17:54 [IST]
 

ನವದೆಹಲಿ, ಮೇ 17: ಭಾರತೀಯ ಕ್ರಿಕೆಟ್ ಲೋಕವನ್ನೇ ಬೆಚ್ಚಿ ಬೀಳಿಸಿರುವ ಸ್ಪಾಟ್ ಫಿಕ್ಸಿಂಗ್ ಅಕ್ರಮದ ಜೊತೆಗೆ ರಾಜಸ್ಥಾನ ರಾಯಲ್ಸ್ ತಂಡದ ಮೂವರು ಆಟಗಾರರಿಗೆ ಬುಕ್ಕಿಗಳು ಕಾಲ್ ಗರ್ಲ್ಸ್ (ಕರೆವೆಣ್ಣು) ಗಳನ್ನು ಪೂರೈಸಿದ ಮಾಹಿತಿ ಹೊರ ಬಿದ್ದಿದೆ. ಇದರಿಂದ ಕೆರಳಿರುವ ಮಹಿಳಾ ಕ್ರಿಕೆಟರ್ ಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

ರಾಜಸ್ಥಾನ ರಾಯಲ್ಸ್ ನ ಶ್ರೀಶಾಂತ್, ಅಜಿತ್ ಚಂಡಿಲಾ ಮತ್ತು ಅಂಕಿತ್ ಶರ್ಮಾ ಅವರುಗಳಿಗೆ ಪ್ರತಿಷ್ಠಿತ ಹೊಟೇಲ್ ಗಳಲ್ಲಿ ಬುಕ್ಕಿಗಳು ಕಾಲ್ ಗರ್ಲ್ಸ್ ಪೂರೈಸಿರುವುದು ಪೊಲೀಸರ ಪ್ರಾಥಮಿಕ ತನಿಖೆಗಳಿಂದ ದೃಢಪಟ್ಟಿದೆ. ಮುಂಬೈನ ಪ್ರತಿಷ್ಠಿತ ಹೊಟೇಲ್ ವೊಂದರಲ್ಲಿ ಆಟಗಾರರನ್ನು ಬುಕ್ ಮಾಡಿಕೊಳ್ಳಲು ಬುಕ್ಕಿಗಳು ಮೊದಲು ಕಾಲ್ ಗರ್ಲ್ಸ್ ಗಳ ಮೂಲಕವೇ ವ್ಯವಹಾರ ಕುದುರಿಸಿದ್ದಾರೆ.

ಬುಕ್ಕಿಗಳಾದ ಮನನ್ ಮತ್ತು ಚಾನ್ ಎಂಬುವರು ಈ ಮೂವರು ಆಟಗಾರರಿಗೆ ಮುಂಬೈನ ಪ್ರತಿಷ್ಠಿತ ಹೊಟೇಲ್ ವೊಂದರಲ್ಲಿ ಕಾಲ್ ಗರ್ಲ್ಸ್ ಮೂಲಕ ಮೊದಲು ವ್ಯವಹಾರ ಸರಿಪಡಿಸಿಕೊಂಡಿದ್ದಾರೆ. ಪಂದ್ಯ ಮುಗಿದ ಬಳಿಕ ಆಟಗಾರರು ಕಾಲ್ ಗರ್ಲ್ಸ್ ಗಳನ್ನು ಸಂಪರ್ಕಿಸಿ ಇಂತಹ ಪಂದ್ಯಗಳಿಗೆ ಇಂತಿಷ್ಟು ಹಣ ಎಂದು ನಿಗದಿಪಡಿಸುತ್ತಿದ್ದರು. ವ್ಯವಹಾರ ಕುದುರಿದರೆ ಡೀಲ್ ಮುಗಿಯಿತೆಂದೇ ಅರ್ಥ. ಸುದ್ದಿ ವಿಡಿಯೋದಲ್ಲಿ ನೋಡಿ.. ಪ್ರತಿಭಟನೆ, ಆರೋಪಿಗಳ ಕುಟುಂಬದ ಅಳಲು ಎಲ್ಲವೂ ಚಿತ್ರಗಳಲ್ಲಿ ನೋಡಿ

ಪ್ರತಿಭಟನೆ, ಆರೋಪಿಗಳ ಕುಟುಂಬದ ಅಳಲು

ಪಾಟ್ನಾ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ವಿರುದ್ಧ ಪ್ರತಿಭಟನೆ ನಡೆಸಿದ ಮಗಧ ಮಹಿಳಾ ಕಾಲೇಜಿನ ಕ್ರಿಕೆಟರ್ಸ್

