Englishहिन्दीമലയാളംதமிழ்తెలుగు

ವಿವಾದಗಳ ರಾಜ ಶ್ರೀಶಾಂತ್ ಕೆರಿಯರ್ ರೀ ಕ್ಯಾಪ್

Posted by:
Published: Thursday, May 16, 2013, 13:44 [IST]
 

ಇಂಡಿಯನ್ ಪ್ರಿಮಿಯರ್ ಲೀಗ್ 2013ರಲ್ಲಿ ಸ್ಪಾಟ್ ಫಿಕ್ಸಿಂಗ್ ಭೂತ ಕಾಣಿಸಿಕೊಂಡಿದೆ. ರಾಜಸ್ಥಾನ್ ರಾಯಲ್ಸ್ ತಂಡದ ಅಜಿತ್ ಚಂಡಿಲಾ, ಅಂಕಿತ್ ಚೌವ್ಹಾಣ್ ಮತ್ತು ಎಸ್.ಶ್ರೀಶಾಂತ್ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು ಆಯ್ತು, ಬಿಸಿಸಿಐ ಮೂವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದು ಆಯ್ತು. ಮಾಜಿ ಕ್ರಿಕೆಟರ್ ಗಳು ಅಮಾನತು ಸಾಲದು ಆಜೀವ ನಿಷೇಧ ಹೇರಿಬಿಡಿ ಎಂದು ಒತಾಯಿಸುತ್ತಿದ್ದಾರೆ.

ಮ್ಯಾಚ್ ಫಿಕ್ಸಿಂಗ್, ಸ್ಪಾಟ್ ಫಿಕ್ಸಿಂಗ್, ಕೋಡ್ ವರ್ಡ್ ಬ್ರೇಕಿಂಗ್, ಬೆಟ್ಟಿಂಗ್, ಡ್ಯಾನ್ಸಿಂಗ್, ಫ್ಲರ್ಟಿಂಗ್ ಎಲ್ಲದರ ಕೇಂದ್ರ ಬಿಂದುವಾಗಿರುವ ಶ್ರೀಶಾಂತ್ ಇಲ್ಲಿವರೆಗಿನ ತಮ್ಮ ಕ್ರಿಕೆಟ್ ಜೀವನದಲ್ಲಿ ವಿವಾದಗಳ ಕಾರಣಕ್ಕೆ ಹಲವು ಬಾರಿ ಹೆಡ್ ಲೈನ್ ಅಲಂಕರಿಸಿದ್ದಾರೆ. ಭಾರತೀಯ ಕ್ರಿಕೆಟ್ ತಂಡದಿಂದ ಹೊರಬಿದ್ದ ಮೇಲೆ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ನೆಲೆ ಕಂಡುಕೊಂಡ ಶ್ರೀಶಾಂತ್ ಈಗ ಮತ್ತೆ ವಿವಾದಕ್ಕೆ ಈಡಾಗಿದ್ದಾರೆ. ಶ್ರೀಶಾಂತ್ ವಿವಾದಗಳತ್ತ ಒಂದು ಹಿನ್ನೋಟ ಇಲ್ಲಿದೆ....

ಶ್ರೀಶಾಂತ್ ಕೆರಿಯರ್ ರೀ ಕ್ಯಾಪ್

2006ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಮಾಡಿದ್ದ ಭಾರತ ತಂಡದ ಪ್ರಮುಖ ವೇಗಿಯಾಗಿದ್ದ ಶ್ರೀಶಾಂತ್ ಅವರು ಬ್ಯಾಟ್ಸ್ ಮನ್ ಹಶೀಂ ಅಮ್ಲಾ ವಿರುದ್ಧ ಹರಿಹಾಯ್ದಿದ್ದರು. ಜೋಹಾನ್ಸ್ ಬರ್ಗ್ ಟೆಸ್ಟ್ ಪಂದ್ಯದಲ್ಲಿ ಸಭ್ಯರ ಆಟದಲ್ಲಿ ಶ್ರೀಶಾಂತ್ ನಡೆದುಕೊಂಡ ರೀತಿ ರೆಫ್ರಿ ಕೆಂಗಣ್ಣಿಗೆ ಬಿದ್ದು ಸಂಭಾವನೆಯ ಶೇ 30ರಷ್ಟು ಮೊತ್ತ ತೆತ್ತಿದ್ದರು.

