Englishहिन्दीമലയാളംதமிழ்తెలుగు

ಕೋಲ್ಕತ್ತಾ: ಕ್ರಿಕೆಟ್ + ಮನರಂಜನೆ ಹಬ್ಬಕ್ಕೆ ಚಾಲನೆ

Posted by:
Updated: Tuesday, April 2, 2013, 16:07 [IST]
 

ಕೋಲ್ಕತ್ತಾ, ಏ.2: ಇಂಡಿಯನ್ ಪ್ರಿಮಿಯರ್ ಲೀಗ್ ನ ಆರನೇ ಆವೃತ್ತಿ ಕೋಲ್ಕತ್ತಾದಲ್ಲಿ ಭರ್ಜರಿ ಆರಂಭ ಪಡೆಯಲಿದೆ. ಇಲ್ಲಿನ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ಏಪ್ರಿಲ್ 2 ರ ಸಂಜೆ ಐಪಿಎಲ್ 6 ರ ಉದ್ಘಾಟನಾ ಸಮಾರಂಭ ನಡೆಯಲಿದೆ. ಸುಮಾರು 55 ದಿನಗಳ ಕ್ರಿಕೆಟ್ + ಮನರಂಜನೆ ಪ್ರೇಕ್ಷಕರನ್ನು ರಂಜಿಸಲಿದೆ.

ಐಪಿಎಲ್ 6 ರ ಉದ್ಘಾಟನಾ ಸಮಾರಂಭದ ರಂಗೇರಿಸಲು ಬಾಲಿವುಡ್ ನ ಕಿಂಗ್ ಖಾನ್ ಶಾರುಖ್ ಅವರ ರೆಡ್ ಚಿಲ್ಲೀಸ್ ಎಂಟರ್ ಟೈನ್ಮೆಂಟ್ ಪೈ ಲಿ.ತಂಡ ಸಜ್ಜಾಗಿದೆ. ಕಳೆದ ಬಾರಿಯ ಚಾಂಪಿಯನ್ ಆಗಿದ್ದು ಇದೇ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಹಾಗೂ ಅದರ ಮಾಲೀಕ ಶಾರುಖ್ ಖಾನ್ ಎಂಬುದನ್ನು ಮರೆಯುವಂತಿಲ್ಲ. ಡಿಎಲ್ ಎಫ್ ಐಪಿಎಲ್ ಎಂದು ಕರೆಸಿಕೊಳ್ಳುತ್ತಿದ್ದ ಇಂಡಿಯನ್ ಪ್ರಿಮಿಯರ್ ಲೀಗ್ ಗೆ ಈಗ ಹೊಸ ಕಿಕ್ ನೀಡಲು ಪೆಪ್ಸಿ ಸಂಸ್ಥೆ ಬಂದಿದೆ

ಐಪಿಎಲ್ 6 ಗಾಗಿ ನಾನು ಹಾಡಲು ಸಾಧ್ಯವಿಲ್ಲ ಎಂದು ಜೆನ್ನಿ ಏಕ್ ದಂ ಹೇಳಿರುವುದು ರೆಡ್ ಚಿಲ್ಲಿಸ್ ಮಾಲೀಕ ಶಾರುಖ್ ಗೆ ಮೆಣಸಿನ ಕಾಯಿ ಘಾಟು ಬಡಿದಂತೆ ಆಗಿತ್ತು.

ಮೊದಲ ಪಂದ್ಯ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ಏ.3 ರಂದು ನಡೆಯಲಿದೆ. ಸದ್ಯಕ್ಕೆ ಹಾಲಿ ಚಾಂಪಿಯನ್ ಕೆಕೆಆರ್ ತಂಡದ ಅಭ್ಯಾಸ ನಿರತ ಚಿತ್ರಗಳೊಂದಿಗೆ ಉದ್ಘಾಟನಾ ಸಮಾರಂಭದ ಇನ್ನಷ್ಟು ಮಾಹಿತಿ ಮುಂದಿನ ಚಿತ್ರಗಳಲ್ಲಿ ನೋಡಿ

ಚಾಂಪಿಯನ್ ಕೆಕೆಆರ್ ಫುಲ್ ರೆಡಿ

ಬಾಲಿವುಡ್ ನ ಬೆಡಗಿಯರಾದ ಕತ್ರೀನಾ ಕೈಫ್, ಪ್ರಿಯಾಂಕಾ ಛೋಪ್ರಾ ಹಾಗೂ ಬೆಂಗಳೂರು ಬೆಡಗಿ ದೀಪಿಕಾ ಪಡುಕೋಣೆ ಅವರು ಶಾರುಖ್ ಖಾನ್ ಕುಣಿದಾಡಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ ಎಂದು ರೆಡ್ ಚಿಲ್ಲೀಸ್ ಹಾಗೂ ಕೆಕೆಆರ್ ತಂಡ ಸಹ ಒಡತಿ ನಟಿ ಜೂಹಿ ಚಾವ್ಲಾ ಹೇಳಿದ್ದಾರೆ.

