Englishहिन्दीമലയാളംதமிழ்తెలుగు

ದಾಖಲೆಗಳ ಧೂಳಿಪಟ ಮಾಡಿದ ದೈತ್ಯ ಗೇಲ್

Posted by:
Updated: Wednesday, April 24, 2013, 12:45 [IST]
 

ಬೆಂಗಳೂರು, ಏ.23: ಸಿಕ್ಸರ್ ಕಿಂಗ್ ಜಮೈಕಾದ ಜೈಂಟ್ ಕ್ರಿಸ್ ಗೇಲ್ ಅಬ್ಬರಕ್ಕೆ ಮಳೆರಾಯ ಕೂಡಾ ಬೆದರಿ ಬೆಂಡಾಗಿಬಿಟ್ಟಿದ್ದಾನೆ. ಸಿಡಿಲ ಹೊಡೆತಗಳ ಮೂಲಕ ಗೇಲ್ ಪುಣೆ ವಾರಿಯರ್ಸ್ ತಂಡದ ಚರಮಗೀತೆ ಹಾಡಿದ್ದಾರೆ.

ಗೇಲ್ ಹೊಡೆದ ಶತಕ ಕ್ರಿಕೆಟ್ ನ ಎಲ್ಲಾ ಪ್ರಕಾರದಲ್ಲೂ ಅತಿ ವೇಗದ ಶತಕವಾಗಿದೆ. 30 ಎಸೆತದಲ್ಲಿ ಗೇಲ್ ಶತಕ ಸಿಡಿಸಿದ್ದಾರೆ. ಸ್ಕೋರ್ ಕಾರ್ಡ್ ನೋಡಿ

ಈ ಮುಂಚೆ ಯೂಸುಫ್ ಪಠಾಣ್ 37 ಎಸೆತದಲ್ಲಿ ಶತಕ ಗಳಿಸಿದರೂ ಮುಂಬೈ ವಿರುದ್ಧ ರಾಜಸ್ತಾನ ಸೋತಿತ್ತು. ಅದೇ ರೀತಿ ಟ್ವೆಂಟಿ 20 ಪಂದ್ಯಗಳ ಪೈಕಿ ಆಸ್ಟ್ರೇಲಿಯಾದ ಆಂಡ್ರ್ಯೂ ಸೈಮಂಡ್ಸ್ ಇಂಗ್ಲೀಷ್ ಕೌಂಟಿಯಲ್ಲಿ ಕೆಂಟ್ ತಂಡದ ಪರ ಕೇವಲ 34 ಎಸೆತದಲ್ಲೇ ಶತಕ ಗಳಿಸಿದ ದಾಖಲೆಯಾಗಿತ್ತು. ಕ್ರಿಸ್ ಗೇಲ್ ಮುರಿದ ದಾಖಲೆಗಳ ಪಟ್ಟಿ

 ಕ್ರಿಸ್ ಗೇಲ್ ರನ್ನು ಕೆಣಕಿದ್ದು ಯಾರೋ ಗೊತ್ತಿಲ್ಲ. ಗೇಲ್ ನೆಚ್ಚಿನ ಚಿಕನ್ ಕೊಡಲಿಲ್ಲವಾ? ಅಥವಾ ಕಳೆದ ಪಂದ್ಯದಲ್ಲಿ ದ್ರಾವಿಡ್ ರೀತಿ ಆಡಿದೆ ಯಾರಾದರೂ ಅಣಕಿಸಿದ್ರಾ? ಗೊತ್ತಿಲ್ಲ.. ಕ್ರಿಸ್ ಗೇಲ್ ಅಬ್ಬರಕ್ಕೆ ಪುಣೆ ತಂಡವಷ್ಟೇ ಅಲ್ಲ ಬೆಂಗಳೂರಿಗರೂ ಬೆಚ್ಚಿದ್ದಾರೆ. ಗೇಲ್ ಆಡುವಾಗ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತ ಮುತ್ತಾ ಹೆಲ್ಮೆಟ್ ಇಲ್ಲದೆ ವಾಹನ ಸವಾರಿ ಮಾಡುವುದು ಎಷ್ಟು ಕಷ್ಟ ಎಂಬುದು ಇಂದು ಅರ್ಥ ವಾಗಿದೆ.

