Englishहिन्दीമലയാളംதமிழ்తెలుగు

ಆರ್ ಸಿಬಿ ಪಂದ್ಯಕ್ಕೆ ಕಿಂಗ್ ಫಿಷರ್ ಸಿಬ್ಬಂದಿ ಭೀತಿ

Posted by:
Updated: Thursday, March 21, 2013, 19:35 [IST]
 

ಆರ್ ಸಿಬಿ ಪಂದ್ಯಕ್ಕೆ ಕಿಂಗ್ ಫಿಷರ್ ಸಿಬ್ಬಂದಿ ಭೀತಿ
 

ಬೆಂಗಳೂರು, ಮಾ.21: ಸುಮಾರು 10 ತಿಂಗಳಿನಿಂದ ತಿಂಗಳ ಸಂಬಳ ಕಾಣದೆ ಕಂಗಾಲಾಗಿರುವ ಕಿಂಗ್ ಫಿಷರ್ ಸಿಬ್ಬಂದಿಗಳು ವಿಜಯ್ ಮಲ್ಯ ಅವರ ಆರ್ ಸಿಬಿ ತಂಡದ ಪಂದ್ಯಗಳಿಗೆ ಅಡ್ಡ ನಿಲ್ಲಲು ನಿರ್ಧರಿಸಿದ್ದಾರೆ.

ಕಿಂಗ್ ಫಿಷರ್ ಸಂಸ್ಥೆ ಆರ್ಥಿಕವಾಗಿ ದಿನೇ ದಿನೇ ಮುಳುಗುತ್ತಿದ್ದರು ಎಫ್ 1 ಹಾಗೂ ಕ್ರಿಕೆಟ್ ಪಂದ್ಯ ನೋಡಲು ತುದಿಗಾಲಲ್ಲಿ ನಿಲ್ಲುವ ಮಲ್ಯ ಬಗ್ಗೆ ಕೆಎಫ್ ಎ ಸಿಬ್ಬಂದಿಗೆ ಕೆಂಡದಂಥ ಕೋಪ ಬಂದಿದೆ. ಹೀಗಾಗಿ ಏ.3 ರಿಂದ ಆರಂಭವಾಗಲಿರುವ ಇಂಡಿಯನ್ ಪ್ರಿಮಿಯರ್ ಲೀಗ್ ನ ಆರನೇ ಆವೃತ್ತಿಯ ಪಂದ್ಯಗಳಿಗೆ ಅಡ್ಡಿ ಉಂಟುವ ಬೆದರಿಕೆ ಒಡ್ಡಿದ್ದಾರೆ. ಮಲ್ಯ ಅವರಿಗೆ ಶಿಕ್ಷೆ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಮುಂದಾಗಿದ್ದಾರೆ.

ಎಂಡಿಎಲ್ ಆರ್ ಏರ್ ಲೈನ್ಸ್ ನ ಮಾಲೀಕ ಹರ್ಯಾಣದ ಮಾಜಿ ಸಚಿವ ಗೋಪಾಲ್ ಕಂಡಾ ಅವರ ಮೇಲೆ ಸಿಬ್ಬಂದಿಗೆ ಕಿರುಕುಳ ಹಾಗೂ ಆತ್ಮಹತ್ಯೆಗೆ ಕಾರಣ ಎಂಬ ಆರೋಪ ಹೊರೆಸಲಾಗಿದೆ. ಇದೇ ರೀತಿ ಆರೋಪವನ್ನು ವಿಜಯ್ ಮಲ್ಯ ಅವರ ಮೇಲೆ ಮಾಡಲು ನಾವು ಸಿದ್ಧರಾಗಿದ್ದೇವೆ ಎಂದು ