Englishहिन्दीമലയാളംதமிழ்తెలుగు

ಶಾರುಖ್ ಮೇಲೆ ಜೆನ್ನಿಫರ್ ಕೆಂಗಣ್ಣು

Posted by:
Published: Thursday, April 4, 2013, 15:16 [IST]
 

ಮುಂಬೈ, ಏ.4: ಇಂಡಿಯನ್ ಪ್ರಿಮಿಯರ್ ಲೀಗ್ ನ ಆರನೇ ಆವೃತ್ತಿಯ ಉದ್ಟಾಟನಾ ಸಮಾರಂಭದ ಹೊಣೆ ಹೊತ್ತಿರುವ ಶಾರುಖ್ ಅವರು ಹಾಲಿವುಡ್ ನ ಮಾದಕ ಗಾಯಕಿ, ನಟಿ ಜೆನ್ನಿಫರ್ ಲೋಪೆಜ್ ಗೆ ನೀಡಿದ ಆಹ್ವಾನ ತಿರಸ್ಕೃತಗೊಂಡಿದ್ದು ಎಲ್ಲರಿಗೂ ಗೊತ್ತಿದೆ. ಜೆನ್ನಿ ಯಾಕೆ ಬರಲಿಲ್ಲ ಎಂದರೆ ಕಿಂಗ್ ಖಾನ್ ಬೇರೆ ಏನೋ ಕಥೆ ಕಟ್ಟಿದನಂತೆ ಇದರಿಂದ JLo ಕೆಂಡಾಮಂಡಲವಾಗಿದ್ದಾಳೆ.

ಜೆನ್ನಿಫರ್ ಜೊತೆ ನಡೆದ ಮಾತುಕತೆ, ಡೀಲ್ ಎಲ್ಲವೂ ಶಾರುಖ್ ಖಾನ್ ಅಲ್ಲದೆ ರೆಡ್ ಚಿಲ್ಲೀಸ್ ನ ಕೆಲವು ಅಧಿಕಾರಿಗಳಿಗೆ ಮಾತ್ರ ಗೊತ್ತಿತ್ತು. ಆದರೆ, ಶಾರುಖ್ ಖಾನ್ ಎಲ್ಲೆಂದರಲ್ಲಿ ಬಾಯ್ಬಿಟ್ಟು ಜೆನ್ನಿಫರ್ ಇಮೇಜ್ ಹಾಳುಮಾಡಿದ್ದಾರೆ ಎಂದು ಜೆನ್ನಿಫರ್ ಮ್ಯಾನೇಜರ್ ಹೇಳಿದ್ದಾರೆ.

ಶಾರುಖ್ ಮೇಲೆ ಜೆನ್ನಿಫರ್ ಕೆಂಗಣ್ಣು

ಕೋಲ್ಕತ್ತಾದ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ಏ.2, 2013 ರಂದು ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಹಾಡಿ ಕುಣಿದು ನಲಿಯುವಂತೆ ಜೆನ್ನಿಫರ್ ಲೋಪೆಜ್ ಗೆ ಶಾರುಖ್ ಕೇಳಿಕೊಂಡಿದ್ದರು. ಆದರೆ, ಸದ್ಯಕ್ಕೆ ಭಾರತಕ್ಕೆ ಬರುವ ಸಾಧ್ಯತೆಯಿಲ್ಲ, ಐಪಿಎಲ್ 6 ಗಾಗಿ ನಾನು ಹಾಡಲು ಸಾಧ್ಯವಿಲ್ಲ ಎಂದು ಜೆನ್ನಿ ಏಕ್ ದಂ ಹೇಳಿರುವುದು ರೆಡ್ ಚಿಲ್ಲಿಸ್ ಮಾಲೀಕ ಶಾರುಖ್ ಗೆ ಮೆಣಸಿನ ಕಾಯಿ ಘಾಟು ಬಡಿದಂತೆ ಆಗಿತ್ತು.

ಲಭ್ಯ ಮಾಹಿತಿ ಪ್ರಕಾರ ಜೆನ್ನಿಫರ್ ಲೋಪೆಜ್ ಡಿಮ್ಯಾಂಡ್ ಮಾಡಿದ ರೇಟ್ ಕೇಳಿ ಶಾರುಖ್ ದಂಗಾಗಿಬಿಟ್ಟರಂತೆ. ಮೊದಲಿಗೆ ಜೋಕ್ ಮಾಡುತ್ತಿರಬಹುದು ಎಂದುಕೊಂಡ ಶಾರುಖ್ ಮತ್ತೊಮ್ಮೆ ಜೆನ್ನಿಯನ್ನು ಸಂಪರ್ಕಿಸಿ ಹ್ಯಾಪುಮೋರೆ ಹಾಕಿಕೊಂಡು ಬಂದಿದ್ದಾರೆ. ಆದರೆ, ಜೆನ್ನಿ ಯಾಕೆ ಬರುತ್ತಿಲ್ಲ ಎಂಬುದರ ಬಗ್ಗೆ ರೆಡ್ ಚಿಲ್ಲೀಸ್ ಎಲ್ಲೂ ಗುಟ್ಟು ಹೊರಹಾಕಿರಲಿಲ್ಲ.

ಆದರೆ, ಜೆನ್ನಿಫರ್ ಬಗ್ಗೆ ಶಾರುಖ್ ಖಾನ್ ಏನೇನೂ ಹೇಳಿ ಆಕೆ ಇಮೇಜ್ ಹಾಳು ಮಾಡಿದ್ದಾರೆ ಎಂದು ಜೆನ್ನಿಫರ್ ಮ್ಯಾನೇಜರ್ ಇಮೇಲ್ ಬರೆದಿದ್ದಾರೆ. ಜೆನ್ನಿಫರ್ ತನ್ನ 45 ಜನರ ಬ್ಯಾಂಡ್ ಜೊತೆಗೆ ಕೋಲ್ಕತ್ತಾದಲ್ಲಿ ಇಳಿಯಬೇಕಿತ್ತು. ಆದರೆ, ಮುಂಚಿತವಾಗಿ ನಿಗದಿಯಾಗಿದ್ದ ಕಾರ್ಯಕ್ರಮವನ್ನು ರದ್ದು ಮಾಡಲಾಗದೆ ಭಾರತ ಪ್ರವಾಸವನ್ನು ಕೈಬಿಡಬೇಕಾಯಿತು. ಬಾಲಿವುಡ್ ನ ಬೆಡಗಿಯರಾದ ಕತ್ರೀನಾ ಕೈಫ್, ದೀಪಿಕಾ ಪಡುಕೋಣೆ ಅಲ್ಲದೆ ಪಿಟ್ ಬುಲ್ ತಂಡ ಕೋಲ್ಕತ್ತಾ ಮೈದಾನದಲ್ಲಿ ಹಾಡಿ ನಲಿದು ಕುಣಿದಾಡಿದರು. 

English summary
Pop Star Jennifer Lopez has accused SRK’s Red Chillies of deliberately maligning her image. Shahrukh who is also the proud owner of IPL franchise Kolkata Knight Riders, has allegedly irked the singer by spreading false stories of her “diva-like” demand.
ಅಭಿಪ್ರಾಯ ಬರೆಯಿರಿ