Englishहिन्दीമലയാളംதமிழ்తెలుగు

ಸಚಿನ್ ಹೇಳಿದ್ದು ದೆಹಲಿಗೆ ವಿದಾಯ, ಟೆಸ್ಟಿಗಲ್ಲ

Posted by:
Published: Monday, March 25, 2013, 17:40 [IST]
 

ನವದೆಹಲಿ, ಮಾ.25: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ನಿವೃತ್ತಿ ಘೋಷಣೆಗೆ ಕಾಯ್ದುಕೊಂಡಿರುವಂತೆ ಮಾಧ್ಯಮಗಳಲ್ಲಿ ವರದಿಗಳು ಬಂದಿದ್ದಕ್ಕೆ ನಾಯಕ ಎಂಎಸ್ ಧೋನಿ ತುಸು ಸಿಟ್ಟಾಗಿದ್ದಾರೆ. ಸಚಿನ್ ತೆಂಡೂಲ್ಕರ್ ವಿದಾಯ ಹೇಳಿದ್ದು ದೆಹಲಿಗೆ ಮಾತ್ರ ಟೆಸ್ಟ್ ಕ್ರಿಕೆಟ್ ಗಲ್ಲ. ಸುಮ್ಮನೆ ತಪ್ಪು ಮಾಹಿತಿ ಹರಡಬೇಡಿ ಎಂದು ಧೋನಿ ಹೇಳಿದ್ದಾರೆ,

ಡಿಸೆಂಬರ್ 2012ರಲ್ಲಿ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದರು. ಅಲ್ಲಿಂದ ಮೊದಲುಗೊಂಡು ನೂರು ಶತಕಗಳ ವೀರನನ್ನು ಟೆಸ್ಟ್ ಕ್ರಿಕೆಟ್ ನಿಂದಲೂ ದೂರಾಗುವಂತೆ ಮಾಡಲು ಮಾಧ್ಯಮಗಳು ಒತ್ತಡ ಹಾಕುವುದಕ್ಕೆ ಅನೇಕ ಹಿರಿಯ ಆಟಗಾರರು, ಸಹ ಆಟಗಾರರ ಜೊತೆಗೆ ಅಸಂಖ್ಯ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ನಾಲ್ಕನೇ ಟೆಸ್ಟ್ ಸ್ಕೋರ್ ಕಾರ್ಡ್ ನೋಡಿ

ಭಾರತ ತನ್ನ ಮುಂದಿನ ಟೆಸ್ಟ್ ಸರಣಿಯನ್ನು ದಕ್ಷಿಣ ಆಫ್ರಿಕಾ ವಿರುದ್ಧ ದಕ್ಷಿಣ ಆಫ್ರಿಕಾದಲ್ಲಿ ಆಡುತ್ತಿದ್ದು ನವೆಂಬರ್ ತನಕ ಸಚಿನ್ ಅವರಿಗೆ ಟೆಸ್ಟ್ ಕ್ರಿಕೆಟ್ ಆಡುವ ಅವಕಾಶವಿಲ್ಲ. ಆದರೆ, ಏ.3 ರಿಂದ ಆರಂಭವಾಗಲಿರುವ ಐಪಿಎಲ್ 6 ರಲ್ಲಿ ಸಚಿನ್ ಅವರು ಮುಂಬೈ ಇಂಡಿಯನ್ಸ್ ಪರ ಬ್ಯಾಟ್ ಬೀಸಲಿದ್ದಾರೆ.

ದೆಹಲಿಯ ಫಿರೋಜ್ ಶಾ ಮೈದಾನದಲ್ಲಿ ಭಾನುವಾರ (ಮಾ.24) ಪ್ರವಾಸಿ ಆಸ್ಟ್ರೇಲಿಯಾ ತಂಡದ ವಿರುದ್ಧ ಐತಿಹಾಸಿಕ ವಿಜಯ ದಾಖಲಿಸಿದ ಖುಷಿಯನ್ನು ಸಚಿನ್ ತೆಂಡೂಲ್ಕರ್ ಸೇರಿದಂತೆ ಟೀಂ ಇಂಡಿಯಾ ಸಂಭ್ರಮದಿಂದ ಆಚರಿಸಿಕೊಂಡಿದೆ. ಈ ಸಂಭ್ರಮಾಚರಣೆ, ದೆಹಲಿ ಮೈದಾನಕ್ಕೆ ವಿದಾಯ ಹೇಳುತ್ತಿರುವ ಸಚಿನ್ ಅವರ ವಿಶೇಷ ಚಿತ್ರಗಳು ಕ್ರಿಕೆಟ್ ಅಭಿಮಾನಿಗಳಿಗಾಗಿ ದಟ್ಸ್ ಕ್ರಿಕೆಟ್ ಸಂಗ್ರಹಿಸಿ ನೀಡುತ್ತಿದೆ.. ಮುಂದೆ ಸ್ಲೈಡ್ ಗಳಲ್ಲಿ ನೋಡಿ

