Englishहिन्दीമലയാളംதமிழ்తెలుగు

ಐಪಿಎಲ್ 6 ದಾಖಲೆ: ಮೆಕಲಮ್, ಗೇಲ್, ರೈನಾ ಟಾಪ್

Posted by:
Published: Wednesday, April 3, 2013, 13:34 [IST]
 

ಬೆಂಗಳೂರು, ಏ.3: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಅಂಕಿ ಅಂಶ ತೆಗೆದು ನೋಡಿದರೆ ಬರೀ ಸಿಕ್ಸರ್, ಬೌಂಡರಿಗಳ ಲೆಕ್ಕಾಚಾರವೇ ಸಿಗುತ್ತದೆ. ಬೌಲರ್ ಗಳ ಎಸೆತವನ್ನು ಮನ ಬಂದಂತೆ ಚೆಚ್ಚುವುದೇ ಬ್ಯಾಟ್ಸ್ ಮನ್ ಗಳ ಪರಮಗುರಿ ಟಿ20 ಕ್ರಿಕೆಟ್ ಗೆ ಹೊಸ ಭಾಷ್ಯ ಬರೆದ ಐಪಿಎಲ್ ನಲ್ಲಿ ಬೌಂಡರಿಗಳು, ಸಿಕ್ಸರ್‌ಗಳ ಜೊತೆಗೆ ವಿಕೆಟ್, ಕ್ಯಾಚ್‌ನಲ್ಲೂ ದಾಖಲೆ ನಿರ್ಮಾಣವಾಗಿದೆ.

ಎಂಎಸ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್‌ನ 78 ಪಂದ್ಯಗಳಲ್ಲಿ ನಾಯಕತ್ವವನ್ನು ವಹಿಸಿಕೊಂಡಿದ್ದು, 46 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ. ಧೋನಿ ಇನ್ನು ನಾಲ್ಕು ಪಂದ್ಯಗಳಲ್ಲಿ ಗೆದ್ದರೆ ಐಪಿಎಲ್‌ನಲ್ಲಿ 50 ಪಂದ್ಯಗಳನ್ನು ಜಯಿಸಿದ ಮೊದಲ ನಾಯಕ ಎಂಬ ದಾಖಲೆಯನ್ನು ಬರೆಯಲಿದ್ದಾರೆ.

ರೋಹಿತ್ ಶರ್ಮ ಹಾಗೂ ಸುರೇಶ್‌ರೈನಾ ಐಪಿಎಲ್‌ನಲ್ಲಿ ಗರಿಷ್ಠ ಕ್ಯಾಚ್‌ಗಳನ್ನು ಪಡೆದಿದ್ದಾರೆ. ಈ ಇಬ್ಬರು ಆಟಗಾರರು ತಲಾ 42 ಕ್ಯಾಚ್‌ಗಳನ್ನು ಪಡೆದಿದ್ದಾರೆ.

ಅನಿಲ್ ಕುಂಬ್ಳೆ, ಲಕ್ಷ್ಮೀಪತಿ ಬಾಲಾಜಿ, ಮುನಾಫ್ ಪಟೇಲ್ ಹಾಗೂ ಲಸಿತ ಮಾಲಿಂಗ ಐಪಿಎಲ್‌ನಲ್ಲಿ ನಾಲ್ಕು ಹಾಗೂ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಪಡೆದ ದಾಖಲೆಯನ್ನು ಹಂಚಿಕೊಂಡಿದ್ದಾರೆ. ನಾಲ್ವರು ಬೌಲರ್‌ಗಳು ಮೂರು ಬಾರಿ ನಾಲ್ಕು ಪ್ಲಸ್ ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅನಿಲ್ ಕುಂಬ್ಳೆ ಆರನೆ ಆವೃತ್ತಿಯ ಐಪಿಎಲ್‌ನಲ್ಲಿ ಭಾಗವಹಿಸುತ್ತಿಲ್ಲ. ಮಿಕ್ಕ ದಾಖಲೆಗಳ ವಿವರ ಚಿತ್ರಸರಣಿಯಲ್ಲಿ ನೋಡಿ

ಸುರೇಶ್ ರೈನಾ

* ಐಪಿಎಲ್‌ನಲ್ಲಿ ಸುರೇಶ್‌ರೈನಾ(2254 ರನ್), ಗೌತಮ್ ಗಂಭೀರ್(2065) ಹಾಗೂ ಸಚಿನ್ ತೆಂಡೂಲ್ಕರ್(2047) ಗರಿಷ್ಠ ಸ್ಕೋರ್ ದಾಖಲಿಸಿದ್ದಾರೆ.
* * ಸುರೇಶ್ ರೈನಾ ಎಲ್ಲರಿಗಿಂತ ಅಧಿಕ ಪಂದ್ಯ(81 ಪಂದ್ಯ)ಗಳನ್ನಾಡಿದ್ದಾರೆ.

ಸಚಿನ್

2000 ರನ್ ಪೂರೈಸಿರುವ ಆಟಗಾರರ ಪೈಕಿ ಸಚಿನ್ ಮೂರನೇ ಸ್ಥಾನದಲ್ಲಿದ್ದಾರೆ. ಐಪಿಎಲ್‌ನಲ್ಲಿ ಸುರೇಶ್‌ರೈನಾ(2254 ರನ್), ಗೌತಮ್ ಗಂಭೀರ್(2065) ಮುಂದಿದ್ದಾರೆ.

