Englishहिन्दीമലയാളംதமிழ்తెలుగు

ಕೊಹ್ಲಿ ಹಾಗೂ ಗಂಭೀರ್ ಚಕಮಕಿ ದೃಶ್ಯ

Posted by:
Published: Friday, April 12, 2013, 15:55 [IST]
 

ಬೆಂಗಳೂರು, ಏ.12: ಗುರುವಾರ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ
ಭರ್ಜರಿ ಜಯ ದಾಖಲಿಸಿದ ಸಂಭ್ರಮದ ಬೆನ್ನಲ್ಲೇ ನಾಯಕ ಗೌತಮ್ ಗಂಭೀರ್ ಹಾಗೂ ವಿರಾಟ್ ಕೋಹ್ಲಿ ನಡುವಿನ ಮಾತಿನ ಚಕಮಕಿ ಸಭ್ಯರ ಆಟಕ್ಕೆ ಕಪ್ಪುಚುಕ್ಕೆಯಾಗಿ ಉಳಿದು ಬಿಟ್ಟಿತು.

ಆರ್ ಸಿಬಿ ನಾಯಕ ವಿರಾಟ್ ಕೋಹ್ಲಿ ಮತ್ತು ಕೆಕೆಆರ್ ನಾಯಕ ಗಂಭೀರ್ ಇಬ್ಬರೂ ಭಾರತ ತಂಡದಲ್ಲಿ ಸಹ ಆಟಗಾರರು. ದೆಹಲಿ ಮೂಲದ ಇಬ್ಬರು ಒಟ್ಟಿಗೆ ಆಡಿ ಬೆಳೆದವರು.ಆದರೆ, ಕೋಹ್ಲಿ ಔಟಾದಾಗ ಗಂಭೀರ್ ಆಡಿದ ರೀತಿ ಮತ್ತು ಬಳಿಕ ಕೆರಳಿದ ಕೋಹ್ಲಿ ತೋರಿದ ವರ್ತನೆ ಎಲ್ಲರನ್ನು ಅಚ್ಚರಿಗೆ ದೂಡಿದೆ.

ದೆಹಲಿಯ ಮತ್ತೊಬ್ಬ ಆಟಗಾರ ರಜತ್ ಭಾಟಿಯಾ ಮಧ್ಯೆ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಅಂತಿಮವಾಗಿ ಗೇಲ್ ಆರ್ಭಟದಿಂದ ಕೆಕೆಆರ್ ಮಣಿಸಿದ ಆರ್ ಸಿಬಿ ವಿಜಯೋತ್ಸವ ಆಚರಿಸಿದರು. ಸ್ಕೋರ್ ಕಾರ್ಡ್ ನೋಡಿ

ಕೋಹ್ಲಿ ವಿಕೆಟನ್ನು ಗಂಭೀರ್ ಆಚರಿಸಿದ ರೀತಿ ಕೋಹ್ಲಿಯನ್ನು ಕೆರಳಿಸಿತು. ಪೆವಿಲಿಯನ್‌ನತ್ತ ಹೋಗುತ್ತಿದ್ದ ಅವರು ಮರಳಿ ಬಂದು ವಾಗ್ಯುದ್ಧಕ್ಕೆ ಮುಂದಾದರು. ಇದು ಅತಿರೇಕಕ್ಕೆ ಹೋಗುವ ಮುನ್ನ ಕೆಕೆಆರ್ ತಂಡದ ದಿಲ್ಲಿ ಆಟಗಾರ ರಜತ್ ಭಾಟಿಯಾ ಮತ್ತು ಅಂಪೈರುಗಳ ಮಧ್ಯಪ್ರವೇಶಿಸಿ, ಉಭಯ ನಾಯಕರನ್ನು ಬೇರ್ಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಗಂಭೀರ್ ಅವರನ್ನು ಕೇಳಿದಾಗ, ಏನಾಯಿತೆಂಬುದನ್ನು ಕೋಹ್ಲಿಯನ್ನೇ ಕೇಳಿ ಎಂದುತ್ತರಿಸಿದರು. ಬಹುಮಾನ ವಿತರಣಾ ಸಮಾರಂಭದಲ್ಲಿ ನೆರೆದಿದ್ದ ಬೆಂಗಳೂರು ಅಭಿಮಾನಿಗಳು ಕೂಡ ಗಂಭೀರ್ ವಿರುದ್ಧ ಘೋಷಣೆ ಕೂಗುತ್ತಿದ್ದರು.

