Englishहिन्दीമലയാളംதமிழ்తెలుగు

ಜಯನಗರದಲ್ಲಿ ಚಿಣ್ಣರಿಗಾಗಿ ಕ್ರಿಕೆಟ್ ಕೋಚಿಂಗ್

Posted by:
Published: Tuesday, April 16, 2013, 15:32 [IST]
 

ಬೆಂಗಳೂರು, ಏ.16: ಇತ್ತೀಚೆಗೆ ನಗರದ ಜಯನಗರ ಮೂರನೇ ಬ್ಲಾಕಿನಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಆಟದ ಮೈದಾನಕ್ಕೆ ಕ್ರಿಕೆಟ್ ದಿಗ್ಗಜರು ಕಾಲಿಟ್ಟಿದ್ದರು. ಕಾಸ್ಮೋಪಾಲಿಟನ್ ಕ್ಲಬ್ ಹಿಂಭಾಗದ ಮೈದಾನದಲ್ಲಿ ಪ್ರತಿಭಾವಂತ ಕ್ರಿಕೆಟರ್ ಗೆ ಸೂಕ್ತ ವೇದಿಕೆ ಒದಗಿಸಲು ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ತನ್ನ ಕ್ಯಾಂಪ್ ಆರಂಭಿಸಿದೆ.

ಮಾಜಿ ಕ್ರಿಕೆಟರ್ ಜಿಆರ್ ವಿಶ್ವನಾಥ್ ಅವರು ಜಯನಗರದಲ್ಲಿ ಈ ಕ್ರಿಕೆಟ್ ಕೋಚಿಂಗ್ ಕ್ಯಾಂಪ್ ಉದ್ಘಾಟಿಸಿದರು. ವಾರ್ಷಿಕ ಬೇಸಿಗೆ ಶಿಬಿರ ಇದಾಗಿದ್ದು, 14 ವರ್ಷ ವಯೋಮಿತಿಯೊಳಗಿನ, 16 ವರ್ಷ ವಯೋಮಿತಿಯೊಳಗಿನ ಹಾಗೂ ಅಂಡರ್ 19 ವಯೋಮಿತಿಯುಳ್ಳ ಆಸಕ್ತರು ಈ ಕ್ಯಾಂಪ್ ನಲ್ಲಿ ಭಾಗವಹಿಸಬಹುದಾಗಿದೆ. ಏ.15 ರಿಂದ ಮೇ 23ರ ತನಕ ಈ ಕೋಚಿಂಗ್ ಕ್ಯಾಂಪ್ ನಡೆಯುತ್ತದೆ.

ಕೆಎಸ್ ಸಿಎ ಕಾರ್ಯದರ್ಶಿ ಜಾವಗಲ್ ಶ್ರೀನಾಥ್ ಹಾಗೂ ಇನ್ನಿತರ ಅಧಿಕಾರಿಗಳು ಮೈದಾನಕ್ಕೆ ಆಗಮಿಸಿ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಿದರು. ಕರ್ನಾಟಕದ ವಿವಿಧ ಭಾಗಗಳಲ್ಲಿ ಈ ರೀತಿ ಸಮ್ಮರ್ ಕೋಚಿಂಗ್ ಕ್ಯಾಂಪ್ ಗಳನ್ನು ಮಕ್ಕಳಿಗಾಗಿ ಕೆಎಸ್ ಸಿಎ ಆಯೋಜಿಸುತ್ತಿದ್ದು, ಇದು ಉಚಿತ ಶಿಬಿರವಾಗಿದೆ.

ಮಾಧವನ್ ಪಾರ್ಕ್, ಕಿತ್ತೂರು ಚೆನ್ನಮ್ಮ ಮೈದಾನ, ಕಾಸ್ಮೋಪಾಲಿಟನ್ ಕ್ಲಬ್ ಮೈದಾನ ಹೀಗೆ ವಿವಿಧ ಹೆಸರುಗಳಿಂದ ಕರೆಸಿಕೊಳ್ಳುವ ಈ ಮೈದಾನದಲ್ಲಿ ಕ್ರಿಕೆಟರ್ ಅನಿಲ್ ಕುಂಬ್ಳೆ, ಶ್ರೀನಾಥ್, ವಿನಯ್ ಕುಮಾರ್ ಮುಂತಾದವರು ಆಡಿದ್ದಾರೆ. ಕೋಚಿಂಗ್ ಕ್ಯಾಂಪ್ ಉದ್ಘಾಟನೆ ಚಿತ್ರಗಳು ಇಲ್ಲಿದೆ

ಕೋಚಿಂಗ್ ಕ್ಯಾಂಪ್ ಉದ್ಘಾಟನೆ ಚಿತ್ರಗಳು

ಜಿಆರ್ ವಿಶ್ವನಾಥ್ ಅವರಿಂದ ಉದ್ಘಾಟನೆ

ಕೋಚಿಂಗ್ ಕ್ಯಾಂಪ್ ಉದ್ಘಾಟನೆ ಚಿತ್ರಗಳು

ಜಿಆರ್ ವಿಶ್ವನಾಥ್ ಅವರಿಂದ ಉದ್ಘಾಟನೆ, ಕೆಎಸ್ ಸಿಎ ಕಾರ್ಯದರ್ಶಿ ಶ್ರೀನಾಥ್ ಜೊತೆಗೆ

ಕೋಚಿಂಗ್ ಕ್ಯಾಂಪ್ ಉದ್ಘಾಟನೆ ಚಿತ್ರಗಳು

ಕಿತ್ತೂರು ರಾಣಿ ಚೆನ್ನಮ್ಮ ಆಟದ ಮೈದಾನ, ಜಯನಗರ ಮೂರನೇ ಬ್ಲಾಕ್ ಬೆಂಗಳೂರು

ಕೋಚಿಂಗ್ ಕ್ಯಾಂಪ್ ಉದ್ಘಾಟನೆ ಚಿತ್ರಗಳು

ಕಿತ್ತೂರು ರಾಣಿ ಚೆನ್ನಮ್ಮ ಆಟದ ಮೈದಾನ, ಜಯನಗರ ಮೂರನೇ ಬ್ಲಾಕ್ ಬೆಂಗಳೂರು

ಕೋಚಿಂಗ್ ಕ್ಯಾಂಪ್ ಉದ್ಘಾಟನೆ ಚಿತ್ರಗಳು

ಕಿತ್ತೂರು ರಾಣಿ ಚೆನ್ನಮ್ಮ ಆಟದ ಮೈದಾನ, ಜಯನಗರ ಮೂರನೇ ಬ್ಲಾಕ್ ಬೆಂಗಳೂರು

English summary
Former India batsman GR Viswanath inaugurated Karnataka State Cricket Association's (KSCA) cricket facility in Jayanagar here on Sunday (April 14), in preparation for the annual Summer Camp coaching programme for boys Under-14, Under-16 and Under-19 to be conducted from today (April 15) to May 23.
ಅಭಿಪ್ರಾಯ ಬರೆಯಿರಿ