Englishहिन्दीമലയാളംதமிழ்తెలుగు

ಶ್ರೀಶಾಂತ್ ಅವನತಿಗೆ ಧೋನಿಯೇ ಕಾರಣ

Posted by:
Published: Thursday, May 16, 2013, 17:23 [IST]
 

ಶ್ರೀಶಾಂತ್ ಅವನತಿಗೆ ಧೋನಿಯೇ ಕಾರಣ
 

ಬೆಂಗಳೂರು, ಮೇ 16: ನನ್ನ ಮಗನ ಭವಿಷ್ಯ ಹಾಳಾಗಲು ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರಸಿಂಗ್ ಧೋನಿ ಹಾಗೂ ಹರ್ಭಜನ್ ಸಿಂಗ್ ಪಿತೂರಿಯೇ ಕಾರಣ ಎಂದು ಶ್ರೀಶಾಂತ್ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಶ್ರೀಶಾಂತ್ ಎಂದಿಗೂ ಮೋಸದಾಟ, ಕಳ್ಳಾಟದಲ್ಲಿ ಭಾಗಿಯಾಗಲು ಸಾಧ್ಯವಿಲ್ಲ. ಇದೊಂದು ವ್ಯವಸ್ಥಿತ ಸಂಚು ಎಂದು ಶ್ರೀಶಾಂತ್ ತಾಯಿ ಹೇಳಿದ್ದಾರೆ.

ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಸ್ಪಾಟ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಶ್ರೀಶಾಂತ್ ಸೇರಿದಂತೆ ಮೂವರು ಆಟಗಾರರನ್ನು ಪೊಲೀಸರು ಬಂಧಿಸಿದ ಸುದ್ದಿ ಕೇಳಿದ ಮೇಲೆ ಶ್ರೀಶಾಂತ್ ಕುಟುಂಬ ಆಘಾತಕ್ಕೊಳಗಾಗಿದೆ.

ಹತಾಶರಾದ ಶ್ರಿಶಾಂತ್ ತಂದೆ ಶಾಂತಕುಮಾರ ನಾಯರ್ ಅವರು, ಧೋನಿ ಮತ್ತು ಹರ್ಭಜನ್ ಸಿಂಗ್ ವಿರುದ್ಧ ಹರಿಹಾಯ್ದರು. ನನ್ನ ಮಗ ಶ್ರೀಶಾಂತ್ ಯಾವುದೇ ತಪ್ಪು ಮಾಡಿಲ್ಲ. ಆತನ ಭವಿಷ್ಯ ಹಾಳಾಗಬೇಕೆಂಬ ಕಾರಣಕ್ಕಾಗಿಯೇ ಧೋನಿ ಮತ್ತು ಹರ್ಭಜನ್ ಸಿಂಗ್ ವ್ಯವಸ್ಥಿತ ಪಿತೂರಿ ನಡೆಸಿದ್ದಾರೆ. ತನಿಖೆ ನಡೆದ ಮೇಲೆ ಸತ್ಯಾಂಶ ಹೊರಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ Slapgate ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಶಾಂತ್ ಹರ್ಭಜನ್ ವಿರುದ್ಧ ಟ್ವೀಟ್ ಮಾಡಿದ್ದಕ್ಕೆ, ತನ್ನ ಮಗಗನ್ನು ಜಾಲದಲ್ಲಿ ಸಿಲುಕಿಸಿಕೊಳ್ಳಲಾಗಿದೆ ಎಂದು ಶ್ರೀಶಾಂತ್ ರ ಅಪ್ಪ ಹೇಳಿಕೆ ನೀಡಿದ್ದಾರೆ. ಶ್ರೀಶಾಂತ್ ಅದ್ಹೇಗೆ ತಂಡಕ್ಕೆ ಬರುತ್ತಾರೆ, ನಾನೂ ಒಂದು ಕೈ ನೋಡಿಕೊಳ್ಳುತ್ತೇನೆ ಎಂದು ಧೋನಿ ಧಮಕಿ ಹಾಕಿದ್ದರು. ನನ್ನ ಮಗನಿಗೆ ಕಪಾಳ ಮೋಕ್ಷ ಮಾಡಿದ್ದ ಹರ್ಭಜನ್ ಸಿಂಗ್ ಈ ಪಿತೂರಿಯ ಹಿಂದೆ ಇದ್ದಾರೆ. ತನಿಖೆ ನಡೆಯಲಿ ಎಂದು ಆಗ್ರಹಿಸಿದ್ದಾರೆ.

ಆದರೆ, ಶ್ರೀಶಾಂತ್ ತಾಯಿ ಸಾವಿತ್ರಿ ದೇವಿ ಅವರು ಪಿಟಿಐ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ನಾನು ಯಾವುದೇ ಆಟಗಾರರನ್ನು ದೂಷಿಸುವುದಿಲ್ಲ. ನನ್ನ ಮಗ ಏನು ತಪ್ಪು ಮಾಡಿಲ್ಲ ಎಂದಷ್ಟೇ ಹೇಳುತ್ತೇನೆ. ಶ್ರೀಶಾಂತ್ ಎಂದೂ ದುಡ್ಡಿಗೆ ಆಸೆ ಪಟ್ಟವನಲ್ಲ. ತಂಡಕ್ಕೆ ಮೋಸಮಾಡುವವನಲ್ಲ ಎಂದರು.

English summary
Shocked by the arrest of her son on the charges of spot fixing in the ongoing Indian Premier League, cricketer S Sreesanth's mother Savithridevi today said "my son will never betray cricket".
ಅಭಿಪ್ರಾಯ ಬರೆಯಿರಿ