Englishहिन्दीമലയാളംதமிழ்తెలుగు

ನಿರಂತರವಾಗಿ ಆಡುವುದು ನನ್ನ ಕರ್ತವ್ಯ : ಸಚಿನ್

Posted by:
Published: Friday, April 19, 2013, 13:36 [IST]
 

ನವದೆಹಲಿ, ಏ.19: ಪತ್ರಕರ್ತರಾಗಿ ನೀವು ನಿಮ್ಮ ಕರ್ತವ್ಯ ಮಾಡುತ್ತಿರುವಿರಿ ನಾನು ಕೂಡಾ ನನ್ನ ಕರ್ತವ್ಯವನ್ನು ಪಾಲಿಸುತ್ತಿದ್ದೇನೆ. ನನ್ನ ನಿವೃತ್ತಿಯ ಬಗ್ಗೆ ಯಾರು ಏನೇ ಹೇಳಲಿ ತನಗೇನು ತೊಂದರೆಯಾಗಿಲ್ಲ. ನಾನು ನನ್ನ ಪಾಲಿನ ಕರ್ತವ್ಯವನ್ನು ನಿರಂತರ ನಿರ್ವಹಿಸುತ್ತಿರುವೆ ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.

ನವದೆಹಲಿ ಗುರುವಾರ(ಏ.17) ಭಾರತದ ಮೊದಲ ಇ-ನ್ಯೂಸ್‌ಪೇಪರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು ತಮ್ಮ ನಿವೃತ್ತಿ ಬಗ್ಗೆ ಬಂದಿರುವ ಊಹಾಪೋಹಗಳ ಬಗ್ಗೆ ವಿವರಿಸಿದರು. 2005ರಿಂದ ನನ್ನ ನಿವೃತ್ತಿಯ ಬಗ್ಗೆ ಅಭಿಪ್ರಾಯ ಕೇಳಿ ಬರುತ್ತಿದೆ. ಆದರೆ ನಾನು ಅಂಥ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸದೆ ಕ್ರಿಕೆಟ್ ವೃತ್ತಿ ಬದುಕನ್ನು ಮುಂದುವರಿಸಿಕೊಂಡು ಬಂದಿರುವೆ. ಇಂಥ ಹೇಳಿಕೆಗಳಿಂದ ತಮ್ಮ ಆಟಕ್ಕೆ ಅಡ್ಡಿಯಾಗಿಲ್ಲ ಎಂದು ಸಚಿನ್ ಹೇಳಿದರು.

ನಿರಂತರವಾಗಿ ಆಡುವುದು ನನ್ನ ಕರ್ತವ್ಯ : ಸಚಿನ್

2011ರ ವಿಶ್ವಕಪ್‌ನಲ್ಲಿ 99ನೆ ಅಂತಾರಾಷ್ಟ್ರೀಯ ಶತಕ ದಾಖಲಿಸಿದ್ದೆ. ಆದರೆ ಆಗ 100ನೆ ಶತಕದ ಬಗ್ಗೆ ಮಾಧ್ಯಮಗಳು ಚಕಾರವೆತ್ತಲಿಲ್ಲ. ಭಾರತ ವಿಶ್ವಕಪ್ ಜಯಿಸಿದ ಬೆನ್ನಲ್ಲೆ ತನ್ನ 100ನೆ ಶತಕದ ಬಗ್ಗೆ ಮಾಧ್ಯಮಗಳು ಕೇಳತೊಡಗಿತು. 100ನೆ ಶತಕ ಬಾರಿಸುವಾಗ ಒತ್ತಡದಲ್ಲಿ ಇದ್ದದ್ದು ನಿಜ. ಆದರೆ, ಒತ್ತಡದಲ್ಲಿ ಆಡುವುದು ನನಗೆ ರೂಢಿಯಿದೆ. ಪತ್ರಿಕೆಗಳಲ್ಲಿ ಬಂದ ಅಭಿಪ್ರಾಯಗಳನ್ನು ತಾನು ಓದುತ್ತಾ ಕುಳಿತರೆ ಆಡುವವರು ಯಾರು ಎಂದು ಸಚಿನ್ ಪ್ರಶ್ನಿಸಿ ನಗೆ ಚೆಲ್ಲಿದರು.

ಮಾಜಿ ನಾಯಕರುಗಳಾದ ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ ಮತ್ತು ವಿವಿಎಸ್ ಲಕ್ಷ್ಮಣ್ ತನ್ನ ಬಗ್ಗೆ ನೀಡಿರುವ ಹೇಳಿಕೆಯ ಬಗ್ಗೆ ಗಮನ ಸೆಳೆದಾಗ 'ಅವರು ನನ್ನ ಬಗ್ಗೆ ಋಣಾತ್ಮವಾಗಿ ಮಾತನಾಡಿಲ್ಲ. ಆದರೆ ಮಾಧ್ಯಮಗಳು ಅವರೆಲ್ಲ ನನ್ನ ಬಗ್ಗೆ ಋಣಾತ್ಮಕ ಅಭಿಪ್ರಾಯ ಹೊಂದಿದ್ದಾರೆ ಎಂದು ತಪ್ಪಾಗಿ ಅರ್ಥೈಸಿಕೊಂಡಿದೆ' ಎಂದು ಸಚಿನ್ ಸ್ಪಷ್ಟಪಡಿಸಿದರು.

ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ ಇದೆ. ಹೆಚ್ಚಿನವರು ಈ ಸ್ವಾತಂತ್ರವನ್ನು ನನ್ನ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ಬಳಸಿಕೊಂಡಿದ್ದಾರೆ. ಕ್ರಿಕೆಟ್ ಆಡಿದವರು ಮತ್ತು ಆಡಿದ ಅನುಭವ ಇಲ್ಲದವರು ನನ್ನ ನಿವೃತ್ತಿ ವಿಚಾರದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಇದರಿಂದ ನನಗೇನು ಆಗಿಲ್ಲ.

ನಮ್ಮ ಮನೆಯಲ್ಲಿ ಕ್ರಿಕೆಟ್‌ನ ಬಗ್ಗೆ ಯಾರೂ ಮಾತನಾಡುವುದಿಲ್ಲ. ಎಲ್ಲರೂ ದಿನನಿತ್ಯದ ಆಗುಹೋಗುಗಳ ಬಗ್ಗೆ ಮಾತನಾಡುತ್ತಾರೆ. ನಾನು ಕ್ರಿಕೆಟ್‌ನ ಬಗ್ಗೆ ಧ್ವನಿಯೆತ್ತುವೆನು. ರಾಜ್ಯಸಭಾ ಸದಸ್ಯನಾಗಿ ಕ್ರಿಕೆಟ್‌ನ ಅಭಿವೃದ್ಧಿಗೆ ಶ್ರಮಿಸಲು ಬಯಸಿರುವೆನು ಎಂದು ಸಚಿನ್ ಹೇಳಿದರು.

English summary
Batting legend Sachin Tendulkar once again quashed speculations about his retirement, saying his job was to play cricket and he will carry on doing that.I will keep playing, says Sachin Tendulkar
ಅಭಿಪ್ರಾಯ ಬರೆಯಿರಿ