ಚಾಂಪಿಯನ್ ಕೆಕೆಆರ್ ಫುಲ್ ರೆಡಿ

* ನಾಯಕ ಗೌತಮ್ ಗಂಭೀರ್ ಬೆವರಿಳಿಸಿ ಕಸರತ್ತು ನಡೆಸಿದ್ದಾರೆ.
* ಸುಮಾರು 300ಕ್ಕೂ ಅಧಿಕ ಡ್ಯಾನ್ಸರ್ ಗಳು ಬಾಲಿವುಡ್ ಸಂಗೀತ ನಿರ್ದೇಶಕ ಪ್ರೀತಂ ಹಾಕಿರುವ ರಾಗ ಸಂಯೋಜನೆಗೆ ಕುಣಿಯಲಿದ್ದಾರೆ. ರೆಡ್ ಪಾಪ್ಪಿ ಕಲಾವಿದರ ಹಾಡು ಕುಣಿತ,ಚೀನಾದಿಂದ ಬಂದಿರುವ ಮಹಿಳಾ ವಿಶೇಷ ವಾದ್ಯ ಗೋಷ್ಠಿ ರಂಜಿಸಲಿದೆ.

ಚಾಂಪಿಯನ್ ಕೆಕೆಆರ್ ಫುಲ್ ರೆಡಿ

* ಆಸ್ಟ್ರೇಲಿಯಾದ ಬ್ರಾಡ್ ಹಡ್ಡಿನ್ ಕ್ಯಾಚ್ ಹಿಡಿಯಲು ಯತ್ನಿಸಿದ್ದು ಹೀಗೆ
* ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ದೀಪ ಬೆಳಗಿಸುವ ಮೂಲಕ ಐಪಿಎಲ್ 6 ಗೆ ಚಾಲನೆ ನೀಡಲಿದ್ದಾರೆ. ಎಂದು ಕೆಕೆಆರ್ ಸಿಇಒ ವೆಂಕಿ ಮೈಸೂರು ಹೇಳಿದ್ದಾರೆ.

ಚಾಂಪಿಯನ್ ಕೆಕೆಆರ್ ಫುಲ್ ರೆಡಿ

ಈ ಸಲ ಸ್ಪೀಡ್ ಗನ್ ಮುರಿಯಲಿದೆ ನೋಡ್ತಾ ಇರಿ ಬಾಸ್ :ಬ್ರೆಟ್ ಲೀ

ಚಾಂಪಿಯನ್ ಕೆಕೆಆರ್ ಫುಲ್ ರೆಡಿ

ಕೋಚ್ ಟ್ರೆವರ್ ಬೆಲಿಸ್ ಜೊತೆ ನಾಯಕ ಗೌತಮ್ ಗಂಭೀರ್ ಹಾಗೂ ವೇಗಿ ಬ್ರೆಟ್ ಲೀ

ಚಾಂಪಿಯನ್ ಕೆಕೆಆರ್ ಫುಲ್ ರೆಡಿ

ಕಸರತ್ತು ನಿರತ ಕೆಕೆಆರ್ ತಂಡ

ಚಾಂಪಿಯನ್ ಕೆಕೆಆರ್ ಫುಲ್ ರೆಡಿ

ಐಪಿಎಲ್ 6 ಮೊದಲ ಪಂದ್ಯಕ್ಕೆ ಟಿಕೆಟ್ ಸಿಕ್ಕವರಿಗೆ ಸೀರುಂಡೆ

ಚಾಂಪಿಯನ್ ಕೆಕೆಆರ್ ಫುಲ್ ರೆಡಿ

ಸುದ್ದಿಗೋಷ್ಠಿಯಲ್ಲಿ ಇಂಗ್ಲೆಂಡಿನ ಇಯಾನ್ ಮಾರ್ಗನ್

ಚಾಂಪಿಯನ್ ಕೆಕೆಆರ್ ಫುಲ್ ರೆಡಿ

ಸಕತ್ ಕಸರತ್ತಿನಲ್ಲಿ ಕೋಲ್ಕತ್ತಾ ಬಾಯ್ಸ್

ಚಾಂಪಿಯನ್ ಕೆಕೆಆರ್ ಫುಲ್ ರೆಡಿ

ಬೌಲಿಂಗ್ ಅಭ್ಯಾಸಕ್ಕೂ ಮುನ್ನ ವಿಶೇಷ ಕಸರತ್ತು

Story first published:  Tuesday, April 2, 2013, 16:04 [IST]
English summary
Kolkata KnKolkata Knight Riders and Eden Gardens are ready for the IPL 6 opening match on April 3, Wednesday.The defending champions KKR will face Delhi Daredevils on Wednesday night at 8PM IST. KKR players were busy fine tuning their skills for the new season.ight Riders and Eden Gardens are ready for the IPL 6 opening match on April 3, Wednesday.The defending champions KKR will face Delhi Daredevils on Wednesday night at 8PM IST. KKR players were busy fine tuning their skills for the new season.
ಅಭಿಪ್ರಾಯ ಬರೆಯಿರಿ