Englishहिन्दीമലയാളംதமிழ்తెలుగు

In Pics : ಸಚಿನ್, ಪಾಂಟಿಂಗ್ , ಕುಂಬ್ಳೆ ತಾಲೀಮು

Posted by:
Published: Tuesday, April 2, 2013, 12:39 [IST]
 

ಮುಂಬೈ, ಏ.2: ಇಂಡಿಯನ್ ಪ್ರಿಮಿಯರ್ ಲೀಗ್ ನ ಹೊಸ ಆವೃತ್ತಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈ ಬಾರಿ ಮುಂಬೈ ಇಂಡಿಯನ್ಸ್ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಕಳೆದ ಐದು ವರ್ಷ ಗಳಲ್ಲಿ ಐಪಿಎಲ್ ಕಪ್ ಎತ್ತಲು ವಿಫಲವಾಗಿರೋ ತಂಡದ ಮೇಲೆ ಯಾಕೆ ಎಲ್ಲರ ಕಣ್ಣು ಎಂಬ ಪ್ರಶ್ನೆಗೆ ಸರಳ ಉತ್ತರ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್.

ಹೌದು ಟೆಸ್ಟ್ ಕ್ರಿಕೆಟ್ ಮಾತ್ರ ಆಡುತ್ತಿರುವ ಸಚಿನ್ ಅವರನ್ನು ಕಾಣಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಮುಂಬೈ ಇಂಡಿಯನ್ಸ್ ತಂಡಕ್ಕೆ ಈಗ ಕನ್ನಡಿಗ ಅನಿಲ್ ಕುಂಬ್ಳೆ ಮಾರ್ಗದರ್ಶನ ಸಿಕ್ಕಿರುವುದು ಆನೆಬಲ ಬಂದಂತಾಗಿದೆ. ಮುಂಬೈ ಇಂಡಿಯನ್ಸ್ ತಂಡಕ್ಕೆ ಆಸೀಸ್ ಮಾಜಿ ನಾಯಕ ರಿಕಿ ಪಾಂಟಿಂಗ್ ಹೊಸ ನಾಯಕರಾಗಿದ್ದು, ಎಲ್ಲರ ಕುತೂಹಲದ ಕೇಂದ್ರ ಬಿಂದುವಾಗಿದ್ದಾರೆ.

ಇದು ಸಚಿನ್ ಅವರ ಕಟ್ಟಕಡೆಯ ಐಪಿಎಲ್ ಎನ್ನುವ ಸುದ್ದಿ ಸಹಿಸಲು ಕಷ್ಟವಾಗುವುದರಿಂದ ಸಚಿನ್ ಮೈದಾನದಲ್ಲಿ ಕಾಲಿಟ್ಟ ಎಲ್ಲಾ ಕ್ಷಣಗಳನ್ನು ಸೆರೆಹಿಡಿಯಲು ಕೆಮೆರಾ ಮ್ಯಾನ್ ಗಳು ಕಾತುರರಾಗಿದ್ದಾರೆ. ದಟ್ಸ್ ಕ್ರಿಕೆಟ್ ತಂಡ ಕೂಡಾ ಸಚಿನ್ ಸೇರಿದಂತೆ ಎಲ್ಲಾ ಸ್ಟಾರ್ ಆಟಗಾರರ ಚಿತ್ರಗಳನ್ನು ನಿಮ್ಮು ಮುಂದೆ ಕಾಲಕಾಲಕ್ಕೆ ನೀಡುತ್ತಾ ಬರುತ್ತೇವೆ.

ಅಂದ ಹಾಗೆ, ಅನಿಲ್ ಕುಂಬ್ಳೆ ಮಾರ್ಗದರ್ಶನದ ಮುಂಬೈ ಇಂಡಿಯನ್ಸ್ ತಂಡ ವಿಜಯ್ ಮಲ್ಯ ಒಡೆತನದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಏ.4 ರಂದು ಎದುರಿಸಲಿದೆ. ಸದ್ಯಕ್ಕೆ ಕ್ರಿಕೆಟ್ ಕ್ಷೇತ್ರದ ದಿಗ್ಗಜರಾದ ಸಚಿನ್, ಪಾಂಟಿಂಗ್ ಹಾಗೂ ಅನಿಲ್ ಕುಂಬ್ಳೆ ತಾಲೀಮು ದೃಶ್ಯಗಳು ನಿಮ್ಮ ಮುಂದೆ...

