Englishहिन्दीമലയാളംதமிழ்తెలుగు

ಸಿಕ್ಸರ್ ಕಿಂಗ್ ಗೇಲ್ ದಾಖಲೆ ಮುರಿಯೋಕೆ ಸಾಧ್ಯವೇ?

Posted by:
Published: Monday, April 1, 2013, 15:48 [IST]
 

ಸಿಕ್ಸರ್ ಕಿಂಗ್ ಗೇಲ್ ದಾಖಲೆ ಮುರಿಯೋಕೆ ಸಾಧ್ಯವೇ?
 

ಬೆಂಗಳೂರು, ಏ.1: ವಿಜಯ್ ಮಲ್ಯ ಅವರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಜೀವಂತ ಕಳೆ ತಂದುಕೊಟ್ಟ ವಿಂಡೀಸ್ ದೈತ್ಯ ಕ್ರಿಸ್ ಗೇಲ್ ಐಪಿಎಲ್ 6ನೇ ಆವೃತ್ತಿಯಲ್ಲಿ ಇನ್ನಷ್ಟು ಹುರುಪಿನಿಂದ ಕಣಕ್ಕಿಳಿಯುತ್ತಿದ್ದಾರೆ. ಕಳೆದ ಐಪಿಎಲ್ ಗಳ ಸಿಕ್ಸರ್ ಗಳ ಲೆಕ್ಕಾಚಾರ ಹಾಕಿದರೆ ಆರ್ ಸಿಬಿ ಆರಂಭಿಕ ಆಟಗಾರ ಗೇಲ್ ಎಲ್ಲರಿಗಿಂತ ಮುಂದೆ ನಿಲ್ಲುತ್ತಾರೆ.

ಗೇಲ್ ಹೆಸರು ಸಿಕ್ಸರ್ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿರುವುದರಲ್ಲಿ ಆಶ್ಚರ್ಯವೇನಿಲ್ಲ. ಟ್ವೆಂಟಿ20 ಕ್ರಿಕೆಟ್ ನಲ್ಲಿ 100 ಸಿಕ್ಸರ್ ಗಳನ್ನು ಸಿಡಿಸಿದ ಏಕೈಕ ಆಟಗಾರ ಕೂಡಾ ಗೇಲ್. ಚೆನ್ನೈ ಸೂಪರ್ ಕಿಂಗ್ಸ್ ನ ಸುರೇಶ್ ರೈನಾ ಶತಕದ ಗಡಿಯಲ್ಲಿದ್ದಾರೆ, ಆದರೆ, ರೈನಾ ಅವರು ಗೇಲ್ ಗಿಂತ ಹೆಚ್ಚು ಪಂದ್ಯಗಳನ್ನು ಆಡಿದ್ದಾರೆ.

ಉಳಿದಂತೆ ಮೂರನೇ ಸ್ಥಾನದಲ್ಲಿ ಕಿಂಗ್ಸ್ ‍XIನ ನಾಯಕ ಆಡಂ ಗಿಲ್ ಕ್ರಿಸ್ಟ್ ಇದ್ದಾರೆ. ಏ.3 ರಿಂದ ಸಿಕ್ಸರ್ ಗಳ ಭರಾಟೆ ಮುಂದುವರೆಯಲಿದೆ. ಅದಕ್ಕೂ ಮುನ್ನ ಈ ಹಿಂದಿನ ಐಪಿಎಲ್ ಪಂದ್ಯಗಳಲ್ಲಿ ಸಿಕ್ಸ್ ಕಿಂಗ್ ಯಾರು ನೋಡಿ...

* ಕ್ರಿಸ್ ಗೇಲ್ : 129 ಸಿಕ್ಸ್
* ಸುರೇಶ್ ರೈನಾ : 97
* ಆಡಂ ಗಿಲ್ ಕ್ರಿಸ್ಟ್ : 86
* ರೋಹಿತ್ ಶರ್ಮ: 82
* ಯೂಸುಫ್ ಪಠಾಣ್ : 81
* ವೀರೇಂದರ್ ಸೆಹ್ವಾಗ್ : 79
* ಯುವರಾಜ್ ಸಿಂಗ್: 67
* ಎಂಎಸ್ ಧೋನಿ: 64
* ಶೇನ್ ವಾಟ್ಸನ್ : 59
* ಶಾನ್ ಮಾರ್ಷ್ : 59

ದಟ್ಸ್ ಕ್ರಿಕೆಟ್

English summary
Chris Gayle is set to arrive soon in Bangalore and enthrall the crowd once again in the sixth edition of Indian Premier League (IPL 6). The big Jamaican is all set to add to his tally of 129 sixes in IPL history when he walks out to bat for Royal Challengers Bangalore.
ಅಭಿಪ್ರಾಯ ಬರೆಯಿರಿ