ಯೂಸುಫ್ ಭರ್ಜರಿ ಶತಕ

2010 ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ ಯೂಸುಫ್ ಪಠಾಣ್ ಕೇವಲ 37 ಎಸೆತದಲ್ಲಿ 100 ರನ್ ಗಳಿಸಿದರು. ಆದರೆ, ಮುಂಬೈ ಇಂಡಿಯನ್ಸ್ ತಂಡ ಈ ಪಂದ್ಯವನ್ನು ಗೆದ್ದುಕೊಂಡಿತ್ತು.

ಗೌತಮ್ ಗಂಭೀರ್

ಗೌತಮ್ ಗಂಭೀರ್ (2065 ರನ್) ನಾಯಕನಾಗಿ ಐಪಿಎಲ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ನ ಪ್ರಸ್ತುತ ನಾಯಕರಾಗಿದ್ದಾರೆ.

ಲಸಿತ ಮಾಲಿಂಗ

ಐಪಿಎಲ್‌ನಲ್ಲಿ ಗರಿಷ್ಠ ವಿಕೆಟ್ ಪಡೆದವರ ಪಟ್ಟಿಯಲ್ಲಿ ಲಸಿತ ಮಾಲಿಂಗ(83 ವಿಕೆಟ್‌ಗಳು) ಮೊದಲನೆ ಸ್ಥಾನದಲ್ಲಿದ್ದಾರೆ.ಅಮಿತ್ ಮಿಶ್ರಾ ಹಾಗೂ ಆರ್‌ಪಿ ಸಿಂಗ್ ದ್ವಿತೀಯ ಸ್ಥಾನದಲ್ಲಿದ್ದಾರೆ. ಇಬ್ಬರು ಬೌಲರ್‌ಗಳು 74 ವಿಕೆಟ್‌ಗಳನ್ನು ಪಡೆದಿದ್ದಾರೆ. ಪಿಯೂಷ್ ಚಾವ್ಲಾ(73) ಹಾಗೂ ಮುನಾಫ್ ಪಟೇಲ್(70) 4 ಮತ್ತು 5ನೆ ಸ್ಥಾನದಲ್ಲಿದ್ದಾರೆ.

ಕ್ರಿಸ್‌ಗೇಲ್

ಐಪಿಎಲ್‌ನಲ್ಲಿ ಗರಿಷ್ಠ ಅರ್ಧಶತಕ ಗಳಿಸಿದವರ ಪಟ್ಟಿಯಲ್ಲಿ ಕ್ರಿಸ್‌ಗೇಲ್, ವೀರೇಂದ್ರ ಸೆಹ್ವಾಗ್ ಹಾಗೂ ರೋಹಿತ್ ಶರ್ಮ ಎರಡನೆ ಸ್ಥಾನದಲ್ಲಿದ್ದಾರೆ. ಮೂವರು ಬ್ಯಾಟ್ಸ್‌ಮನ್‌ಗಳು ತಲಾ 15 ಅರ್ಧಶತಕಗಳನ್ನು ಸಿಡಿಸಿದ್ದಾರೆ.
* ಅತಿ ಹೆಚ್ಚು ಸಿಕ್ಸರ್(129) ಸಿಡಿಸಿರುವುದು ಕೂಡಾ ಗೇಲ್

ಬ್ರೆಂಡನ್ ಮೆಕಲಮ್


ಕೆಕೆಆರ್ ಪರ ಆಡುವ ಮೆಕಲಮ್ ಮೊದಲ ಐಪಿಎಲ್ ನ ಮೊದಲ ಪಂದ್ಯದಲ್ಲೇ ಬೆಂಗಳೂರಿನಲ್ಲಿ ಆರ್ ಸಿಬಿ ವಿರುದ್ಧ ಚೆಚ್ಚಿದ 158 ರನ್ ಇನ್ನೂ ದಾಖಲೆಯಾಗೇ ಉಳಿದಿದೆ.

ಎಂಎಸ್ ಧೋನಿ

78 ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕರಾಗಿರುವ ಧೋನಿ ಅವರು 1783ರನ್ ಗಳಿಸಿದ್ದು, ಪ್ರಶಸ್ತಿ ಕೂಡಾ ಗಳಿಸಿಕೊಟ್ಟಿದ್ದಾರೆ.46 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ. ಧೋನಿ ಇನ್ನು ನಾಲ್ಕು ಪಂದ್ಯಗಳಲ್ಲಿ ಗೆದ್ದರೆ ಐಪಿಎಲ್‌ನಲ್ಲಿ 50 ಪಂದ್ಯಗಳನ್ನು ಜಯಿಸಿದ ಮೊದಲ ನಾಯಕ ಎನಿಸುತ್ತಾರೆ

English summary
Two-time champions Chennai Super Kings (CSK) hold the record for the highest team total in the history of IPL while Rajasthan Royals (RR) have the ignominy of registering the lowest score.
ಅಭಿಪ್ರಾಯ ಬರೆಯಿರಿ