ಶ್ರೀಶಾಂತ್ ಕೆರಿಯರ್ ರೀ ಕ್ಯಾಪ್

2007ರಲ್ಲಿ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿದ್ದಾಗ ಟ್ರೆಂಟ್ ಬ್ರಿಡ್ಜ್ ನಲ್ಲಿ ಐಸಿಸಿ ನಿಯಮ 2.4 ಮುರಿದಿದ್ದರು. ಎದುರಾಳಿ ಆಟಗಾರನಿಗೆ ಬೇಕೆಂತಲೇ ಮೈಕೈ ತಾಗಿಸಿ ಆಟಕ್ಕೆ ಅಡ್ಡಿ ಉಂಟುಮಾಡಿದ್ದರು. ಮೈಕಲ್ ವಾಗನ್ ದೂರು ನೀಡಿದ ಮೇಲೆ ರೆಫ್ರಿ ರಂಜನ್ ಮದುಗಲೆ ಮುಂದೆ ನಿಂತು ಶ್ರೀ ಕ್ಷಮೆಯಾಚಿಸಿದರು.

ಶ್ರೀಶಾಂತ್ ಕೆರಿಯರ್ ರೀ ಕ್ಯಾಪ್

ಆದರೆ, ಎಚ್ಚೆತ್ತುಕೊಳ್ಳದ ಶ್ರೀಶಾಂತ್ ಕೆವಿನ್ ಪೀಟರ್ಸನ್ ಗೆ ಬೀಮರ್ ಎಸೆದು ಇಂಗ್ಲೆಂಡ್ ಮಾಧ್ಯಮಗಳ ಕೆಂಗಣ್ಣಿಗೆ ಗುರಿಯಾದರು. ಮಾಜಿ ನಾಯಕ ಮೈಕಲ್ ಅಥರ್ಟನ್ ಅವರು ಶ್ರೀಶಾಂತ್ ನಿಷೇಧಕ್ಕೆ ಆಗ್ರಹಿಸಿದರು. ಕೆಪಿ ಔಟಾದಾಗ ಶ್ರೀಶಾಂತ್ ಕುಣಿತ ಹೇಗಿತ್ತು ಚಿತ್ರ ನೋಡಿ

ಶ್ರೀಶಾಂತ್ ಕೆರಿಯರ್ ರೀ ಕ್ಯಾಪ್

2007ರ ನಂತರ ಆಸ್ಟ್ರೇಲಿಯಾ ಮೇಲೆ ಮುಗಿಬಿದ್ದ ಶ್ರೀಶಾಂತ್ ನಿರಂತರವಾಗಿ ಕಾದಾಡಿದರು. ಆಂಡ್ರ್ಯೂ ಸೈಮಂಡ್ ಜೊತೆ ಗುದ್ದಾಟ ಕುಖ್ಯಾತಿಯಾಯಿತು. 12 ನೇ ಆಟಗಾರನಾಗಿ ಡ್ರಿಂಕ್ಸ್ ತೆಗೆದುಕೊಂಡು ಮೈದಾನಕ್ಕೆ ಬಂದಿದ್ದ ಶ್ರೀಶಾಂತ್, ಸೈಮಂಡ್ ರೇಗಿಸಿದ್ದರು.

ಶ್ರೀಶಾಂತ್ ಕೆರಿಯರ್ ರೀ ಕ್ಯಾಪ್

ಆಸ್ಟ್ರೇಲಿಯಾ ತಂಡದ ಭಾರತ ಪ್ರವಾಸದ ತುಂಬಾ ಶ್ರೀಶಾಂತ್ ವಿವಾದಗಳು ಹೆಡ್ ಲೈನ್ ಆಕ್ರಮಿಸಿದ್ದವು. ಸೈಮಂಡ್ ಟಾರ್ಗೆಟ್ ಮಾಡಿ ವಿಕೆಟ್ ಕಿತ್ತಾಗ ಹುಚ್ಚಾಟ ಹೆಚ್ಚಾದಂತೆ ಶ್ರೀ ಆಡುತ್ತಿದ್ದರು.

