Englishहिन्दीമലയാളംதமிழ்తెలుగు

ಫಾಸ್ಟ್ ಟ್ರ್ಯಾಕ್ ನಲ್ಲಿ ಧೋನಿ ಹುಡುಗರ ಆಟ

Posted by:
Published: Tuesday, March 26, 2013, 12:38 [IST]
 

ನೋಯ್ಡಾ, ಮಾ.26: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಸರಣಿ ಜಯ ದಾಖಲಿಸಿದ ಭಾರತ ತಂಡ ಸಂಭ್ರಮದಿಂದ ವಿಜಯೋತ್ಸವ ಆಚರಿಸಿದೆ. ನಾಯಕ ಮಹೇಂದ್ರ ಸಿಂಗ್ ಧೋನಿ ಸೇರಿದಂತೆ ತಂಡದ ಆರು ಆಟಗಾರರು, ದೇಶದ ಏಕೈಕ ಫಾರ್ಮುಲಾ ಒನ್ ಟ್ರ್ಯಾಕ್ ಬುದ್ಧ್ ಇಂಟರ್ ನ್ಯಾಷನಲ್ ಸರ್ಕ್ಯೂಟ್ (ಬಿಐಸಿ) ಬೈಕ್ ಓಡಿಸಿ ಖುಷಿ ಪಟ್ಟಿದ್ದಾರೆ.

ಬೈಕ್ ರೇಸಿಂಗ್ ತಂಡದ ಒಡೆಯರಾಗಿರುವ ಮಹೇಂದ್ರ ಸಿಂಗ್ ಧೋನಿ ಅವರು ಕಳೆದ ವರ್ಷ ಖರೀದಿಸಿದ್ದ X132 Hellcat ಬೈಕನ್ನು 5.14 ಕೀ.ಮೀ ಉದ್ದದ ಸರ್ಕ್ಯೂಟ್ನಲ್ಲಿ ಓಡಿಸಿದರು. ಇನ್ನು 2011ರಲ್ಲಿ ನಡೆದ ಉದ್ಘಾಟನಾ ಇಂಡಿಯನ್ ಗ್ರಾನ್ ಪ್ರೀಗೆ ಧ್ವಜ ಹಿಡಿದಿದ್ದ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಟ್ಯಾಕ್ಸಿ ಚಾಲನೆ ಮಾಡಿ ಕ್ರೀಡಾ ಕಾರು ಓಡಿಸಿದರು.

ವೇಗಿ ಇಶಾಂತ್ ಶರ್ಮಾ ತಮ್ಮ ಆಡಿ ಆರ್ಎಕ್ಸ್5 ಕಾರನ್ನು ಸರ್ಕ್ಯೂಟ್ನಲ್ಲಿ ಓಡಿಸಿದರೆ, ಯುವ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಸ್ಪೋರ್ಟ್ಸ್ ಕಾರೊಂದನ್ನು ಓಡಿಸುವುದರೊಂದಿಗೆ ಸಂಭ್ರಮಪಟ್ಟರು. ಸ್ಪಿನ್ನರ್ ಪ್ರಗ್ಯಾನ್ ಓಜಾ ಅವರು ಧೋನಿ ಬೈಕ್ ಮತ್ತು ಇಶಾಂತ್ ಶರ್ಮಾ ಕಾರನ್ನೂ ಓಡಿಸಿದರು. ಇನ್ನು ಅಜಿಂಕ್ಯ ರಹಾನೆ ಸಹ ವೇಗದ ಚಾಲನೆ ಮಾಡುವುದರಲ್ಲಿ ಹಿಂದೆ ಬೀಳಲಿಲ್ಲ.

ಇದೇ ಮೊದಲ ಬಾರಿಗೆ ಸರ್ಕ್ಯೂಟ್ಗೆ ಭೇಟಿ ನೀಡಿದ್ದ ಮಹೇಂದ್ರ ಸಿಂಗ್ ಧೋನಿ, ಇಲ್ಲಿಗೆ ಭೇಟಿ ನೀಡುವುದಕ್ಕೆ ವಿಳಂಬವಾಗಿದ್ದಕ್ಕೆ ಪಶ್ಚಾತಾಪ ಪಟ್ಟರು.

