Englishहिन्दीമലയാളംதமிழ்తెలుగు

ದಾವಣಗೆರೆ ಎಕ್ಸ್ ಪ್ರೆಸ್ ಜೊತೆ ದಟ್ಸ್ ಕ್ರಿಕೆಟ್ ಚಾಟ್

Posted by:
Published: Friday, April 5, 2013, 17:42 [IST]
 

ದಾವಣಗೆರೆ ಎಕ್ಸ್ ಪ್ರೆಸ್ ಜೊತೆ ದಟ್ಸ್ ಕ್ರಿಕೆಟ್ ಚಾಟ್
 

ಬೆಂಗಳೂರು, ಏ.5: ಆ ಒಂದು ಎಸೆತ ಹೆಚ್ಚು ಕಮ್ಮಿಯಾಗಿದ್ದರೆ ವಿನಯ್ ಕುಮಾರ್ ಅವರು ಚೇತನ್ ಶರ್ಮ ಅವರ ಪಟ್ಟಿಗೆ ಸೇರಿಬಿಡುತ್ತಿದ್ದರು. ಪೊಲ್ಲಾರ್ಡ್ ನಂಥ ದೈತ್ಯ ಕ್ರೀಸ್ ನಲ್ಲಿದ್ದಾಗ ಯಾರ್ಕ್ ಹಾಕಿ ಆರ್ ಸಿಬಿ ಮಾನ ಕಾಪಾಡಿದ ದಾವಣಗೆರೆ ಎಕ್ಸ್ ಪ್ರೆಸ್ ದಟ್ಸ್ ಕ್ರಿಕೆಟ್ ಪ್ರತಿನಿಧಿ ಅಪ್ರಮೇಯ ಅವರೊಂದಿಗೆ ಹರ್ಷದಿಂದ ಮಾತನಾಡಿದರು.

ನಿನ್ನೆ ಮ್ಯಾಚ್ ಈಗಲೂ ಕಣ್ಣಿಗೆ ಕಟ್ಟಿದ್ದಂತೆ ಇದೆ. ಆದರೆ,ನನಗೆ ವಿಶ್ವಾಸವಿತ್ತು. ನಾನು ಒಂದು ಓವರ್ ನಲ್ಲಿ ರನ್ ನಿಯಂತ್ರಿಸಬಲ್ಲೆ ಎಂಬ ಆತ್ಮವಿಶ್ವಾಸವಿತ್ತು. ಕೊನೆ ಎಸೆತ ಯಾರ್ಕ್ ಹಾಕಬೇಕು ಎಂದು ಮೊದಲೇ ಯೋಚಿಸಿರಲಿಲ್ಲ. ಸಂದರ್ಭಕ್ಕೆ ತಕ್ಕಂತೆ ಬಳಸಿದೆ ಎಂದು 29 ವರ್ಷದ ಕರ್ನಾಟಕದ ಆಟಗಾರ ವಿನಯ್ ಹೇಳಿದರು.

ಎರಡು ಮೂರು ಸಲ ಕೊನೆ ಓವರ್ ಎಸೆದಿರುವ ಅನುಭವ ಇದೆ. ಪ್ರೆಷರ್ ಅಂತೂ ಇತ್ತು. ಕಳೆದ ಎರಡು ಮೂರು ವರ್ಷಕ್ಕೆ ಹೋಲಿಸಿದರೆ ಈಗ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡಿದ್ದೇನೆ. ನಿರಂತರ ಅಭ್ಯಾಸದಲ್ಲಿರುವುದು ಫಲ ನೀಡಿದೆ ಎಂದರು.