ಪ್ರತಿಭಟನೆ, ಆರೋಪಿಗಳ ಕುಟುಂಬದ ಅಳಲು

ನವದೆಹಲಿ: ಸ್ಪಾಟ್ ಫಿಕ್ಸಿಂಗ್ ವಿರುದ್ಧ ಕಿಡಿಕಾರಿದ ಶಿವಸೇನಾ ಕಾರ್ಯಕರ್ತರು ಜಂತರ್ ಮಂತರ್ ಬಳಿ ಪ್ರತಿಭಟನೆ ನಡೆಸಿದರು

ಪ್ರತಿಭಟನೆ, ಆರೋಪಿಗಳ ಕುಟುಂಬದ ಅಳಲು

ಮಗ ಶ್ರೀಶಾಂತ್ ದುಃಸ್ಥಿತಿಗೆ ಮರಗುತ್ತಿರುವ ತಂದೆ ಶಾಂತಕುಮಾರನ್ ನಾಯರ್

ಪ್ರತಿಭಟನೆ, ಆರೋಪಿಗಳ ಕುಟುಂಬದ ಅಳಲು

ಆರೋಪಿಗಳಾದ ಶ್ರೀಶಾಂತ್, ಅಜಿತ್ ಹಾಗೂ ಅಂಕಿತ್ ಕೋರ್ಟಿಗೆ ಕರೆದೊಯ್ಯುವ ವೇಳೆ. ಎಲ್ಲಾ ಆರೋಪಿಗಳು ನಾಲ್ಕು ದಿನ ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿದ್ದಾರೆ.

ಪ್ರತಿಭಟನೆ, ಆರೋಪಿಗಳ ಕುಟುಂಬದ ಅಳಲು

ಆರೋಪಿಗಳಾದ ಶ್ರೀಶಾಂತ್, ಅಜಿತ್ ಹಾಗೂ ಅಂಕಿತ್ ಕೋರ್ಟಿಗೆ ಕರೆದೊಯ್ಯುವ ವೇಳೆ.

ಪ್ರತಿಭಟನೆ, ಆರೋಪಿಗಳ ಕುಟುಂಬದ ಅಳಲು

ಅಹಮದಾಬಾದಿನಲ್ಲಿ ಸ್ಪಾಟ್ ಫಿಕ್ಸರ್ಸ್ ವಿರುದ್ಧ ಕಿಡಿ

ಪ್ರತಿಭಟನೆ, ಆರೋಪಿಗಳ ಕುಟುಂಬದ ಅಳಲು

ಬೆಂಗಳೂರಿನಲ್ಲಿ ಶ್ರೀಶಾಂತ್ ಸೇರಿದಂತೆ ಆರೋಪಿಗಳ ಪ್ರತಿಕೃತಿ ದಹನ

ಪ್ರತಿಭಟನೆ, ಆರೋಪಿಗಳ ಕುಟುಂಬದ ಅಳಲು

ರಾಜಸ್ಥಾನ್ ರಾಯಲ್ಸ್ ಆಟಗಾರ ಅಜಿತ್ ಚಂಡಿಲ ಅವರ ಕುಟುಂಬದ ಸದಸ್ಯರು

ಪ್ರತಿಭಟನೆ, ಆರೋಪಿಗಳ ಕುಟುಂಬದ ಅಳಲು

ಶೋ ನಿಲ್ಲುವಂತಿಲ್ಲ. ಪಂದ್ಯಗಳು ಎಂದಿನಂತೆ ನಡೆಯುತ್ತಲೇ ಇದೆ. ಚಿಯರ್ ಗರ್ಲ್ಸ್ ಕುಣಿತ ನಿರಂತರವಾಗಿದೆ.

ಪ್ರತಿಭಟನೆ, ಆರೋಪಿಗಳ ಕುಟುಂಬದ ಅಳಲು

ಮ್ಯಾಚ್ ಫಿಕ್ಸಿಂಗ್, ಸ್ಪಾಟ್ ಫಿಕ್ಸಿಂಗ್ ಆರೋಪಿ ಕ್ರಿಕೆಟರ್ ಗಳ ಮೇಲಿನ ದೋಷಾರೋಪಣ ಪ್ರಾಥಮಿಕ ವರದಿ

English summary
In Pics : Women cricketers of Magadh Mahila college are shouting slogans during a protest against spot fixing of IPL matches in Patna on Friday. It has been revealed that the bookies had also supplied call girls to Sreesanth and Ajit Chandila who have been arrested
ಅಭಿಪ್ರಾಯ ಬರೆಯಿರಿ