Englishहिन्दीമലയാളംதமிழ்తెలుగు

ಐಸಿಸಿ ಶ್ರೇಯಾಂಕ: ಅಶ್ವಿನ್, ಪೂಜಾರಾ ಮೇಲ್ಪಂಕ್ತಿಗೆ

Posted by:
Published: Wednesday, March 27, 2013, 16:04 [IST]
 

ಬೆಂಗಳೂರು, ಮಾ.27: ಮಧ್ಯಮ ಕ್ರಮಾಂಕದ ಆಟಗಾರ ಚೇತೇಶ್ವರ್ ಪೂಜಾರಾ, ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ವೃತ್ತಿ ಜೀವನ ಉತ್ತಮ ಟೆಸ್ಟ್ ಶ್ರೇಯಾಂಕ ಪಡೆದಿದ್ದಾರೆ. ಬುಧವಾರ (ಮಾ.27) ಐಸಿಸಿ ಟೆಸ್ಟ್ ಆಟಗಾರರ ಶ್ರೇಯಾಂಕ ಪಟ್ಟಿ ಬಿಡುಗಡೆ ಮಾಡಿದೆ.

ಅಶ್ವಿನ್ ಆಲ್ ರೌಂಡರ್ ಆಗಿ ಮೂರನೇ ಸ್ಥಾನ, ಬೌಲರ್ ಆಗಿ ಆರನೇ ಸ್ಥಾನದಲ್ಲಿದ್ದಾರೆ. ಪೂಜಾರಾ ಪ್ರಥಮ ಬಾರಿಗೆ ನಂ.10ನೇ ಸ್ಥಾನಕ್ಕೇರಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ 0-4 ಅಂತರದಲ್ಲಿ ಭಾರತ ಜಯಗಳಿಸಿದ್ದರಲ್ಲಿ ಈ ಇಬ್ಬರು ಆಟಗಾರರು ಮಹತ್ವದ ಕೊಡುಗೆ ನೀಡಿದ್ದರು. ಸರಣಿಯಲ್ಲಿ 419 ರನ್(83.80 ರನ್ ಸರಾಸರಿ) ಚೆಚ್ಚಿ 5 ಸ್ಥಾನ ಮೇಲಕ್ಕೇರಿದ ಪೂಜಾರಾ 10ನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಉಳಿದಂತೆ ವಿರಾಟ್ ಕೊಹ್ಲಿ ನಾಲ್ಕು ಸ್ಥಾನ ಹಿಂದಕ್ಕೆ ಜಾರಿ 24ನೇ ಸ್ಥಾನದಲ್ಲಿದ್ದರೆ, ಮಾಸ್ಟರ್ ಬ್ಲಾಸ್ಟರ್ ಸಚಿನ್ 5 ಸ್ಥಾನ ಕಳೆದುಕೊಂಡು 26ನೇ ಸ್ಥಾನ ಪಡೆದಿದ್ದಾರೆ. ಚೆನ್ನೈನಲ್ಲಿ ದ್ವಿಶತಕ ಸಿಡಿಸಿದ ಧೋನಿ 2 ಸ್ಥಾನ ಮೇಲಕ್ಕೇರಿ 22ನೇ ಸ್ಥಾನ ಪಡೆದಿದ್ದಾರೆ. ಬ್ಯಾಟ್ಸ್ ಮನ್ ಗಳ ಪೈಕಿ ದಕ್ಷಿಣ ಆಫ್ರಿಕಾದ ಹಶೀಂ ಅಮ್ಲಾ ಟಾಪ್ ಸ್ಥಾನದಲ್ಲಿದ್ದಾರೆ.

ಬೌಲಿಂಗ್ ನಲ್ಲಿ ಅಶ್ವಿನ್ ಹಾಗೂ ರವೀಂದ್ರ ಜಡೇಜ ಉತ್ತಮ ಸಾಧನೆ ತೋರಿದ್ದಾರೆ. ಜಡೇಜ 27ನೇ ಸ್ಥಾನಕ್ಕೇರಿದ್ದರೆ, ಓಜಾ 10ನೇ ಸ್ಥಾನಕ್ಕೆ ಕುಸಿದಿದ್ದಾರೆ. ಜಹೀರ್ ಖಾನ್ 16ನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಡೇಲ್ ಸ್ಟೇನ್ ಟಾಪ್ 1 ಸ್ಥಾನದಲ್ಲಿದ್ದಾರೆ.