ಪೊಲ್ಲಾರ್ಡ್ ಕ್ರೀಸ್ ಗೆ ಬಂದಾಗ ಯಾರ್ಕ್ ಹಾಕುವ ಎಂದೆನಿಸಿತು. ಐದನೇ ಎಸೆತ ಸ್ವಲ್ಪದರಲ್ಲಿ ಸಿಕ್ಸ್ ಆಗುವುದು ತಪ್ಪಿದಾಗ ಜೀವ ಬಂದಂತಾಯಿತು. ಯಾರ್ಕ್ ಹಾಕಲು ಯತ್ನಿಸಿದ್ದು ಲೋ ಫುಲ್ ಟಾಸ್ ಆಗಿ ಕೈ ಕೊಟ್ಟಿತು. ಆದರೆ, ಕೊನೆ ಎಸೆತ ನಾನು ಅಂದುಕೊಂಡ ಹಾಗೆ ಪಿಚ್ ಆಗಿದ್ದರಿಂದ ಪೊಲ್ಲಾರ್ಡ್ ಗೆ ಹೆಚ್ಚಿನ ರನ್ ಗಳಿಸಲು ಆಗಲಿಲ್ಲ ಎಂದರು.

ವಿನಯ್ ಕುಮಾರ್ 27 ರನ್ ನೀಡಿ 3 ವಿಕೆಟ್ ಕಿತ್ತು ಆರ್ ಸಿಬಿ ಮೊದಲ ಬಾರಿಗೆ ಮುಂಬೈ ಇಂಡಿಯನ್ಸ್ ವಿರುದ್ಧ ತವರು ನೆಲದಲ್ಲಿ ಜಯ ಗಳಿಸುವಂತೆ ಮಾಡಿದರು. ರಾಯಡು ವಿಕೆಟ್ ಕಿತ್ತಿದ್ದು ಖುಷಿ ನೀಡಿತು. ಹ್ಯಾಟ್ರಿಕ್ ಬಗ್ಗೆ ನಾನು ಯೋಚಿಸಿರಲಿಲ್ಲ. ರನ್ ನಿಯಂತ್ರಣ ನನ್ನ ಗುರಿಯಾಗಿತ್ತು ಎಂದರು.

ಕಳೆದ ಬಾರಿ ಕೂಡಾ ರಾಯುಡು ಹಾಗೂ ಪೊಲ್ಲಾರ್ಡ್ ಇಬ್ಬರು ಪಂದ್ಯವನ್ನು ತಮ್ಮ ಕಡೆಗೆ ವಾಲಿಸಿಕೊಂಡು ಬಿಟ್ಟರು. ರೋಹಿತ್, ಕಾರ್ತಿಕ್ ಹಾಗೂ ರಾಯುಡು ಮೂರು ಮಹತ್ವದ ವಿಕೆಟ್ ಕಿತ್ತ ಖುಷಿ ಇದೆ. 156 ರನ್ ಒಳಗೆ ಮುಂಬೈ ನಿಯಂತ್ರಿಸುವ ಸಾಧ್ಯತೆ ಬಗ್ಗೆ ಕೊಹ್ಲಿ ವಿಶ್ವಾಸ ವ್ಯಕ್ತಪಡಿಸಿದರು.

ಕ್ರಿಶ್ಚಿಯನ್ ಅವರ ಓವರ್ ಕೈ ಕೊಟ್ಟಿದ್ದು ನಿಜ ಆದರೆ, ಟಿ20ಯಲ್ಲಿ ಬೌಲರ್ ಗಳಿಗೆ ಅತಿ ಕಡಿಮೆ ಅವಕಾಶಗಳಿರುತ್ತದೆ. ಸಿಕ್ಕ ಅವಕಾಶ ಉಪಯೋಗಿಸಿಕೊಂಡು ಯಶ ಗಳಿಸಬೇಕು ಎಂದು ವಿನಯ್ ಹೇಳಿ ಮಸಾಜ್ ಮಾಡಿಸಿಕೊಳ್ಳಲು ತೆರಳಿದರು. ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಏ.9ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಎರಡನೇ ಪಂದ್ಯವನ್ನಾಡಲಿದೆ.

English summary
Royal Challengers Bangalore's bowling hero R Vinay Kumar said that he stuck to his normal bowling plan and aimed for yorkers at Kieron Pollard when delivering the final over of the match against Mumbai Indians at M Chinnaswamy Stadium on Thursday night (April 4).
ಅಭಿಪ್ರಾಯ ಬರೆಯಿರಿ