Englishहिन्दीമലയാളംதமிழ்తెలుగు

ಚಿತ್ರಗಳಲ್ಲಿ : ಪ್ರೀತಿ ಜಿಂಟಾ ಕಿಂಗ್ಸ್ XI ಗೆಲುವು

Posted by:
Updated: Monday, April 8, 2013, 15:39 [IST]
 

ಪುಣೆ, ಏ.8 : ಪಂಜಾಬ್‌ ತಂಡದ ಹತ್ತೊಂಬತ್ತರ ಹರೆಯದ ಯುವ ಆಟಗಾರ ಮನನ್ ವೋರಾ(ಔಟಾಗದೆ 43) ಮೊದಲ ಪಂದ್ಯದಲ್ಲಿ ನೀಡಿದ ಪ್ರದರ್ಶನದ ಅರ್ಧ ಭಾಗ ಕೂಡಾ ಪುಣೆ ತಂಡದಿಂದ ಹೊರಬೀಳಲಿಲ್ಲ. ಐಪಿಎಲ್ 6 ಅತ್ಯಂತ ಕಳಪೆ ತಂಡವಾಗಿ ಪುಣೆ ಕಾಣಿಸುತ್ತಿದೆ.

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಐಪಿಎಲ್‌ನ ಆರನೆ ಆವೃತ್ತಿಯ ಆರನೆ ಪಂದ್ಯದಲ್ಲಿ ಪುಣೆ ವಾರಿಯರ್ಸ್‌ ವಿರುದ್ಧ 8 ವಿಕೆಟ್‌ಗಳ ಜಯ ಸಾಧಿಸಿದೆ. ಕಳೆದ ಐದು ಆವೃತ್ತಿಗಳಲ್ಲೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಮೊದಲ ಪಂದ್ಯದಲ್ಲಿ ಸೋತು ಮೊದಲ ಪಂದ್ಯದಲ್ಲಿ ಗೆಲ್ಲದ ತಂಡವೆಂಬ ಅಪವಾದಕ್ಕೆ ಈಡಾಗಿತ್ತು.

ಗೆಲುವಿಗೆ ನೂರು ರನ್‌ಗಳ ಸವಾಲನ್ನು ಪಡೆದ ಕಿಂಗ್ಸ್ ಇಲೆವೆನ್ ಪಂಜಾಬ್ ಇನ್ನೂ 46 ಎಸೆತಗಳು ಬಾಕಿ ಉಳಿದಿರುವಂತೆ 2 ವಿಕೆಟ್ ನಷ್ಟದಲ್ಲಿ ಅಗತ್ಯದ ರನ್ ಸೇರಿಸಿ ಗೆಲುವಿನ ಪತಾಕೆ ಹಾರಿಸಿತು. ಮನನ್ ವೋರಾ 43 ರನ್ (28 ಎಸೆತ, 7 ಬೌಂಡರಿ) ಮತ್ತು ಡೇವಿಡ್ ಹಸ್ಸಿ (ಔಟಾಗದೆ 8) ತಂಡದ ಗೆಲುವಿನ ದಡ ದಾಟಿಸಿದರು. ಸ್ಕೋರ್ ವಿವರ ನೋಡಿ

ಪುಣೆ ಕಳಪೆ ಪ್ರದರ್ಶನ ಮುಂದುವರಿಕೆ

ಪಂಜಾಬ್ ತಂಡಕ್ಕೆ ಗೆಲುವು ಕಠಿಣವಾಗಿರಲಿಲ್ಲ. ತಂಡದ ಆಡಂ ಗಿಲ್‌ಕ್ರಿಸ್ಟ್ ಮತ್ತು ಮನ್‌ದೀಪ್ ಸಿಂಗ್ 2.2 ಒವರ್‌ಗಳಲ್ಲಿ 21 ರನ್ ಸೇರಿವಷ್ಟರಲ್ಲಿ ಪುಣೆ ತಂಡದ ಮೊದಲ ವಿಕೆಟ್ ಪತನಕೊಂಡಿತ್ತು. ತಂಡದ ನಾಯಕಗಿಲ್‌ಕ್ರಿಸ್ಟ್(15ರನ್, 10ಎ, 2ಬೌ, 1ಸಿ) ಬಾರಿಸಿ ಉತ್ತಮ ಆರಂಭ ಒದಗಿಸಿದ್ದರು. ಅಷ್ಟರಲ್ಲಿ ಪುಣೆ ನಾಯಕ ಏಂಜೆಲೋ ಮ್ಯಾಥ್ಯೂಸ್, ಗಿಲ್‌ ವಿಕೆಟ್ ಕಿತ್ತರು

