Englishहिन्दीമലയാളംதமிழ்తెలుగు

ಚಿತ್ರಗಳಲ್ಲಿ : ರಾಯಲ್ಸ್ ಕದನದಲ್ಲಿ ಬೆಂಗಳೂರಿಗೆ ಜಯ

Posted by:
Updated: Monday, April 22, 2013, 16:42 [IST]
 
ಬೆಂಗಳೂರು, ಏ.21: ಐಪಿಎಲ್‌ನ 27ನೆ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ 7ವಿಕೆಟ್‌ಗಳ ಜಯ ಗಳಿಸಿದೆ. ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ ತಂಡವನ್ನು 19.4 ಓವರ್‌ಗಳಲ್ಲಿ 117 ರನ್‌ಗಳಿಗೆ ನಿಯಂತ್ರಿಸಿದ್ದ ರಾಯಲ್ ಚಾಲೆಂಜರ್ಸ್ ತಂಡ ಇನ್ನೂ 13 ಎಸೆತಗಳು ಬಾಕಿ ಉಳಿದಿರುವಂತೆ 3 ವಿಕೆಟ್ ನಷ್ಟದಲ್ಲಿ 123 ರನ್ ಪೇರಿಸಿ ಜಯಭೇರಿ ಬಾರಿಸಿತು.

ಗೇಲ್ ಬ್ಯಾಟಿಂಗ್ ಒಂದು ರೀತಿ ದ್ರಾವಿಡ್ ಬ್ಯಾಟಿಂಗ್ ನೆನಪಿಸುವಂತಿದ್ದರೆ, ಬಹು ದಿನಗಳ ನಂತರ ಸೌರಭ್ ತಿವಾರಿ ಸಿಕ್ಸ್ ಎತ್ತಿ ಬ್ಯಾಟಿಂಗ್ ಕಲೆ ತೋರಿಸಿದರು.

ವೆಸ್ಟ್ ಇಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಎಂದಿನಂತೆ ಗುಡುಗದೆ ನಿಧಾನವಾಗಿ ಆಟವಾಡಿ ಔಟಾಗದೆ 49ರನ್ (44ಎ, 4ಬೌ, 1ಸಿ) ಸೇರಿಸಿ ತಂಡದ ಗೆಲುವಿಗೆ ದೊಡ್ಡ ಕೊಡುಗೆ ನೀಡಿದರು. ಇವರೊಂದಿಗೆ ಸೌರಭ್ ತಿವಾರಿ ಔಟಾಗದೆ 25 ರನ್(29ಎ,2ಬೌ, 1ಸಿ) ಸೇರಿಸಿದರು.

ರಾಜಸ್ಥಾನ ರಾಯಲ್ಸ್: 19.4 ಓವರ್‌ಗಳಲ್ಲಿ 117/10
(ದ್ರಾವಿಡ್ 35, ಬಿನ್ನಿ 33, ಹಾಡ್ಜ್ 13, ರಾಮ್‌ಪಾಲ್ 2-19, ಆರ್‌ಪಿಸಿಂಗ್ 3-13, ವಿನಯಕುಮಾರ್ 3-18)
ರಾಯಲ್ ಚಾಲೆಂಜರ್ಸ್ ಬೆಂಗಳೂರು: 17.5 ಓವರ್‌ಗಳಲ್ಲಿ 123/3

(ದಿಲ್ಶನ್ 25, ಗೇಲ್ 49 ನಾಟೌಟ್, ಸೌರಬ್ ತಿವಾರಿ 25 ನಾಟೌಟ್, ವ್ಯಾಟ್ಸನ್ 2-11) ಪೂರ್ಣ ಸ್ಕೋರ್ ಕಾರ್ಡ್ ನೋಡಿ..ಮಿಕ್ಕಿದ್ದು ದೃಶ್ಯಾವಳಿಯಲ್ಲಿ ಕಾಣಿರಿ

ರಾಹುಲ್ ದ್ರಾವಿಡ್ ಪಡೆಗೆ ಸೋಲು

ವಿಜಯ್ ಮಲ್ಯ ಹಾಗೂ ರಾಹುಲ್ ದ್ರಾವಿಡ್ ಹಸ್ತಲಾಘವ, ಕ್ರಿಸ್ ಗೇಲ್ ಹಾಗೂ ವಿರಾಟ್ ಕೊಹ್ಲಿ ಕೂಡಾ ಜೊತೆಗೆ

ರಾಹುಲ್ ದ್ರಾವಿಡ್ ಪಡೆಗೆ ಸೋಲು

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಸೌರಭ್ ತಿವಾರಿ ಭರ್ಜರಿ ಸಿಕ್ಸರ್ ಎತ್ತಿದ್ದು ಹೀಗೆ

ರಾಹುಲ್ ದ್ರಾವಿಡ್ ಪಡೆಗೆ ಸೋಲು

ವಿರಾಟ್ ಕೊಹ್ಲಿ ಜೊತೆ ವಿಜಯೋತ್ಸವದ ಸಂಭ್ರಮದಲ್ಲಿ ಸೌರಭ್ ತಿವಾರಿ

ರಾಹುಲ್ ದ್ರಾವಿಡ್ ಪಡೆಗೆ ಸೋಲು

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಗೆಲುವಿನ ರುವಾರಿ ಕ್ರಿಸ್ ಗೇಲ್ ಹಾಗೂ ತಿವಾರಿ

ರಾಹುಲ್ ದ್ರಾವಿಡ್ ಪಡೆಗೆ ಸೋಲು

ಅರ್ಧಶತಕ ಪೂರೈಸಲು ಸಾಧ್ಯವಾಗದ ಗೇಲ್ ಅಂತಿಮವಾಗಿ ಸಿಕ್ಸ್ ಎತ್ತಿ ಕೈ ಮೇಲಕ್ಕೆತ್ತಿದ್ದು ಹೀಗೆ

ರಾಹುಲ್ ದ್ರಾವಿಡ್ ಪಡೆಗೆ ಸೋಲು

ವಿಜಯ್ ಮಲ್ಯ ಪಡೆದ ತವರು ನೆಲ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸತತ ಐದನೇ ಜಯ..ಅಂಕಪಟ್ಟಿಯಲ್ಲಿ ಸದ್ಯಕ್ಕೆ ಅಗ್ರಸ್ಥಾನ, ಆರೇಂಜ್ ಕ್ಯಾಪ್ ವಿರಾಟ್ ಕೊಹ್ಲಿ ತಲೆಗೆ , ಪರ್ಪಲ್ ಕ್ಯಾಪ್ ವಿನಯ್ ಕುಮಾರ್ ತಲೆಗೆ.. ಹೆಚ್ಚು ಸಿಕ್ಸ್ ಸಿಡಿಸಿರೋದು ಕ್ರಿಸ್ ಗೇಲ್

Story first published:  Sunday, April 21, 2013, 15:08 [IST]
English summary
Royal Challengers Bangalore continued their dominance at home with fifth successive victory, this time over Rajasthan Royals in IPL 2013 on Saturday night (April 20).
ಅಭಿಪ್ರಾಯ ಬರೆಯಿರಿ