Englishहिन्दीമലയാളംதமிழ்తెలుగు

ಐಪಿಎಲ್ 6 : ಸುನೀಲ್ ನರೇನ್ ಹ್ಯಾಟ್ರಿಕ್ ಮ್ಯಾಜಿಕ್

Posted by:
Published: Tuesday, April 16, 2013, 21:44 [IST]
 

ಐಪಿಎಲ್ 6 : ಸುನೀಲ್ ನರೇನ್ ಹ್ಯಾಟ್ರಿಕ್ ಮ್ಯಾಜಿಕ್
 

ಕೋಲ್ಕತ್ತಾ, ಏ.16: ಐಪಿಎಲ್ 6ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ನ ಮಾಂತ್ರಿಕ ಸ್ಪಿನ್ನರ್ ಸುನೀಲ್ ನರೇನ್ ಅದ್ಭುತ ಹ್ಯಾಟ್ರಿಕ್ ಪಡೆದಿದ್ದಾರೆ. ಒಟ್ಟಾರೆ ಎಲ್ಲಾ ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಗಳು ಸೇರಿ 10ನೇ ಹ್ಯಾಟ್ರಿಕ್ ಇದಾಗಿದೆ.

ಮಂಗಳವಾರ ನಡೆದ ಕಿಂಗ್ XI ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಡೇವಿಡ್ ಹಸ್ಸಿ, ಅಜರ್ ಮಹಮ್ಮದ್ ಹಾಗೂ ಗುರು ಕೀರತ್ ಸಿಂಗ್ ವಿಕೆಟ್ ಕಿತ್ತು ಹ್ಯಾಟ್ರಿಕ್ ಪಡೆದ ಮೊದಲ ಬೌಲರ್ ಎಂಬ ಸಾಧನೆಗೆ ಸುನಿಲ್ ಪಾತ್ರರಾದರು.

ಪಂದ್ಯದ 15ನೇ ಓವರ್ ನಲ್ಲಿ ಡೇವಿಡ್ ಅವರು ವಿಕೆಟ್ ಕೀಪರ್ ಮನ್ವಿಂದರ್ ಬಿಸ್ಲಾಗೆ ಕ್ಯಾಚ್ ನೀಡಿ ಔಟಾದರೆ, ಅಜರ್ ಸುನಿಲ್ ಗೆ ಕ್ಯಾಚಿತ್ತು ಪೆವಿಲಿಯನ್ ಗೆ ತೆರಳಿದರು. ಗುರುಕೀರತ್ ಎಸೆತದ ಮರ್ಮ ಅರಿಯದೆ ಬೋಲ್ಡ್ ಆದರು. ಒಟ್ಟಾರೆ ಇದುವರೆವಿಗೂ 8 ಬೌಲರ್ ಗಳು 10 ಬಾರಿ ಹ್ಯಾಟ್ರಿಕ್ ಪಡೆದ ಸಾಧನೆ ಮಾಡಿದ್ದಾರೆ.

ಇಂಡಿಯನ್ ಪ್ರಿಮಿಯರ್ ಲೀಗ್ ನ ಹ್ಯಾಟ್ರಿಕ್ ಸಾಧಕರು:
* ಸುನಿಲ್ ನರೇನ್, ಕೆಕೆಆರ್ (2013)
* ಅಮಿತ್ ಮಿಶ್ರಾ, ಡೆಕ್ಕನ್ ಚಾರ್ಜರ್ಸ್( 2008, 2011)
* ಯುವರಾಜ್ ಸಿಂಗ್, ಕಿಂಗ್ಸ್ XI ಪಂಜಾಬ್ (2009 ರಲ್ಲಿ ಎರಡು ಬಾರಿ)
* ರೋಹಿತ್ ಶರ್ಮ, ಮುಂಬೈ ಇಂಡಿಯನ್ಸ್ (2009)
* ಅಜಿತ್ ಚಂಡೀಲ, ರಾಜಸ್ಥಾನ್ ರಾಯಲ್ಸ್ (2012)
* ಲಕ್ಷ್ಮಿಪತಿ ಬಾಲಾಜಿ, ಕೆಕೆಆರ್ (2008)
* ಮಖಾಯ ಎನ್ ಟಿನಿ, ಚೆನ್ನೈ ಸೂಪರ್ ಕಿಂಗ್ಸ್ (2008)
* ಪ್ರವೀಣ್ ಕುಮಾರ್, ರಾಯಲ್ ಚಾಲೆಂಜರ್ಸ್ ಬೆಂಗಳೂರು (2010)

English summary
Kolkata Knight Riders' spinner Sunil Narine became the first bowler in IPL 2013 to take a hat-trick and overall this was 10th hat-trick in six years of IPL.
ಅಭಿಪ್ರಾಯ ಬರೆಯಿರಿ