ಸಚಿನ್ ಪಾಂಟಿಂಗ್ ಹಾಗೂ ಕುಂಬ್ಳೆ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಿಕಿ ಪಾಂಟಿಂಗ್ ಜೊತೆ ಅನಿಲ್ ಕುಂಬ್ಳೆ ಮಾತುಕತೆ, ಸಚಿನ್ ತೆಂಡೂಲ್ಕರ್ ಕೂಡಾ ಅಭ್ಯಾಸ ನಿರತರಾಗಿದ್ದಾರೆ.

ಸಚಿನ್ ಪಾಂಟಿಂಗ್ ಹಾಗೂ ಕುಂಬ್ಳೆ

ರನ್ ಚೆಚ್ಚುವ ಬ್ಯಾಟ್ ಇದೇನಾ? ಎಲ್ಲಿ ನನಗೆ ಕೊಡಿ ನೋಡುತ್ತೀನಿ ಎನ್ನುತ್ತಿರುವ ಪಾಂಟಿಂಗ್, ಬ್ಯಾಟ್ ಆಯ್ಕೆಯಲ್ಲಿ ತೆಂಡೂಲ್ಕರ್

ಸಚಿನ್ ಪಾಂಟಿಂಗ್ ಹಾಗೂ ಕುಂಬ್ಳೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ನಿರತ ರಿಕಿ ಪಾಂಟಿಂಗ್

ಸಚಿನ್ ಪಾಂಟಿಂಗ್ ಹಾಗೂ ಕುಂಬ್ಳೆ

ಸಕತ್ ಅಭ್ಯಾಸದ ನಂತರ ಡ್ರೆಸ್ಸಿಂಗ್ ಕೊಠಡಿಯತ್ತ ಪಾಂಟಿಂಗ್ ಹೊರಟಿದ್ದು ಹೀಗೆ

ಸಚಿನ್ ಪಾಂಟಿಂಗ್ ಹಾಗೂ ಕುಂಬ್ಳೆ

ಸಚಿನ್ ಹೊಡೆದ ಶಾಟ್ ನಿಂದ ಬಾಯ್ ಬಾಲ್ ಗೆ ಪೆಟ್ಟು. ತಕ್ಷಣವೇ ಗಾಯಾಳು ಹತ್ತಿರ ಹೋಗಿ ಆರೋಗ್ಯ ವಿಚಾರಿಸಿದ ಕ್ರಿಕೆಟ್ ದೇವರು

ಸಚಿನ್ ಪಾಂಟಿಂಗ್ ಹಾಗೂ ಕುಂಬ್ಳೆ

ಬೆಂಗಳೂರಿಗೆ ಬರುವ ಮುನ್ನ ಮುಂಬೈ ಇಂಡಿಯನ್ಸ್ ಪರ ಸುದ್ದಿಗೋಷ್ಠಿ ನಡೆಸಿದ ರಿಕಿ ಪಾಂಟಿಂಗ್. ಹರ್ಭಜನ್ ಸಿಂಗ್ ಜೊತೆ ನಡೆದ ಗಲಾಟೆ ಮೆಲುಕು ಹಾಕಿ ಈಗ ಎಲ್ಲವೂ ಶಾಂತವಾಗಿದೆ. ಸಚಿನ್ ಜೊತೆ ಆಡುವುದೇ ಸೌಭಾಗ್ಯ ಎಂದರು.

ಸಚಿನ್ ಪಾಂಟಿಂಗ್ ಹಾಗೂ ಕುಂಬ್ಳೆ

ನೀಲಿ ದಿರಿಸಿನಲ್ಲಿ ಅನಿಲ್ ಕುಂಬ್ಳೆ ಹಾಗೂ ನಾಯಕ ರಿಕಿ ಪಾಂಟಿಂಗ್ ಭಾರಿ ಚರ್ಚೆಯಲ್ಲಿ

ಸಚಿನ್ ಪಾಂಟಿಂಗ್ ಹಾಗೂ ಕುಂಬ್ಳೆ

ತರಬೇತಿ ಮುಗಿಸಿ ನಿಂತ ರಿಕಿ ಪಾಂಟಿಂಗ್ ಫೋಸ್ ಕೊಟ್ಟಿದ್ದು ಹೀಗೆ

English summary
A new season brings a lot of expectations and it is no different with Mumbai Indians. Having failed to lift the trophy in past five years of Indian Premier League, this time around Mumbai will be hoping to go all the way in IPL 6.
ಅಭಿಪ್ರಾಯ ಬರೆಯಿರಿ