ಗೇಲ್ ದಾಖಲೆ: 30 ಎಸೆತದಲ್ಲಿ ಶತಕ ಗಳಿಸಿದ್ದು ಎಲ್ಲಾ ಬಗೆಯ ಟ್ವೆಂಟಿ20 ಕ್ರಿಕೆಟ್ ಪಂದ್ಯಗಳಲ್ಲಿ ಅತಿ ವೇಗದ ಶತಕವಾಗಿದೆ. ಅಲ್ಲದೆ ನಿಗದಿತ ಓವರ್ ಗಳ ಪಂದ್ಯಗಳ ಲೆಕ್ಕಾಚಾರದಲ್ಲೂ ಇದೇ ಅತಿ ವೇಗದ ಶತಕವಾಗಿದೆ. ಮುಂದಿನದ್ದು ಚಿತ್ರ ಸರಣಿಯಲ್ಲಿ ನೋಡಿ

ಗೇಲ್ ಆರ್ಭಟಕ್ಕೆ ಪುಣೆ ತತ್ತರ

* ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅತಿ ಹೆಚ್ಚು ಮೊತ್ತದ ಗಡಿಯನ್ನು ದಾಟಿದೆ. ಈ ಮುಂಚೆ 2010ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 246/5 ರನ್ ಹೊಡೆದಿತ್ತು.

ಗೇಲ್ ಆರ್ಭಟಕ್ಕೆ ಪುಣೆ ತತ್ತರ

ಐಪಿಎಲ್ ನಲ್ಲಿ ಅತಿ ಹೆಚ್ಚಿನ ಸ್ಟ್ರೈಕ್ ರೇಟ್ ದಾಖಲೆ ಕೂಡಾ ಕ್ರಿಸ್ ಗೇಲ್ ಹೆಸರಿಗೆ ಬಂದಿದೆ. 267.69 ಸ್ಟ್ರೈಕ್ ರೇಟ್. ಈ ಮುಂಚೆ ಸೆಹ್ವಾಗ್ 167.31 ಸ್ಟ್ರೈಕ್ ರೇಟ್ ಅತಿ ಹೆಚ್ಚು ಎನಿಸಿತ್ತು.

ಗೇಲ್ ಆರ್ಭಟಕ್ಕೆ ಪುಣೆ ತತ್ತರ

ಈ ಪಂದ್ಯಕ್ಕೂ ಮುನ್ನ ಕ್ರಿಸ್ ಗೇಲ್ ಅವರ 128 ನಾಟೌಟ್ ವೈಯಕ್ತಿಕ ಸ್ಕೋರ್ ಆಗಿತ್ತು. ಈ ಪಂದ್ಯದಲ್ಲಿ 66 ಎಸೆತದಲ್ಲಿ 175 ರನ್ (13 ಬೌಂಡರಿ, 17 ಸಿಕ್ಸರ್) 15 ಎಸೆತಗಳನ್ನು ಕುಟ್ಟಿದ್ದರು ಎಂಬುದು ವಿಶೇಷ.

ಗೇಲ್ ಆರ್ಭಟಕ್ಕೆ ಪುಣೆ ತತ್ತರ

* ಮೈದಾನದ ಬಳಿ ಕನ್ನಡ ನಟಿಯರಾದ ಸಂಜನಾ, ಶ್ವೇತಾ ಶ್ರೀವಾಸ್ತವ್, ಮೇಘನಾ ಗಾಂವಕರ್.
* ಉಳಿದಂತೆ ತಿಲಕರತ್ನೆ ದಿಲ್ಶನ್ 33 ರನ್, ಕೊಹ್ಲಿ 11, ಎಬಿ ಡಿವೆಯರ್ಸ್ 31 ರನ್(8 ಎಸೆತ) ಚೆಚ್ಚಿದರು.