ಪುಣೆ ಕಳಪೆ ಪ್ರದರ್ಶನ ಮುಂದುವರಿಕೆ

ಮೂರನೆ ವಿಕೆಟ್‌ಗೆ ಮನನ್ ಮತ್ತು ಹಸ್ಸಿ ಮುರಿಯದ ಜೊತೆಯಾಟದಲ್ಲಿ ಗೆಲುವಿಗೆ ಅಗತ್ಯದ ರನ್ ಜಮೆ ಮಾಡಿದರು. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಮೂಲಕ ಚೊಚ್ಚಲ ಐಪಿಎಲ್ ಪಂದ್ಯವನ್ನಾಡಿದ ಮನನ್ ಬ್ಯಾಟಿಂಗ್‌ನಲ್ಲಿ ನೀಡಿರುವ ಕೊಡುಗೆಗಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಪುಣೆಯ ಮ್ಯಾಥ್ಯೂಸ್ ಮತ್ತು ರಾಹುಲ್ ಶರ್ಮ ತಲಾ 1 ವಿಕೆಟ್ ಹಂಚಿಕೊಂಡರು.

ಪುಣೆ ಕಳಪೆ ಪ್ರದರ್ಶನ ಮುಂದುವರಿಕೆ

ಇದಕ್ಕೆ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪುಣೆ ವಾರಿಯರ್ಸ್‌ ತಂಡ, 4.95 ಸರಾಸರಿಯಂತೆ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 99 ರನ್ ಸಂಪಾದಿಸಿತು. 25 ರನ್ ಗಳಿಸಿದ ಅಭಿಷೇಕ್ ನಾಯರ್ ಪುಣೆ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು.

ಪುಣೆ ಕಳಪೆ ಪ್ರದರ್ಶನ ಮುಂದುವರಿಕೆ

ಕಿಂಗ್ಸ್ ಇಲೆವೆನ್ ತಂಡದ ಪ್ರವೀಣ್ ಕುಮಾರ್(2-31), ಅಜರ್ ಮಹಮೂದ್(2-19), ಹ್ಯಾರಿಸ್(1-12), ಅವಾನ(1-16) ಮತ್ತು ಚಾವ್ಲಾ(1-19) ಉತ್ತಮ ಬೌಲಿಂಗ್ ಮೂಲಕ ರನ್ ಗತಿ ನಿಯಂತ್ರಿಸಿಬಿಟ್ಟರು.ಮನೀಷ್ ಪಾಂಡೆ ಶೂನ್ಯ ಸುತ್ತುವ ಮೂಲಕ ಐಪಿಎಲ್ ನಲ್ಲಿ ಅತಿ ಹೆಚ್ಚು ಡಕ್ ಔಟ್ ಆದ ಆಟಗಾರರ ಪಟ್ಟಿ ಸೇರಿದರು.

ಪುಣೆ ಕಳಪೆ ಪ್ರದರ್ಶನ ಮುಂದುವರಿಕೆ

ಸುಮನ್(6), ಸ್ಯಾಮುಯೆಲ್ಸ್(3), ನಾಯಕ ಮ್ಯಾಥ್ಯೂಸ್(4), ಭುವನೇಶ್ವರ ಕುಮಾರ್(8), ರಾಹುಲ್ ಶರ್ಮ(1) ಒಂದಂಕೆಯ ಕೊಡುಗೆ ನೀಡಿದರೂ ತಂಡದ ಸ್ಕೋರ್ 100ರ ಗಡಿ ದಾಟಲಿಲ್ಲ. ಮಾರ್ಷ್ ಉತ್ತಮ ಆರಂಭ ಪಡೆದರೂ 15 ರನ್ ಮಾತ್ರ ಗಳಿಸಿದರು. ಪಂಜಾಬ್ ಪರ ಪ್ರವೀಣ್ ಕುಮಾರ್ ಉತ್ತಮ ಬೌಲಿಂಗ್ ಪ್ರದರ್ಶಿಸಿದರು.

Story first published:  Monday, April 8, 2013, 15:38 [IST]
English summary
It was a poor batting display by Pune Warirors for the second straight game in IPL 2013 and that cost them the match. On Sunday (April 7), Pune were thrashed by Kings XI Punjab by eight wickets.For the first time in IPL history, Kings XI secured a win in their opening game. Youngsters Mandeep Singh and Manan Vohra, on debut, set up the win with fine batting displays.
ಅಭಿಪ್ರಾಯ ಬರೆಯಿರಿ