Englishहिन्दीമലയാളംதமிழ்తెలుగు

ಕೋಮಾಕ್ಕೆ ಜಾರಿದ ಕಿವೀಸ್ ನ ಜೆಸ್ಸಿ ರೈಡರ್

Posted by:
Updated: Thursday, March 28, 2013, 14:10 [IST]
 

ಕ್ರೈಸ್ಟ್ ಚರ್ಚ್, ಮಾ.28: ನ್ಯೂಜಿಲೆಂಡ್ ನ ದೈತ್ಯ ಬ್ಯಾಟ್ಸ್ ಮನ್ ಜೆಸ್ಸಿ ರೈಡರ್ ಮತ್ತೆ ಸಮಸ್ಯೆಗೆ ಸಿಲುಕಿದ್ದಾರೆ. ಬುಧವಾರ ರಾತ್ರಿ ಇಲ್ಲಿನ ಬಾರ್ ವೊಂದರಲ್ಲಿ ನಡೆದ ಜಗಳದಲ್ಲಿ ಸರಿಯಾಗಿ ಪೆಟ್ಟು ತಿಂದ ರೈಡರ್ ಈಗ ಅಸ್ಪತ್ರೆಯಲ್ಲಿ ಕೋಮಾವಸ್ಥೆಯಲ್ಲಿ ಮಲಗಿದ್ದಾರೆ.

ಕ್ರೈಸ್ಟ್ ಚರ್ಚ್ ಪೊಲೀಸರ ಪ್ರಕಾರ ಸುಮಾರು ನಾಲ್ಕು ಜನ ರೈಡರ್ ಮೇಲೆ ಮುಗಿ ಬಿದ್ದಿದ್ದಾರೆ. ರೈಡರ್ ತಲೆಗೆ ತೀವ್ರ ಪೆಟ್ಟಾಗಿತ್ತು. ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಪ್ರಜ್ಞಾಶೂನ್ಯರಾಗಿದ್ದರು ಎಂದಿದ್ದಾರೆ. 28 ವರ್ಷದ ಎಡಗೈ ಬ್ಯಾಟ್ಸ್ ಮನ್ ಏಪ್ರಿಲ್ ನಲ್ಲಿ ಆರಂಭವಾಗಲಿರುವ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಆಡಬೇಕಿತ್ತು. ಜೆಸ್ಸಿ ಗಲಾಟೆಗಳು ಇದೇ ಮೊದಲಲ್ಲ.

ವೆಲಿಂಗ್ಟನ್ ಪರ ಆಡುತ್ತಿರುವ ರೈಡರ್ ಅವರು ಕ್ಯಾಂಟರ್ಬರಿ ವಿರುದ್ಧದ ಪಂದ್ಯಕ್ಕಾಗಿ ಕ್ರೈಸ್ಟ್ ಚರ್ಚಿಗೆ ಬಂದಿದ್ದರು. ವೆಲಿಂಗ್ಟನ್ ತಂಡದ ಕೆಲ ಸದಸ್ಯರೊಂದಿಗೆ ಬಾರಿನಲ್ಲಿ ಕುಡಿದು ಹೊರಬಂದ ರೈಡರ್ ನಂತರ ಅಲ್ಲಿ ಮೂರು ಜನರೊಂದಿಗೆ ಏನೋ ಮಾತಿನ ಚಕಮಕಿಯಲ್ಲಿ ತೊಡಗಿದ್ದು ಕಂಡುಬಂದಿದೆ. ನಂತರ, ಆ ಮೂವರಲ್ಲಿ ಒಬ್ಬಾತ ಹೋಟೆಲೊಂದರ ಬಳಿ ರೈಡರ್ ಅವರ ಮೇಲೆ ಹಲ್ಲೆ ನಡೆಸಿದ ಎನ್ನಲಾಗಿದೆ.ಈ ಮುಂಚೆ ಕೂಡಾ ಕುಡಿತದ ಕಾರಣದಿಂದ ತಂಡದಿಂದ ಹೊರ ಹಾಕಲಾಗಿತ್ತು. ಆದರೆ, ಮತ್ತೆ ತಂಡ ಸೇರಿಕೊಂಡಿದ್ದ ಜೆಸ್ಸಿ ತನ್ನ ಚಾಳಿ ಬಿಟ್ಟಿರಲಿಲ್ಲ.

