Englishहिन्दीമലയാളംதமிழ்తెలుగు

ಚಾಂಪಿಯನ್ಸ್ ಟ್ರೋಫಿ : ಯುವಿ, ಗೌತಿಗೆ ಕೊಕ್

Posted by:
Published: Saturday, May 4, 2013, 17:11 [IST]
 

ಚಾಂಪಿಯನ್ಸ್ ಟ್ರೋಫಿ : ಯುವಿ, ಗೌತಿಗೆ ಕೊಕ್
 

ಮುಂಬೈ, ಮೇ 4 : ಇಂಗ್ಲೆಂಡಿನಲ್ಲಿ ಮುಂದಿನ ತಿಂಗಳು ಜೂನ್ 6ರಿಂದ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ 2013 ಟೂರ್ನಾಮೆಂಟಿಗೆ ಆಯ್ಕೆ ಮಾಡಿರುವ ಭಾರತದ ತಂಡದಿಂದ ಫಾರ್ಮ್‌ನಲ್ಲಿಲ್ಲದ ಯುವರಾಜ್ ಸಿಂಗ್ ಮತ್ತು ಅನಗತ್ಯ ವಿವಾದಗಳನ್ನು ಸೃಷ್ಟಿಸುತ್ತಿರುವ ಗೌತಮ್ ಗಂಭೀರ್ ಅವರನ್ನು ಕೈಬಿಡಲಾಗಿದೆ.

ಐಪಿಎಲ್ 6ನಲ್ಲಿ ಮಿಂಚುತ್ತಿರುವ ಕರ್ನಾಟಕದ ವೇಗದ ಬೌಲರ್ ವಿನಯ್ ಕುಮಾರ್, ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್, ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ, ಫಾರ್ಮಿಗೆ ಮರಳಿರುವ ವೇಗದ ಬೌಲರ್ ಇರ್ಫಾನ್ ಪಠಾಣ್ ಅವರನ್ನು ತಂಡಕ್ಕೆ ಕರೆಯಿಸಿಕೊಳ್ಳಲಾಗಿದೆ. ಮುರಳಿ ವಿಜಯ್ ಮತ್ತು ಶಿಖರ್ ಧವನ್ ಅವರನ್ನು ಆರಂಭಿಕ ಬ್ಯಾಟ್ಸ್‌ಮನ್ ಆಗಿ ಆಯ್ಕೆ ಮಾಡಲಾಗಿದೆ.

ಇಂಗ್ಲೆಂಡ್ ವಿರುದ್ಧದ ಭಾರತದಲ್ಲಿನ ಏಕದಿನ ಸರಣಿಯಲ್ಲಿ 5 ಪಂದ್ಯಗಳಲ್ಲಿ ಕೇವಲ 127 ರನ್ ಗಳಿಸಿದ್ದ ಗೌತಮ್ ಗಂಭೀರ್ ಅವರನ್ನು ಸಹಜವಾಗಿ ತಂಡದಿಂದ ಹೊರಗಿಡಲಾಗಿದೆ. ಹಾಗೆಯೆ, ಅಶೋಕ್ ದಿಂಡಾ, ಅಜಿಂಕ್ಯಾ ರಹಾನೆ, ಶಾಮಿ ಅಹ್ಮದ್ ಮತ್ತು ಚೇತೇಶ್ವರ್ ಪೂಜಾರಾ ಅವರನ್ನು ಕೂಡ ತಂಡದಿಂದ ಕೈಬಿಡಲಾಗಿದೆ.

ಐಪಿಎಲ್‍‌ನಲ್ಲಿ ಮುಂಬೈ ಇಂಡಿಯನ್ ಪರ ಆಡುತ್ತಿರುವ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಅವರ ಅದ್ಭುತ ಫಾರಂ ಅವರನ್ನು ತಂಡಕ್ಕೆ ಎಳೆದುಕೊಂಡುಬಂದಿದೆ. ವಿನಯ್ ಕುಮಾರ್ ಕೂಡ ಅತ್ಯುತ್ತಮ ಲಯ ಕಂಡುಕೊಂಡಿದ್ದು, ಹೆಚ್ಚು ವಿಕೆಟ್ ಪಡೆದ ಟಾಪ್ 5 ಬೌಲರ್ ಗಳಲ್ಲಿ ಒಬ್ಬರಾಗಿದ್ದಾರೆ.

ಭಾರತ ತಂಡ ಹೀಗಿದೆ : ಮಹೇಂದ್ರ ಸಿಂಗ್ ಧೋನಿ (ಕ್ಯಾ), ಶಿಖರ್ ಧವನ್, ವಿರಾಟ್ ಕೋಹ್ಲಿ, ಸುರೇಶ್ ರೈನಾ, ದಿನೇಶ್ ಕಾರ್ತಿಕ್, ಮುರಳಿ ವಿಜಯ್, ರೋಹಿತ್ ಶರ್ಮಾ, ರವೀಂದ್ರ ಜಡೇಜಾ, ಆರ್ ಅಶ್ವಿನ್, ಇರ್ಫಾನ್ ಪಠಾಣ್, ಉಮೇಶ್ ಯಾದವ್, ಭುವನೇಶ್ವರ್ ಕುಮಾರ್, ಇಶಾಂತ್ ಶರ್ಮಾ, ಅಮಿತ್ ಮಿಶ್ರಾ ಮತ್ತು ಆರ್ ವಿನಯ್ ಕುಮಾರ್.

English summary
Yuvraj Singh and Gautam Gambhir have been dropped from Indian team for the Champions Trophy 2013 to be held in England next month from June 6. Karnataka pacer Vinay Kumar, Dinesh Karthik, Amit Mishra, Irfan Pathan have been recalled.
ಅಭಿಪ್ರಾಯ ಬರೆಯಿರಿ