Englishहिन्दीമലയാളംதமிழ்తెలుగు

Pics : ವಿರಾಟ್ ಕೊಹ್ಲಿ ಪಡೆಗೆ ಸೂಪರ್ ಸೋಲು

Posted by:
Updated: Monday, April 8, 2013, 15:24 [IST]
 

ಹೈದರಾಬಾದ್, ಏ.8 ಸನ್‌ರೈಸರ್ಸ್‌ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡಗಳ ನಡುವಿನ ಐಪಿಎಲ್‌ 6ರ ಏಳನೆ ಪಂದ್ಯ ಟೈ ಆಗಿ, ಸೂಪರ್ ಓವರ್ ನಲ್ಲಿ ಸೂಪರ್ ಆಗಿ ಅಂತ್ಯ ಕಂಡಿದೆ. ಸೂಪರ್ ಓವರ್‌ನಲ್ಲಿ ಸನ್‌ರೈಸರ್ಸ್‌ ತಂಡ ಗೆಲುವಿನ ನಗೆ ಬೀರಿತು. ಸೂಪರ್ ಓವರ್‌ನಲ್ಲಿ ಗೆಲುವಿಗೆ 20 ರನ್‌ಗಳ ಸವಾಲನ್ನು ಪಡೆದ ಆರ್‌ಸಿಬಿ ತಂಡ 15 ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಇದಕ್ಕೆ ಮೊದಲು ಗೆಲುವಿಗೆ 131 ರನ್‌ಗಳ ಸವಾಲನ್ನು ಪಡೆದ ಸನ್‌ರೈಸರ್ಸ್‌ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 130 ರನ್ ಮಾತ್ರ ಗಳಿಸಿತು. ಸನ್‌ರೈಸರ್ಸ್‌ ತಂಡ ಪರ ಹೋರಾಟ ನಡೆಸಿದ ಹನುಮ ವಿಹಾರಿ ಔಟಾಗದೆ 44 ರನ್(46ಎಸೆತ, 2 ಬೌಂಡರಿ) ಬಾರಿಸಿ ಪಂದ್ಯ ಟೈ ಆಗುವಂತೆ ನೋಡಿಕೊಂಡರು. ಸನ್‌ರೈಸರ್ಸ್‌ ತಂಡಕ್ಕೆ ಸವಾಲು ಕಠಿಣವಾಗಿರಲಿಲ್ಲ. ಆದರೆ ತಂಡದ ಇನಿಂಗ್ಸ್ ಆರಂಭ ಕಳಪೆಯಾಗಿತ್ತು. ಅಂತ್ಯ ಮಾತ್ರ ಭರ್ಜರಿಯಾಗಿತ್ತು. ಸ್ಕೋರ್ ಕಾರ್ಡ್ ನೋಡಿ

ಸನ್ ರೈಸರ್ಸ್ ತಂಡದ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್(2) ಎರಡನೆ ಓವರ್‌ನ ಮೊದಲ ಎಸೆತದಲ್ಲಿ ಹೆನ್ರಿಕ್ಸ್‌ಗೆ ವಿಕೆಟ್ ಒಪ್ಪಿಸಿದರು. 3.3ನೆ ಓವರ್‌ನಲ್ಲಿ ಹೆನ್ರಿಕ್ಸ್ ಅವರು ಇನ್ನೊಂದು ವಿಕೆಟ್ ಕಬಳಿಸಿದರು. ಕೆಮರೂನ್ ವೈಟ್ (5) ವಿಕೆಟ್ ಪಡೆಯುವುದರೊಂದಿಗೆ ಹೆನ್ರಿಕ್ಸ್ ಆರ್ ಸಿಬಿಗೆ ಗೆಲುವಿನ ಆಸೆ ಹುಟ್ಟಿಸಿದರು.. ಮುಂದೇನಾಯಿತು ನೋಡಿ....

ಸನ್ ರೈಸರ್ಸ್ ಭರ್ಜರಿ ಆಟ

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆರ್‌ಸಿಬಿ ತಂಡ ಗೇಲ್ ವಿಕೆಟ್ ಕಳೆದುಕೊಂಡ ಮೇಲೆ ವಿರಾಟ್ ಕೊಹ್ಲಿ 46 ರನ್(44 ಎಸೆತ, 5 ಬೌಂಡರಿ, 1 ಸಿಕ್ಸ್) ಮತ್ತು ಮೋಸೆಸ್ ಹೆನ್ರಿಕ್44 ರನ್ (40ಎ, 5ಬೌ) ಸಹಾಯದಿಂದ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 130 ರನ್ ಸಂಪಾದಿಸಿತ್ತು.

ಸನ್ ರೈಸರ್ಸ್ ಭರ್ಜರಿ ಆಟ

ಸನ್ ರೈಸರ್ ಪರ ಇಶಾಂತ್ ಶರ್ಮಗೆ ಸಾಥ್ ನೀಡಿದ ಸ್ಟೇಯ್ನ, ಆಶಿಶ್ ರೆಡ್ಡಿ, ಅಮಿತ್ ಮಿಶ್ರಾ, ಪೆರೆರಾ, ಹನುಮ ವಿಹಾರಿ ತಲಾ ಒಂದು ವಿಕೆಟ್ ಕಿತ್ತು ಆರ್‌ಸಿಬಿ ಸ್ಕೋರ್ 130ನ್ನು ದಾಟದಂತೆ ನಿಯಂತ್ರಣ ಸಾಧಿಸಿದರು.

