Englishहिन्दीമലയാളംதமிழ்తెలుగు

ಕ್ರಿಸ್ ಗೇಲ್ ಏನೇನು ದಾಖಲೆ ಮುರಿದ ಗೊತ್ತಾ?

Posted by:
Published: Wednesday, April 24, 2013, 12:38 [IST]
 

ಬೆಂಗಳೂರು, ಏ.24: ಜಮೈಕಾದ ದೈತ್ಯ ಕ್ರಿಸ್ ಗೇಲ್ ಬಿರುಗಾಳಿಗೆ ಪುಣೆ ವಾರಿಯರ್ಸ್ ಬೆದರಿ ಬೆಂಡಾಗಿ ಹೋದರು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿದ್ದ 30 ಸಾವಿರಕ್ಕೂ ಅಧಿಕ ಸಂಖ್ಯೆಯ ಪ್ರೇಕ್ಷಕರು ಗೇಲ್ ಆಟ ನೋಡಿ ಹುಚ್ಚೆದ್ದು ಕುಣಿದಾಡಿದರು. ಚೀಯರ್ ಲೀಡರ್ಸ್ ಹುಡುಗಿಯರಿಗಂತೂ ಸುಸ್ತೋ ಸುಸ್ತು.

66 ಎಸೆತದಲ್ಲಿ 175 ರನ್ ಚೆಚ್ಚಿದ ವಿಂಡೀಸ್ ನ ಆಟಗಾರನನ್ನು ಹೊಂದಿರುವ ಹೆಮ್ಮೆಯಿಂದ ರಾಯಲ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಲೀಕ ವಿಜಯ್ ಮಲ್ಯ ಸಂತೋಷದಿಂದ ನಲಿದಾಡಿದ್ದಾರೆ. ಪುಣೆ ವಾರಿಯರ್ಸ್ ತಂಡವನ್ನು 130 ರನ್ ಅಂತರದಿಂದ ಸೋಲಿಸಿದ ಆರ್ ಸಿಬಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಸ್ಕೋರ್ ಕಾರ್ಡ್ ನೋಡಿ


ಗೇಲ್ 17 ಸಿಕ್ಸ್, 13 ಬೌಂಡರಿ ಬಂದಿದ್ದು 265.15 ಸ್ಟ್ರೈಕ್ ರೇಟ್ ನಂತೆ ಇದರ ಜೊತೆಗೆ 15 ಚೆಂಡು ಡಿಫೆನ್ಸ್ ಮಾಡಿದ್ದು ವಿಶೇಷ. ಸಾಮಾಜಿಕ ಜಾಲ ತಾಣಗಳಲ್ಲಿ ಗೇಲ್ ನದ್ದೇ ಸುದ್ದಿ, ವಿಶ್ವದ ಎಲ್ಲಾ ಕ್ರಿಕೆಟರ್ ಗಳು ಗೇಲ್ ಗೆ ಅಭಿನಂದನೆ ಸಲ್ಲಿಸಿದ್ದಾರೆ.

ಗೇಲ್ ಮುರಿದ ದಾಖಲೆಗಳ ಪಟ್ಟಿ ಇಂತಿದೆ:
* ಐಪಿಎಲ್ ಹಾಗೂ ಟಿ20 ಇತಿಹಾಸದಲ್ಲೇ ಅತಿ ವೇಗದ ಶತಕ ದಾಖಲೆ. 30 ಎಸೆತದಲ್ಲಿ 100 ರನ್
* ಔಟಾಗದೆ 175 ರನ್ ಐಪಿಎಲ್ ಹಾಗೂ ಟಿ20 ಮಾದರಿಯಲ್ಲಿ ಅತಿ ಹೆಚ್ಚಿನ ವೈಯಕ್ತಿಕ ಸ್ಕೋರ್
* ಐಪಿಎಲ್ ನಲ್ಲಿ ದಾಖಲೆಯಾಗಿ ಉಳಿದಿದ್ದ ಬ್ರೆಂಡನ್ ಮೆಕಲಮ್ 158 ನಾಟೌಟ್ ದಾಖಲೆ ಧೂಳಿಪಟ
* ವಿಶ್ವ ಕ್ರಿಕೆಟ್ ನ ಎಲ್ಲಾ ಪ್ರಕಾರಗಳಲ್ಲೂ ಅತಿ ವೇಗದ ಶತಕದ ದಾಖಲೆ
* ಐಪಿಎಲ್ ನಲ್ಲಿ ಅತಿವೇಗದ ಅರ್ಧಶತಕ. 17 ಎಸೆತದಲ್ಲಿ 50 ರನ್
* ಟಿ20 ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಗೇಲ್, 17 ಸಿಕ್ಸರ್
* ಐಪಿಎಲ್ ಟೂರ್ನಿಯಲ್ಲಿ ಒಟ್ಟಾರೆ 150 ಸಿಕ್ಸ್ ಸಿಡಿಸಿರುವ ಏಕೈಕ ಆಟಗಾರ ಗೇಲ್
* ಐಪಿಎಲ್ ನಲ್ಲಿ ಅತಿ ವೇಗದ 150 ರನ್ ಕೇವಲ 53 ಎಸೆತ
* ಐಪಿಎಲ್ 6: ಅತಿ ದೂರಕ್ಕೆ ಸಿಕ್ಸ್ ಚೆಂಡು ಕಳಿಸಿದ್ದು ಗೇಲ್, 119 ಮೀಟರ್ಸ್
* ಐಪಿಎಲ್ ಹಾಗೂ ಟಿ20 ಕ್ರಿಕೆಟ್ ನಲ್ಲಿ ಅತಿ ಹೆಚ್ಚು ತಂಡದ ಮೊತ್ತ 20 ಓವರ್ ಗಳಲ್ಲಿ 263/5
* ಆರ್ ಸಿಬಿ ತಂಡದ 21 ಸಿಕ್ಸ್ ಕೂಡಾ ಹೊಸ ಟಿ20 ದಾಖಲೆ
* ದಿಲ್ಶನ್ ಹಾಗೂ ಗೇಲ್ ಜೊತೆಯಾಟ 167 ರನ್ ಆರ್ ಸಿಬಿ ಮೊದಲ ವಿಕೆಟ್ ದಾಖಲೆ
* ಆರ್ ಸಿಬಿ 7.5 ಓವರ್ ಗಳಲ್ಲಿ 100 ರನ್ ಸಿಡಿಸಿದ್ದು ದಾಖಲೆ
ದಟ್ಸ್ ಕ್ರಿಕೆಟ್

English summary
Chris Gayle shredded the record books on Tuesday evening at M Chinnaswamy Stadium. Gayle's sensational 66-ball 175 not out for Royal Challengers Bangalore against Pune Warriors in IPL 2013 will go down as one of the greatest knocks in cricket history.
ಅಭಿಪ್ರಾಯ ಬರೆಯಿರಿ