ಟೆಸ್ಟ್ ತಂಡ: ದಕ್ಷಿಣ ಆಫ್ರಿಕಾ ನಂ.1 ಸ್ಥಾನ ಪಡೆದು 450,000 ಯುಎಸ್ ಡಾಲರ್ ಪಡೆಯಲಿದೆ. ಭಾರತ ಮೂರನೆ ಸ್ಥಾನವನ್ನು ಪಡೆದರೆ, ಇಂಗ್ಲೆಂಡ್ ಎರಡನೆ ಸ್ಥಾನವನ್ನು ಕಾಯ್ದುಕೊಂಡಿದೆ. ಮಂಗಳವಾರ ಆಕ್ಲೆಂಡ್‌ನಲ್ಲಿ ನಡೆದ ನ್ಯೂಝಿಲೆಂಡ್ ಹಾಗೂ ಇಂಗ್ಲೆಂಡ್ ನಡುವಿನ ತೃತೀಯ ಹಾಗೂ ಕೊನೆಯ ಟೆಸ್ಟ್ ಪಂದ್ಯ ರೋಚಕ ಡ್ರಾನಲ್ಲಿ ಕೊನೆಗೊಂಡ ಹಿನ್ನೆಲೆಯಲ್ಲಿ ಇಂಗ್ಲೆಂಡ್ ತಂಡ ಎರಡನೆ ಸ್ಥಾನವನ್ನು ಉಳಿಸಿಕೊಳ್ಳಲು ಸಾಧ್ಯವಾಗಿದೆ. ಇಲ್ಲದಿದ್ದರೆ ಭಾರತ ಎರಡನೇ ಸ್ಥಾನಕ್ಕೇರಬಹುದಾಗಿತ್ತು.

ಎರಡನೆ ಸ್ಥಾನದಲ್ಲಿರುವ ಇಂಗ್ಲೆಂಡ್ 350,000 ಡಾಲರ್ ಹಾಗೂ ಮೂರನೆ ಸ್ಥಾನದಲ್ಲಿರುವ ಭಾರತ 250,000 ಡಾಲರ್ ಬಹುಮಾನವನ್ನು ಸ್ವೀಕರಿಸಲಿದೆ. ಇಂಗ್ಲೆಂಡ್ ತಂಡ ಎರಡನೆ ಸ್ಥಾನವನ್ನು ಪಡೆಯಲು ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯವನ್ನು ಗೆಲ್ಲಬೇಕಿತ್ತು ಅಥವಾ ಡ್ರಾ ಗೊಳಿಸಬೇಕಾಗಿತ್ತು.

ಭಾರತ ದ್ವಿತೀಯ ಸ್ಥಾನವನ್ನು ಪಡೆಯಲು ಆಸ್ಟ್ರೇಲಿಯ ವಿರುದ್ಧ ನಾಲ್ಕನೆ ಟೆಸ್ಟ್ ಪಂದ್ಯವನ್ನು ಗೆಲ್ಲುವುದಲ್ಲದೆ, ನ್ಯೂಜಿಲೆಂಡ್ ತಂಡ ಇಂಗ್ಲೆಂಡ್ ವಿರುದ್ಧ ಗೆಲ್ಲಬೇಕಾಗಿತ್ತು. ಕಿವೀಸ್ ಸರಣಿಯನ್ನು 1-0 ಅಂತರದಿಂದ ಗೆಲ್ಲುತ್ತಿದ್ದರೆ ಭಾರತ ಎರಡನೆ ಸ್ಥಾನಕ್ಕೆ ಜಿಗಿಯುತ್ತಿತ್ತು.

English summary
Indias middle-order batsman Cheteshwar Pujara and off-spinner Ravichandran Ashwin have achieved their career-best rankings in batting and bowling, respectively in the latest ICC Test Player Rankings released here on Wednesday. India have finished third in the ICC Test rankings
ಅಭಿಪ್ರಾಯ ಬರೆಯಿರಿ