ಗೇಲ್ ಆರ್ಭಟಕ್ಕೆ ಪುಣೆ ತತ್ತರ

ಪ್ರಸ್ತುತ ಐಪಿಎಲ್ ನಲ್ಲಿ ಗೇಲ್ ತಲೆಗೆ ಅರೇಂಜ್ ಕ್ಯಾಪ್ ಬಂದು ಕೂತಿದೆ. ನಾಯಕ ವಿರಾಟ್ ಕೊಹ್ಲಿ ತಲೆ ಮೇಲೆ ಇತ್ತು

ಗೇಲ್ ಆರ್ಭಟಕ್ಕೆ ಪುಣೆ ತತ್ತರ

ಎಲ್ಲಾ ಬಗೆಯ ಕ್ರಿಕೆಟ್ ನಲ್ಲೂ ಇದು ತಂಡದ ಅತ್ಯಧಿಕ ಮೊತ್ತವಾಗಿದೆ. ಆರ್ ಸಿಬಿ 263/5, ಕೀನ್ಯಾ ವಿರುದ್ಧ ಶ್ರೀಲಂಕಾ ತಂಡ 260/6 ರನ್ ಗಳಿಸಿತ್ತು.

ಗೇಲ್ ಆರ್ಭಟಕ್ಕೆ ಪುಣೆ ತತ್ತರ

ಪುಣೆ ಪರ ಮಿಚೆಲ್ ಮಾರ್ಷ್ 3 ಓವರ್ ನಲ್ಲಿ 56 ರನ್ ಚೆಚ್ಚಿಸಿಕೊಂಡು 1 ವಿಕೆಟ್ ಕಿತ್ತರು. ದಿಂಡಾ 4 ಓವರ್ ನಲ್ಲಿ 48 ರನ್, ಫಿಂಚ್ 1 ಓವರ್ ನಲ್ಲಿ 29 ರನ್ ಹಾಗೂ ಈಶ್ವರ್ ಪಾಂಡೆ 2 ಓವರ್ ಗಳಲ್ಲಿ 33 ರನ್ ತೆತ್ತರು.

ಗೇಲ್ ಆರ್ಭಟಕ್ಕೆ ಪುಣೆ ತತ್ತರ

ಪಂದ್ಯದಲ್ಲಿ ಎರಡು ವಿಕೆಟ್ ಕಿತ್ತ ಗೇಲ್, ಅಂಪೈರ್ ಗೆ ಮನವಿ ಮಾಡಿದ್ದು ಹೀಗೆ

ಗೇಲ್ ಆರ್ಭಟಕ್ಕೆ ಪುಣೆ ತತ್ತರ

ವಿಕೆಟ್ ಬಿದ್ದಾಗ ಸಂಭ್ರಮದಲ್ಲಿ ಗೇಲ್ ಗಂಗ್ನಮ್ ಡ್ಯಾನ್ಸ್

ಗೇಲ್ ಆರ್ಭಟಕ್ಕೆ ಪುಣೆ ತತ್ತರ

ಆರೇಂಜ್ ಕ್ಯಾಪ್ ಧರಿಸಿ ಪಂದ್ಯ ಮುಗಿದಾಗ ಗೇಲ್ ಹೊರಟ್ಟಿದ್ದು ಹೀಗೆ

Story first published:  Tuesday, April 23, 2013, 17:48 [IST]
English summary
Christopher Henry 'Chris' Gayle Jamaican Giant hit fastest hundred in Indian Premier League history. A 30 ball century also fastest in all forms of Cricket. Gayle storm hits Pune warriors on April 23, at KSCA, Bangalore.
ಅಭಿಪ್ರಾಯ ಬರೆಯಿರಿ