ಸನ್ ರೈಸರ್ಸ್ ಭರ್ಜರಿ ಆಟ

ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ ಇನ್ನೊಂದು ತುದಿಯಲ್ಲಿ ಕ್ರೀಸ್‌ನಲ್ಲಿ ತಳವೂರಿದ್ದ ಹನಮ ವಿಹಾರಿಗೆ ಏಳನೆ ವಿಕೆಟ್‌ಗೆ ಆಶಿಶ್ ರೆಡ್ಡಿ ಜೊತೆಯಾದರು. ಏಳನೆ ವಿಕೆಟ್‌ಗೆ 23 ರನ್ ಸೇರಿಸಿದರು. ಕೊನೆ ಓವರ್‌ನಲ್ಲಿ ಸನ್ ರೈಸರ್ಸ್‌ಗೆ ಗೆಲುವಿಗೆ 7 ರನ್ ಬೇಕಾಗಿತ್ತು.

ಸನ್ ರೈಸರ್ಸ್ ಭರ್ಜರಿ ಆಟ

ಆಶೀಶ್ ರೆಡ್ಡಿ ಹಾಗೂ ನಾಯಕ ಕುಮಾರ ಸಂಗಕ್ಕಾರ ಗೆಲುವಿನ ಸಂಭ್ರಮದಲ್ಲಿ

ಸನ್ ರೈಸರ್ಸ್ ಭರ್ಜರಿ ಆಟ

ಹೆನ್ರಿಕ್ಸ್ ಆರ್ ಸಿಬಿಗೆ ಗೆಲುವಿನ ಆಸೆ ಹುಟ್ಟಿಸಿದರು ಆದರೆ, ಹೆಚ್ಚು ಕಾಲ ಈ ಖುಷಿ ನಿಲ್ಲಲಿಲ್ಲ.

ಸನ್ ರೈಸರ್ಸ್ ಭರ್ಜರಿ ಆಟ


ಕೊನೆ ಓವರ್ ನಲ್ಲಿ ವಿನಯ್ ಕುಮಾರ್ ಅವರ ಮೊದಲ ಎಸೆತದಲ್ಲಿ ಆಶಿಶ್ ರೆಡ್ಡಿ ಔಟಾದರು. ಉಳಿದ ಐದು ಎಸೆತದಲ್ಲಿ ಸ್ಟೇಯ್ನಿ ಮತ್ತು ವಿಹಾರಿ 6 ರನ್ ಸಂಪಾದಿಸುವಲ್ಲಿ ಸಫಲರಾದರು.ಕೊನೆಯ ಎಸೆತದಲ್ಲಿ ಗೆಲ್ಲಲು 2 ರನ್ ಬೇಕಾಗಿತ್ತು. ಆದರೆ ವಿಹಾರಿ- ಸ್ಟೇಯ್ನಿ 1 ಲೆಗ್‌ಬೈ ಸಂಗ್ರಹಿಸಿದರು. ಇದರೊಂದಿಗೆ ಪಂದ್ಯ ಟೈ ಆಗಿ ಕೊನೆಗೊಂಡಿತು.

ಸನ್ ರೈಸರ್ಸ್ ಭರ್ಜರಿ ಆಟ

ಆಸ್ಟ್ರೇಲಿಯಾದ ಮೋಸೆಸ್ ಹೆನ್ರಿಕ್44 ರನ್ (40 ಎಸೆತ, 5 ಬೌಂಡರಿ) ಗಳಿಸಿ ಬ್ಯಾಟಿಂಗ್ ನಲ್ಲೂ ಮಿಂಚಿದರು.

ಸನ್ ರೈಸರ್ಸ್ ಭರ್ಜರಿ ಆಟ

ಸಿಕ್ಸ್, ಬೌಂಡರಿ ಏನು ಹೊಡೆದರೂ ಪಂದ್ಯ ಗೆಲ್ಲಲಾಗಲಿಲ್ಲ ಛೇ

ಸನ್ ರೈಸರ್ಸ್ ಭರ್ಜರಿ ಆಟ

ವಿರಾಟ್ ಕೊಹ್ಲಿ 46 ರನ್(44 ಎಸೆತ, 5 ಬೌಂಡರಿ, 1 ಸಿಕ್ಸ್) ಗಳಿಸಿದ್ದ ಕೊಹ್ಲಿ, ಸೂಪರ್ ಓವರನಲ್ಲೂ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.

ಸನ್ ರೈಸರ್ಸ್ ಭರ್ಜರಿ ಆಟ

ಭಾರತೀಯ ಟೆನಿಸ್ ತಾರೆ ಸೋನಿಯಾ ಮಿರ್ಜಾ ಹಾಗೂ ಅವರ ತಂಗಿ ಅನೀಜ್ ಮಿರ್ಜಾ(ಎಡಬದಿ) ಹೈದರಾಬಾದ್ ಗೆಲುವನ್ನು ಆನಂದಿಸಿದರು.

Story first published:  Monday, April 8, 2013, 15:21 [IST]
English summary
Sunrisers Hyderabad held their nerve in a low-scoring game to clinch victory in Super Over against Royal Challengers Bangalore in Match 7 of IPL 2013 on Sunday night (April 7).
ಅಭಿಪ್ರಾಯ ಬರೆಯಿರಿ