ಆರ್ ಸಿಬಿ ಇನ್ನಿಂಗ್ಸ್ ನ 10 ನೇ ಓವರ್ ನಲ್ಲಿ ಕೊಹ್ಲಿ ಅವರು ಲಕ್ಷ್ಮಿಪತಿ ಬಾಲಾಜಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಕಡೆಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಗಂಭೀರ್ ಏನೋ ಅಂದಿದ್ದಾರೆ. ಇದನ್ನು ಗಮನಿಸಿದ ಕೊಹ್ಲಿ ತಕ್ಷಣವೇ 'ಕ್ಯಾ ಬೆ.....@#ಕೊಹ್ಲಿ ಹಾಗೂ ಗಂಭೀರ್ ನಡುವಿನ ಮಾತಿನ ಚಕಮಕಿ ಐಪಿಎಲ್ ವಿವಾದಗಳ ಪಟ್ಟಿ ಸೇರಿದ್ದಲ್ಲದೆ 2008ರ ಶ್ರೀಶಾಂತ್ ಹಾಗೂ ಹರ್ಭಜರ್ನ್ ಕಪಾಳಮೋಕ್ಷ ಪ್ರಕರಣಕ್ಕೆ ಮತ್ತೆ ಜೀವ ತಂದುಕೊಟ್ಟಿದೆ. ಈ ಬಗ್ಗೆ ಮುಂದೆ ಓದಿ&***' ಎಂದು ಮುನ್ನುಗ್ಗಿದರು.

ಇಬ್ಬರ ನಡುವೆ ಜಟಾಪಟಿ ಆರಂಭವಾಗುವುದನ್ನು ಗಮನಿಸಿದ ಅಂಪೈರ್ ಹಾಗೂ ರಜತ್ ಭಾಟಿಯಾ ತಕ್ಷಣವೇ ಇಬ್ಬರನ್ನು ತಡೆದರು. ಸಂಗ್ವಾನ್ ಬೌಲಿಂಗ್ ನಲ್ಲಿ 2 ಸಿಕ್ಸರ್ ಹಾಗೂ ಬೌಂಡರಿ ಚೆಚ್ಚಿದ್ದ ಕೊಹ್ಲಿ ಮೇಲೆ ಗಂಭೀರ್ ಕೋಪಗೊಂಡಿದ್ದು ಸಹಜವಾಗಿತ್ತು. ಆದರೆ, ಇದು ವೈಯಕ್ತಿಕ ನಿಂದನೆ ಮಟ್ಟಕ್ಕೆ ಇಳಿದಿದ್ದು ಅಚ್ಚರಿಯಾಗಿತ್ತು.

ಪಂದ್ಯದ ನಂತರ ಪ್ರತಿಕ್ರಿಯೆ ನೀಡಿದ ಗಂಭೀರ್ 'ಮಾತಿನ ಚಕಮಕಿ ಆ ಸಮಯದಲ್ಲೇ ಮರೆತುಬಿಟ್ಟೆ. ವೈಯಕ್ತಿಕವಾಗಿ ನಾವಿಬ್ಬರೂ ಚೆನ್ನಾಗಿದ್ದೇವೆ. ಮೈದಾನದಿಂದ ಹೊರಕ್ಕೆ ಜಗಳ ವಿಸ್ತರಿಸುವ ಸಣ್ಣ ಬುದ್ಧಿ ಇಲ್ಲ ಎಂದರು.

ಕೊಹ್ಲಿ ಹಾಗೂ ಗಂಭೀರ್ ನಡುವಿನ ಮಾತಿನ ಚಕಮಕಿ ಐಪಿಎಲ್ ವಿವಾದಗಳ ಪಟ್ಟಿ ಸೇರಿದ್ದಲ್ಲದೆ 2008ರ ಶ್ರೀಶಾಂತ್ ಹಾಗೂ ಹರ್ಭಜರ್ನ್ ಕಪಾಳಮೋಕ್ಷ ಪ್ರಕರಣಕ್ಕೆ ಮತ್ತೆ ಜೀವ ತಂದುಕೊಟ್ಟಿದೆ. ಈ ಬಗ್ಗೆ ಮುಂದೆ ಓದಿ

English summary
It was not good to see this incident on the field on Thursday evening in IPL 2013. Delhi boys Virat Kohli and Gautam Gambhir were involved in an ugly on-field spat during the Royal Challengers Bangalore-Kolkata Knight Riders match here at M Chinnaswamy Stadium.
ಅಭಿಪ್ರಾಯ ಬರೆಯಿರಿ