ಧೋನಿ ಬಾಯ್ಸ್ ಸಂಭ್ರಮದ ಚಿತ್ರಗಳನ್ನು ಮುಂದಿನ ಚಿತ್ರಸರಣಿಯಲ್ಲಿ ನೋಡಿ ಆನಂದಿಸಿ...

ಫಾಸ್ಟ್ ಟ್ರ್ಯಾಕ್ ನಲ್ಲಿ ಧೋನಿ ಬಾಯ್ಸ್

'ಇದೊಂದು ಅದ್ಭುತ ಅನುಭವ. ನಾನು ಇಲ್ಲಿಗೆ ಕೊಂಚ ವಿಳಂಬವಾಗಿ ಭೇಟಿ ನೀಡಿದ್ದೇನೆ ಅನ್ನಿಸುತ್ತಿದೆ. ಸೂಪರ್ ಸ್ಪೋರ್ಟ್ಸ್ ಸೀರೀಸ್ ರೇಸ್ ಸಂದರ್ಭ ನಾನು ಇಲ್ಲಿಗೆ ಬಂದೇ ಬರುತ್ತೇನೆ. ಸರ್ಕ್ಯೂಟ್ನಲ್ಲಿ ಹೆಲ್ಕಾಟ್ ಬೈಕ್ ಓಡಿಸಿದ್ದು ಖುಷಿಕೊಟ್ಟಿತು. ಆದರೆ, ಮುಂದಿನ ಬಾರಿ ಬರುವಾಗ ಇನ್ನೊಂದು ಸ್ಪೋರ್ಟ್ಸ್ ಬೈಕ್ ತರುತ್ತೇನೆ ' ಎಂದು ಧೋನಿ ಹೇಳಿದರು.

ಫಾಸ್ಟ್ ಟ್ರ್ಯಾಕ್ ನಲ್ಲಿ ಧೋನಿ ಬಾಯ್ಸ್

ಬಲು ಅಪರೂಪ ನಮ್ ಜೋಡಿ ಎಂಥಾ ಟ್ರ್ಯಾಕ್ ಗೂ ನಾವ್ ರೆಡಿ

ಫಾಸ್ಟ್ ಟ್ರ್ಯಾಕ್ ನಲ್ಲಿ ಧೋನಿ ಬಾಯ್ಸ್

ಕಾರು, ಬೈಕು, ಕ್ರಿಕೆಟ್ ಎಲ್ಲಕೂ ನಾನೇ ನಾಯಕ

ಫಾಸ್ಟ್ ಟ್ರ್ಯಾಕ್ ನಲ್ಲಿ ಧೋನಿ ಬಾಯ್ಸ್

ಬಿಐಸಿ ಟ್ರ್ಯಾಕ್ ನಲ್ಲಿ ಸ್ಪಿನ್ನರ್ ಓಜಾ ಹಾಗೂ ಬ್ಯಾಟ್ಸ್ ಮನ್ ಕೊಹ್ಲಿ

ಫಾಸ್ಟ್ ಟ್ರ್ಯಾಕ್ ನಲ್ಲಿ ಧೋನಿ ಬಾಯ್ಸ್

ರೇಸ್ ಚಾಂಪಿಯನ್ ಗಳ ಸುದ್ದಿಗೋಷ್ಠಿ ಅಜಿಂಕ್ಯ ರಹಾನೆ, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಜೊತೆ ಎಂಎಸ್ ಧೋನಿ

English summary
Indian cricketers including captain MS Dhoni and Sachin Tendulkar enjoyed life on the fast lane when they headed to the Buddh International Circuit (BIC) here on Monday.A day after completing 4-0 whitewash over Australia in New Delhi, Indian cricketers spent time at the track which hosts Formula One races annually.
ಅಭಿಪ್ರಾಯ ಬರೆಯಿರಿ