ಕೋಮಾಕ್ಕೆ ಜಾರಿದ ಕಿವೀಸ್ ನ ಜೆಸ್ಸಿ ರೈಡರ್

ಜೆಸ್ಸಿ ರೈಡರ್ ಆರೋಗ್ಯ ಸ್ಥಿತಿ ಬಗ್ಗೆ ಪ್ರಧಾನಿ ಜಾನ್ ಕೀ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ರೈಡರ್ ಚಟದ ಬಗ್ಗೆ ನನಗೆ ಗೊತ್ತಿದೆ ಆದರೆ, ಮಾರಣಾಂತಿಕ ಹಲ್ಲೆಗೊಳಬೇಕಾಗಿದ್ದರೆ ಏನೋ ನಡೆದಿರಬೇಕು. ಈ ಬಗ್ಗೆ ತೀವ್ರ ತನಿಖೆ ನಡೆಯಲಿ ಎಂದಿದ್ದಾರೆ.

ನ್ಯೂಜಿಲೆಂಡ್ ತಂಡದಿಂದ ಹಲವು ತಿಂಗಳುಗಳಿಂದ ದೂರವಿರುವ ರೈಡರ್ ಭಾರತಕ್ಕೆ ಬರಲು ಸಿದ್ಧತೆ ನಡೆಸಿದ್ದರು. ಮೊದಲು ಪುಣೆ ವಾರಿಯರ್ಸ್ ಪರ ಆಡುತ್ತಿದ್ದ ರೈಡರ್ ಈಗ ಡೆಲ್ಲಿ ಡೇರ್ ಡೆವಿಲ್ಸ್ ಗೆ ಆಯ್ಕೆಯಾಗಿದ್ದರು. 260,000 ಡಾಲರ್ ನೀಡಿ ರೈಡರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು.

ರೈಡರ್ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ 40.93 ರನ್ ಸರಾಸರಿ ಹೊಂದಿದ್ದು 201 ರನ್ ಗಳ ವೈಯಕ್ತಿಕ ಅತ್ಯಧಿಕ ಸ್ಕೋರ್ ಗಳಿಸಿದ್ದಾರೆ. ಕಳೆದ ಬಾರಿ ಪುಣೆ ವಾರಿಯರ್ಸ್ ಪರ ಆಡಲು ಬಂದಿದ್ದಾಗ ತನ್ನ ಜೊತೆ ಮ್ಯಾನೇಜರ್ ಹಾಗೂ ಮನಶಾಸ್ತ್ರಜ್ಞರೊಬ್ಬರನ್ನು ಕರೆ ತಂದಿದ್ದರು.

ಜೆಸ್ಸಿಗೆ ಬಂದಿರುವ ತೊಂದರೆಗೆ ನಾವು ಮರುಕ ಪಡುತ್ತೇವೆ. ನಮ್ಮ ಕ್ರಿಕೆಟ್ ಮಂಡಳಿ ಅವರ ಕುಟುಂಬಕ್ಕೆ ಬೇಕಾದ ನೆರವು ನೀಡುತ್ತೇವೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ ಅಸೋಸಿಯೇಷನ್ಸ್ ಸಿಇಒ ಡೇವಿಕ್ ವೈಟ್ ಹೇಳಿದ್ದಾರೆ.

Story first published:  Thursday, March 28, 2013, 12:12 [IST]
English summary
New Zealand cricketer Jesse Ryder was in an induced coma with a fractured skull and serious internal injuries on Thursday after being severely beaten as he left a bar in the South Island city of Christchurch, police said.
ಅಭಿಪ್ರಾಯ ಬರೆಯಿರಿ