Englishहिन्दीമലയാളംதமிழ்తెలుగు

ವಿನಯ್ ಮಸ್ತ್ ಬೌಲಿಂಗ್, ಆರ್ ಸಿಬಿಗೆ ಗೆಲುವು

Posted by:
Updated: Friday, April 5, 2013, 17:59 [IST]
 

ಬೆಂಗಳೂರು, ಏ.4: ಆರ್ ಸಿಬಿ ನೀಡಿದ 157 ರನ್ ಗಳ ಗುರಿ ಬೆನ್ನು ಹತ್ತಿದ ಮುಂಬೈ ಇಂಡಿಯನ್ಸ್ ತಂಡ ದಿಗ್ಗಜರಾದ ರಿಕಿ ಪಾಂಟಿಂಗ್ ಹಾಗೂ ಸಚಿನ್ ತೆಂಡೂಲ್ಕರ್ ಬ್ಯಾಟಿಂಗ್ ನಿಂದ ಉತ್ತಮ ಆರಂಭ ಪಡೆದರೂ ಗೆಲುವಿನ ಹೊಸ್ತಿಲಲ್ಲಿ ಮುಗ್ಗರಿಸಿತು. ವಿನಯ್ ಅದ್ಭುತ ಬೌಲಿಂಗ್ (27ಕ್ಕೆ 3) ಆರ್ ಸಿಬಿಗೆ ಜಯ ತಂದು ಕೊಟ್ಟಿತು.

23 ರನ್ ಗಳಿಸಿದ ಸಚಿನ್ ಅನಗತ್ಯವಾಗಿ ರನ್ ಔಟ್ ಆಗಿ ಪೆವಿಲಿಯನ್ ಗೆ ಮರಳಿದರೆ. ನಂತರ ಪಾಂಟಿಂಗ್ (28 ರನ್) ಕಾರ್ತಿಕ್ ಬೌಲಿಂಗ್ ನಲ್ಲಿ ಸ್ಟಂಪ್ ಆಗಿ ಔಟಾದರು. ನಂತರ ದಿನೇಶ್ ಕಾರ್ತಿಕ್ ಇನ್ನಿಂಗ್ಸ್ ಸಂಭಾಳಿಸಿದರು. ಆರ್ ಸಿಬಿ ಪರ ದುಬಾರಿ ಬೌಲರ್ (4 ಓವರ್ 42 ರನ್) ಎನಿಸಿದ ಡೇನಿಯಲ್ ಕ್ರಿಶ್ಚಿಯನ್ ಪಂದ್ಯವನ್ನು ಮುಂಬೈ ಕಡೆಗೆ ವಾಲಿಸಿದರು. ದಿನೇಶ್ ಕಾರ್ತಿಕ್ ಅರ್ಧಶತಕ ಪಂದ್ಯದ ಗತಿ ಬದಲಾಯಿಸಿತು. ಕಾರ್ತಿಕ್ ಗೆ ರಾಯುಡು ಉತ್ತಮ ಸಾಥ್ ನೀಡಿದರು.

ವಿನಯ್ ಮಸ್ತ್ ಬೌಲಿಂಗ್, ಆರ್ ಸಿಬಿಗೆ ಗೆಲುವು

ಕೊನೆ ಓವರ್ ನಲ್ಲಿ 10 ರನ್ ಬೇಕಿತ್ತು. ಮೊದಲ ಎಸೆತದಲ್ಲಿ 1 ರನ್ ಎರಡನೇ ಎಸೆತ ವಿಕೆಟ್, ಮೂರನೇ ಎಸೆತದಲ್ಲಿ ವಿಕೆಟ್ ಉದುರಿತು. ನಾಲ್ಕನೇ ಎಸೆತದಲ್ಲಿ ಹರ್ಭಜನ್ 1 ರನ್ ಪಡೆದರು. 2 ಬಾಲ್ ನಲ್ಲಿ 8 ರನ್ ಬೇಕಿತ್ತು. ಪೊಲ್ಲಾರ್ಡ್ 4 ರನ್ ಚೆಚ್ಚಿದರು. ಅಂತಿಮವಾಗಿ ಯಾರ್ಕ್ ಎಸೆದ ವಿನಯ್ ಆರ್ ಸಿಬಿಗೆ ಮೊದಲ ಬಾರಿಗೆ ಗೆಲುವು ತಂದರು. 2 ರನ್ ನಿಂದ ಮಲ್ಯ ಪಡೆ ಜಯಭೇರಿ ಬಾರಿಸಿತು. ಮುಂಬೈ 154/5 ಮಾತ್ರ ಮಾಡಲು ಸಾಧ್ಯವಾಯಿತು. ಸ್ಕೋರ್ ಕಾರ್ಡ್ ನೋಡಿ

ಆರ್ ಸಿಬಿ ಇನ್ನಿಂಗ್ಸ್ : ಎಲ್ಲಾ ಐಪಿಎಲ್ ಟೂರ್ನಿಯಂತೆ ಈ ಬಾರಿ ಕೂಡಾ ಮೊದಲ ಪಂದ್ಯದಲ್ಲಿ ಆರ್ ಸಿಬಿ ತಿಣುಕಾಡುತ್ತಾ ಆಟ ಶುರು ಮಾಡಿದೆ. ಮುಂಬೈ ಇಂಡಿಯನ್ಸ್ ಆರಂಭದಲ್ಲೇ 3 ವಿಕೆಟ್ ಕಿತ್ತು ಹಾಕಿ ರನ್ ಗತಿಗೆ ಬ್ರೇಕ್ ಹಾಕಿದರು.

ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ರಿಕಿ ಪಾಂಟಿಂಗ್ ಮಹತ್ವದ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿದ್ದು ಫಲ ನೀಡಿದೆ. ಆರ್ ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ 14 ಎಸೆತಗಳಲ್ಲಿ 24 ರನ್(4 ಬೌಂಡರಿ, 1 ಸಿಕ್ಸ್) ಚೆಚ್ಚಿ ಪೆವಿಲಿಯನ್ ಗೆ ಮರಳಿದರು. ಉಳಿದಂತೆ ದಿಲ್ಶನ್ 0, ಮಾಯಾಂಕ್ ಅಗರವಾಲ್ 1, ಡೇನಿಯಲ್ 4 ರನ್, ಕರುಣ್ ನಾಯರ್ 0 ರನ್ ಗಳಿಸಿ ಔಟಾದರು. ಆದರೆ, ನಂತರ ಕ್ರಿಸ್ ಗೇಲ್ ಭರ್ಜರಿ ಆಟ ಪ್ರದರ್ಶಿಸಿದರು.

ಗೇಲ್ 92 ರನ್( 58 ಎಸೆತ, 11 ಬೌಂಡರಿ, 5 ಸಿಕ್ಸರ್) 158.62 ಸ್ಟ್ರೈಕ್ ರೇಟ್ . ಅರುಣ್ ಕಾರ್ತಿಕ್ 19 ರನ್ ಗಳಿಸಿದರು. ಆರ್ ಸಿಬಿ 156/5 ಗಳಿಸಿದೆ. ಮುಂಬೈ ಪರ ಬೊಮ್ರಾ 3 ವಿಕೆಟ್ ಕಿತ್ತರು. 

Story first published:  Thursday, April 4, 2013, 20:48 [IST]
English summary
Chasing a target of 157 runs Mumbai Indians fell short by 2 runs, Vinay kumar was star for RCB who got 3 wickets for 27 runs and Gayle hit 92 runs Not out. First time RCB beaten the MI in KSCA stadium.
ಅಭಿಪ್ರಾಯ ಬರೆಯಿರಿ