Englishहिन्दीമലയാളംதமிழ்తెలుగు

ವಾಂಖೇಡೆ ಸ್ಟೇಡಿಯಂಗೆ ಶಾರುಖ್ ಕಾಲಿಡುವಂತಿಲ್ಲ

Posted by:
Published: Monday, April 1, 2013, 11:53 [IST]
 

ವಾಂಖೇಡೆ ಸ್ಟೇಡಿಯಂಗೆ ಶಾರುಖ್ ಕಾಲಿಡುವಂತಿಲ್ಲ
 

ಮುಂಬೈ, ಏ.1: ಇಲ್ಲಿನ ವಾಂಖೇಡೆ ಸ್ಟೇಡಿಯಂಗೆ ಕಾಲಿಡದಂತೆ ಕೋಲ್ಕತಾ ನೈಟ್ ರೈಡರ್ಸ್(ಕೆಕೆಆರ್) ತಂಡದ ಮಾಲಕ ಶಾರುಖ್‌ಖಾನ್ ಅವರ ವಿರುದ್ಧ ಹೇರಲಾಗಿರುವ ನಿಷೇಧ ಹಿಂತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಪಷ್ಟಪಡಿಸಿದೆ. ಐಪಿಎಲ್ ಆಯೋಜಕ ರಾಜೀವ್ ಶುಕ್ಲಾ ಅವರು ಶಾರುಖ್ ಅವರ ಮೇಲಿನ ನಿಷೇಧ ಹಿಂತೆಗೆದುಕೊಳ್ಳುವಂತೆ ಒತ್ತಡ ಹೇರುತ್ತಿರುವುದನ್ನು ಮರಾಠಿ ಶಾಸಕರು ಖಂಡಿಸಿದ್ದಾರೆ.

ರಾಜೀವ್ ಶುಕ್ಲಾ ಅವರ ನಿಲುವು ಸ್ವಲ್ಪವೂ ಸರಿಯಿಲ್ಲ‘‘. ಶಾರುಖ್ ಖಾನ್ ಅವರ ಮೇಲಿನ ನಿಷೇಧ ವಿಸ್ತರಣೆ ಮಾಡಿರುವ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರಮ ಸರಿಯಾಗಿದೆ. ಸ್ಟಾರ್ ನಟ ಎಂದ ಮಾತ್ರಕ್ಕೆ ನಿಯಮ ಮುರಿಯುವುದು ತಪ್ಪು ಎಂದು ಬಿಜೆಪಿ ಹಾಗೂ ಶಿವಸೇನಾ ರಾಜಕೀಯ ಮುಖಂಡರು ಪ್ರತಿಕ್ರಿಯಿಸಿದ್ದಾರೆ.

ನಿಷೇಧ ವಿಸ್ತರಿಸಿರುವುದರಿಮ್ದ ಏ 7 ರಂದು ವಾಂಖೇಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಮುಂಬೈ ಇಂಡಿಯನ್ಸ್-ಕೆಕೆಆರ್ ನಡುವಿನ ಪಂದ್ಯಕ್ಕೆ ಶಾರುಖ್‌ಗೆ ಹಾಜರಾಗಲು ಅವಕಾಶವಿಲ್ಲವಾಗಿದೆ.

'ಎಂಸಿಎಯಿಂದ ಡಿಬಾರ್ ಆದ ನಿರ್ದಿಷ್ಟ ವ್ಯಕ್ತಿಯನ್ನು ವಾಂಖೇಡೆ ಸ್ಟೇಡಿಯಂನೊಳಗೆ ಪ್ರವೇಶಿಸದಂತೆ ಮಾಡಲು ನಾವು ನಾಳೆ ಮುಂಬೈ ಇಂಡಿಯನ್ಸ್‌ನೊಂದಿಗೆ ಷರತ್ತಿಗೆ ಸಹಿ ಹಾಕಲಿದ್ದೇವೆ. ನಿಷೇಧದ ಕುರಿತು ನಾವು ಐಪಿಎಲ್ ಆಡಳಿತ ಮಂಡಳಿ, ತಂಡದ ಮಾಲಕರು ಸೇರಿದಂತೆ ಪ್ರತಿಯೋರ್ವರಿಗೂ ತಿಳಿಸಿದ್ದೇವೆ' ಎಂದು ಎಂಸಿಎ ಜತೆ ಕಾರ್ಯದರ್ಶಿ ನಿತಿನ್ ದಲಾಲ್ ಹೇಳಿದ್ದಾರೆ.

ಕಳೆದ ವರ್ಷ ಮೇ ತಿಂಗಳಲ್ಲಿ ಐಪಿಎಲ್ ಪಂದ್ಯದ ವೇಳೆ ಭದ್ರತಾ ಸಿಬ್ಬಂದಿ ಜತೆ ಜಗಳ ಹಾಗೂ ಅಧಿಕಾರಿಗೆ ಬೆದರಿಕೆ ಒಡ್ಡಿದ ಕಾರಣಕ್ಕಾಗಿ ವಾಂಖೇಡೆ ಸ್ಟೇಡಿಯಂ ಪ್ರವೇಶಿಸದಂತೆ ಶಾರುಖ್‌ಖಾನ್‌ಗೆ ನಿಷೇಧ ಹೇರಲಾಗಿತ್ತು.

ಶಾರುಖ್ ಮೇಲಿನ ನಿಷೇಧವನ್ನು ಪುನರ್ ಪರಿಶೀಲಿಸುವಂತೆ ಬಿಸಿಸಿಐ ಎಂಸಿಎಗೆ ಮನವಿ ಮಾಡಿತ್ತು. ಎಪ್ರಿಲ್ 3 ರಿಂದ ಆರಂಭವಾಗಲಿರುವ ಐಪಿಎಲ್‌ನ ಸಂದರ್ಭ ಶಾರುಖ್‌ಗೆ ಸ್ಟೇಡಿಯಂನೊಳಗೆ ಪ್ರವೇಶಿಸಲು ಅವಕಾಶ ನೀಡಬಾರದು ಎಂದು ಭದ್ರತಾ ಸಿಬ್ಬಂದಿಗಳಿಗೆ ಎಂಸಿಎ ಆಡಳಿತ ಮಂಡಳಿ ಆದೇಶ ನೀಡಿದೆ ಎಂದು ತಿಳಿದುಬಂದಿದೆ.

English summary
Kolkata Knight Riders' owner Shah Rukh Khan will have to watch his team's IPL 6 match against Mumbai Indians at Wankhede Stadium not at the venue but on TV after Mumbai Cricket Association (MCA) decided to stick with the ban imposed on the Bollywood actor.
ಅಭಿಪ್ರಾಯ ಬರೆಯಿರಿ