ಆಸೀಸ್ ವಿರುದ್ಧ ವಿಕ್ರಮ, ಟೀಂ ಇಂಡಿಯಾ ಸಂಭ್ರಮ

ಬಾರ್ಡರ್-ಗವಾಸ್ಕರ್ ಟ್ರೋಫಿಯೊಂದಿಗೆ ಟೀಂ ಇಂಡಿಯಾ

ಆಸೀಸ್ ವಿರುದ್ಧ ವಿಕ್ರಮ, ಟೀಂ ಇಂಡಿಯಾ ಸಂಭ್ರಮ

ಬಾರ್ಡರ್-ಗವಾಸ್ಕರ್ ಟ್ರೋಫಿಯೊಂದಿಗೆ ದ್ವಿಶತಕ ವೀರ ನಾಯಕ ಎಂಎಸ್ ಧೋನಿ, ಗವಾಸ್ಕರ್

ಆಸೀಸ್ ವಿರುದ್ಧ ವಿಕ್ರಮ, ಟೀಂ ಇಂಡಿಯಾ ಸಂಭ್ರಮ

ಅಬ್ಬಾ ಏನು ಭಾರ ಇದೆ ಎನ್ನುತ್ತಿರುವ ಮಧ್ಯಮ ಕ್ರಮಾಂಕದ 'ವಿಕ್ರಮ' ವಿರಾಟ್ ಕೊಹ್ಲಿ

ಆಸೀಸ್ ವಿರುದ್ಧ ವಿಕ್ರಮ, ಟೀಂ ಇಂಡಿಯಾ ಸಂಭ್ರಮ

ಏನ್ ತಿರುಗಿಸುತ್ತಿಯಾ ಮರಾಯ ಎಂದು 'ಸರ್' ಜಡೇಜಗೆ ಪ್ರಶಂಸಿಸುತ್ತಿರುವ ಕೊಹ್ಲಿ, ಧೋನಿ, ಓಝಾ ಕೂಡಾ ಜೊತೆಯಲ್ಲಿ

ಆಸೀಸ್ ವಿರುದ್ಧ ವಿಕ್ರಮ, ಟೀಂ ಇಂಡಿಯಾ ಸಂಭ್ರಮ

ಭರ್ಜರಿ ಆಟ ಪ್ರದರ್ಶಿಸಿದ ಅಭಿನವ 'ದ್ರಾವಿಡ್' ಚೇತೇಶ್ವರ ಪೂಜಾರಾ

ಆಸೀಸ್ ವಿರುದ್ಧ ವಿಕ್ರಮ, ಟೀಂ ಇಂಡಿಯಾ ಸಂಭ್ರಮ

ವಿನ್ನಿಂಗ್ ರನ್ ಹೊಡೆಯುವುದೆಂದರೆ ನಾಯಕ ಧೋನಿಗೆ ಎಲ್ಲಿಲ್ಲದ ಖುಷಿ

ದೆಹಲಿ ಮೈದಾನಕ್ಕೆ ಸಚಿನ್ ವಿದಾಯ

ಪ್ರೇಕ್ಷಕರತ್ತ ಕೈ ಬೀಸಿ ವಿದಾಯ ಹೇಳಿದ ಸಚಿನ್ ತೆಂಡೂಲ್ಕರ್

ದೆಹಲಿ ಮೈದಾನಕ್ಕೆ ಸಚಿನ್ ವಿದಾಯ

ವಿರಾಟ್ ಕೊಹ್ಲಿ ಜೊತೆ ಸಚಿನ್ ತೆಂಡೂಲ್ಕರ್

ದೆಹಲಿ ಮೈದಾನಕ್ಕೆ ಸಚಿನ್ ವಿದಾಯ

ಟ್ರೋಫಿ ಮೇಲೆ ಏನು ಬರೆದಿದೆ ಎಂದು ಗಮನಿಸುತ್ತಿರುವ ಕ್ರಿಕೆಟ್ ದೇವರು

ದೆಹಲಿ ಮೈದಾನಕ್ಕೆ ಸಚಿನ್ ವಿದಾಯ

ನಾಲ್ಕನೇ ಟೆಸ್ಟ್ ನ ಎರಡನೆ ಇನ್ನಿಂಗ್ಸ್ ನಲ್ಲಿ ಸಚಿನ್ ತೆಂಡೂಲ್ಕರ್ ಕೇವಲ 1 ರನ್ ಗಳಿಸಿ ನ್ಯಾಥನ್ ಲಿಯಾನ್ ಸ್ಪಿನ್ ಗೆ ಬಲಿಯಾಗಿ ಪೆವಿಲಿಯನ್ ಗೆ ತೆರಳಿದ ಸಮಯ

ದೆಹಲಿ ಮೈದಾನಕ್ಕೆ ಸಚಿನ್ ವಿದಾಯ

ಸಚಿನ್ ತೆಂಡೂಲ್ಕರ್ ಜೊತೆ ಹೆಜ್ಜೆ ಹಾಕಿದ ಸಂಭ್ರಮದಲ್ಲಿ ಆಸೀಸ್ ಆಟಗಾರರು

ಸಚಿನ್ ತೆಂಡೂಲ್ಕರ್

ಬಾರ್ಡರ್ ಗವಾಸ್ಕರ್ ಟ್ರೋಫಿಯೊಂದಿಗೆ ಸಚಿನ್ ತೆಂಡೂಲ್ಕರ್

English summary
Just before the start of the Test and during the three days at Feroz Shah Kotla, speculations were rife that the match could be Sachin Tendulkar's last as an international player. But those rumours were put to rest and India completed a historic 4-0 whitewash over Australia on Sunday (March 24).
ಅಭಿಪ್ರಾಯ ಬರೆಯಿರಿ