Englishहिन्दीമലയാളംதமிழ்తెలుగు

ಯೂಸುಫ್ ಪಠಾಣ್ ಮದುವೆ ಸಂಭ್ರಮಕ್ಕೆ ಮೋದಿ

Posted by:
Updated: Thursday, March 28, 2013, 12:28 [IST]
 

ಮುಂಬೈ, ಮಾ.27 : ಕಳಪೆ ಫಾರ್ಮ್ ನಿಂದ ಬಳಲುತ್ತಿರುವ ಆಲ್ ರೌಂಡರ್ ಯೂಸುಫ್ ಪಠಾಣ್ ಅವರು ತಮ್ಮೆ ಜೀವನದಲ್ಲಿ ಮತ್ತೊಂದು ಇನ್ನಿಂಗ್ಸ್ ಆರಂಭಿಸಿದ್ದಾರೆ. ಬುಧವಾರ(ಮಾ.27) ರಂದು ಆಫ್ರೀನ್ ಎಂಬ ಕನ್ಯೆಯನ್ನು ಸರಳ ರೀತಿಯಲ್ಲಿ ಯೂಸುಫ್ ಪಠಾಣ್ ಮದುವೆಯಾಗಿದ್ದಾರೆ.

30 ವರ್ಷದ ಯೂಸುಫ್ ಪಠಾಣ್ ಹಾಗೂ ಆಫ್ರೀನ್ ಅವರ ಜೊತೆ ನಿಶ್ಚಿತಾರ್ಥ ಕಳೆದ ವರ್ಷ ಬರೋಡಾದ ನಾಡಿಯಾಡ್ ನ ಫಾರ್ಮ್ ಹೌಸ್ ನಲ್ಲಿ ನೇರವೇರಿತ್ತು. ಮುಂಬೈನಲ್ಲಿ ಜನಸಿರುವ ಆಫ್ರೀನ್ ಅವರು ವಡೋದರದಲ್ಲಿ ಫಿಜಿಯೋಥೆರಪಿ ಓದುತ್ತಿದ್ದಾರೆ.

ಯೂಸುಫ್ ಪಠಾಣ್ ಭಾರತದ ಪರ 57 ಏಕದಿನ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದು 1365 ರನ್ ಚೆಚ್ಚಿದ್ದಾರೆ. 22 ಟಿ20 ಪಂದ್ಯದಲ್ಲಿ 438ರನ್ ಗಳಿಸಿದ್ದಾರೆ. ಏ.4ರಿಂದ ಆರಂಭವಾಗಲಿರುವ ಐಪಿಎಲ್ 6ರಲ್ಲಿ ಕಳೆದ ಬಾರಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುತ್ತಿದ್ದಾರೆ.


ಗುರುವಾರ ಸಂಜೆ 'ಲಕ್ಷ್ಮೀ ವಿಲಾಸ್‌ ಪ್ಯಾಲೇಸ್‌'ನಲ್ಲಿ ಮದುವೆಯ ಔತಣ ಕೂಟವನ್ನು ಏರ್ಪಡಿಸಲಾಗಿದೆ. ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ, ಕ್ರಿಕೆಟ್‌ ಮಿತ್ರರೆಲ್ಲ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಇತ್ತೀಚಿಗೆ ಗುಜರಾತ್ ಚುನಾವಣೆ ಸಂದರ್ಭದಲ್ಲಿ ನರೇಂದ್ರ ಮೋದಿ ಅವರ ಪರ ಇರ್ಫಾನ್ ಪಠಾಣ್ ಅವರು ಪ್ರಚಾರದ ವೇಳೆ ಕಾಣಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಬರೋಡದ ರಾಜ ಕುಟುಂಬ ಕೂಡಾ ಆಗಮಿಸುವ ಸಾಧ್ಯತೆ ಇದೆ. ಖ್ಯಾತ ಉದ್ಯಮಿಗಳೂ ಉಪಸ್ಥಿತರಿರುತ್ತಾರೆಂದು ತಿಳಿದು ಬಂದಿದೆ. ಭವ್ಯ 'ಡಿಜೆ ನೈಟ್‌' ಕಾರ್ಯಕ್ರಮವೂ ಜರುಗಲಿದೆ. ಒಟ್ಟಾರೆ ಇದು ಪಠಾಣ್‌ ಕುಟುಂಬದ ಪಾಲಿನ ಅತ್ಯಂತ ಸ್ಮರಣೀಯ ಕಾರ್ಯಕ್ರಮವಾಗಲಿದೆ ಎಂದು ಪಠಾಣ್‌ ಸಹೋದರರ‌ ಆತ್ಮೀಯರು ಹೇಳಿದ್ದಾರೆ.

(ಪಿಟಿಐ)

Story first published:  Wednesday, March 27, 2013, 18:34 [IST]
English summary
Out-of-favour India all-rounder The 30-year-old big-hitting batsman Yusuf Pathan on Wednesday(Mar.27) tied the knot with fiancee Afreen, at a family function in Mumbai.
ಅಭಿಪ್ರಾಯ ಬರೆಯಿರಿ