ಶ್ರೀಶಾಂತ್ ಕೆರಿಯರ್ ರೀ ಕ್ಯಾಪ್

ಮನರಂಜನೆ + ಕ್ರಿಕೆಟ್ ಎಂದು ಆರಂಭವಾದ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಹರ್ಭಜನ್ ಸಿಂಗ್ ಅವರು ಅಂದು ಕಿಂಗ್ಸ್ XI ಪರ ಆಡುತ್ತಿದ್ದ ಶ್ರೀಶಾಂತ್ ಗೆ ಕಪಾಳಮೋಕ್ಷ ಮಾಡಿದ್ದು ಏಕೆ? ಏನು? ಎಂಬುದು ಇನ್ನೂ ಚರ್ಚೆಯ ವಿಷಯವಾಗಿದೆ.

ಶ್ರೀಶಾಂತ್ ಕೆರಿಯರ್ ರೀ ಕ್ಯಾಪ್

ಪ್ರಥಮ ದರ್ಜೆ ಕ್ರಿಕೆಟ್ ನಲ್ಲೂ ಕಿರಿಕ್: ಮುಂಬೈ ಬೌಲರ್ ಧವಳ್ ಕುಲಕರ್ಣಿ ಜೊತೆಗೆ ಇರಾನಿ ಕಪ್ ನಲ್ಲಿ ಕಿತ್ತಾಟವಾಗಿ ಶೇ 60 ರಷ್ಟು ಸಂಭಾವನೆ ಮೊತ್ತ ಕಳೆದುಕೊಂಡಿದ್ದ ಶ್ರೀಶಾಂತ್ ಗೆ ಬಿಸಿಸಿಐ ಫೈನಲ್ ವಾರ್ನಿಂಗ್ ನೀಡಿತ್ತು.

ಶ್ರೀಶಾಂತ್ ಕೆರಿಯರ್ ರೀ ಕ್ಯಾಪ್

ಬೆಂಗಳೂರಿನಲ್ಲಿ ಕಾಲೇಜು ಮುಗಿಸಿ ಬ್ಯಾಟಿಂಗ್ ಬೌಲಿಂಗ್ ಅಕ್ಷರಾಭ್ಯಸ ಮಾಡಿದ್ದ ಶ್ರೀಶಾಂತ್ ಯಾವ ರಾಜ್ಯದಲ್ಲಿ ಆಡಬೇಕು ಎಂಬ ಗೊಂದಲವೂ ಇತ್ತು.

ಶ್ರೀಶಾಂತ್ ಹುಚ್ಚಾಟ ಕಂಡು ಕೇರಳ ಕ್ರಿಕೆಟ್ ಮಂಡಳಿ ಕೂಡಾ ಆಕ್ಷೇಪ ವ್ಯಕ್ತಪಡಿಸಿ ನೊಟಿಸ್ ಜಾರಿ ಮಾಡಿತ್ತು. ನಾಯಕ ಪಟ್ಟದಿಂದ ಕೆಳಗಿಳಿಸಿ ಸಾಧಾರಣ ಆಟಗಾರನಾಗಿ 25 ಮಂದಿ ಸದಸ್ಯರ ತಂಡದಲ್ಲಿ ಶ್ರೀ ಉಳಿದಿದ್ದರು.

ಶ್ರೀಶಾಂತ್ ಕೆರಿಯರ್ ರೀ ಕ್ಯಾಪ್

2006ರಲ್ಲಿ ದಕ್ಷಿಣ ಆಫ್ರಿಕಾ ಆಟಗಾರನೊಂದಿಗೆ ಅಸಭ್ಯ, ಅವಹೇಳನಕಾರಿ ಮಾತುಕತೆ ನಡೆಸಿದ್ದು ಯೂಟ್ಯೂಬ್ ನಲ್ಲೂ ಜನಪ್ರಿಯತೆ ಗಳಿಸಿತ್ತು. ಡ್ಯಾನ್ಸಿಂಗ್ ಮೂಲಕ ಕೂಡಾ ಒಂದಷ್ಟು ಕಾಲ ನಟಿ ಮಣಿಯರ ಸುತ್ತಾ ಸುತ್ತಿದ್ದು ಇದೆ

ಶ್ರೀಶಾಂತ್ ಕೆರಿಯರ್ ರೀ ಕ್ಯಾಪ್

ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ನಿಧಾನಗತಿ ಬೌಲಿಂಗ್ ಎಸೆತ ದಂಡ ಅನುಭವಿಸಿದ ಧೋನಿ ಕೂಡಾ ಇದಕ್ಕೆ ಶ್ರೀಶಾಂತ್ ನೇರ ಕಾರಣ ಎಂದು ದೂಷಿಸಿದರು. ಶ್ರೀಶಾಂತ್ ಆಯ್ಕೆ ಬಗ್ಗೆ ಧೋನಿ ಎಂದಿಗೂ ಸಮಾಧಾನ ವ್ಯಕ್ತಪಡಿಸಿದ್ದಿಲ್ಲ

ಶ್ರೀಶಾಂತ್ ಕೆರಿಯರ್ ರೀ ಕ್ಯಾಪ್

ದಕ್ಷಿಣ ಆಫ್ರಿಕಾ ನಾಯಕ ಗ್ರೇಹಂ ಸ್ಮಿತ್, ಪಾಲ್ ಹ್ಯಾರಿಸ್ ಸೇರಿದಂತೆ ಹಲವು ಆಟಗಾರರು ಶ್ರೀಶಾಂತ್ ಬಾಯಿಗೆ ಸಿಕ್ಕಿದ್ದಾರೆ.

ಶ್ರೀಶಾಂತ್ ಕೆರಿಯರ್ ರೀ ಕ್ಯಾಪ್

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಶ್ರೀಶಾಂತ್ ಭಂಗಿ

ಶ್ರೀಶಾಂತ್ ಕೆರಿಯರ್ ರೀ ಕ್ಯಾಪ್

ದಕ್ಷಿಣ ಆಫ್ರಿಕಾದಲ್ಲಿ ಜಾವಗಲ್ ಶ್ರೀನಾಥ್ ಹಾಗೂ ವೆಂಕಟೇಶ್ ಪ್ರಸಾದ್ ನಂತರ ಐದು ಅಥವಾ ಹೆಚ್ಚು ವಿಕೆಟ್ ಪಡೆದ ಆಟಗಾರ ಎನಿಸಿ 40 ರನ್ನಿತ್ತು 5 ವಿಕೆಟ್ ಕಬಳಿಸಿದ ಸಾಧನೆ ಕೂಡಾ ಶ್ರೀಶಾಂತ್ ಮಾಡಿದರು.

ಶ್ರೀಶಾಂತ್ ಕೆರಿಯರ್ ರೀ ಕ್ಯಾಪ್

ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ತಂಡ

ಶ್ರೀಶಾಂತ್ ಕೆರಿಯರ್ ರೀ ಕ್ಯಾಪ್

ನಾನಿರುವುದೇ ಹೀಗೆ

ಶ್ರೀಶಾಂತ್ ಕೆರಿಯರ್ ರೀ ಕ್ಯಾಪ್

ಅಭ್ಯಾಸ ಸಂದರ್ಭದಲ್ಲಿ ಶ್ರೀಶಾಂತ್

ಶ್ರೀಶಾಂತ್ ಕೆರಿಯರ್ ರೀ ಕ್ಯಾಪ್

ಬೌಲಿಂಗ್, ಸ್ಲೇಡ್ಜಿಂಗ್ ಅಷ್ಟೇ ಅಲ್ಲ ಬ್ಯಾಟ್ ಕೂಡಾ ಬೀಸಬಲ್ಲೆ


English summary
The Board of Control for Cricket in India (BCCI) acted quickly and suspended all three cricketers including Sreesanth arrested for spot-fixing probe on Thursday. Here is re cap of how the controversies have have been an integral part of Sreesanth's cricket career so far.
ಅಭಿಪ್ರಾಯ ಬರೆಯಿರಿ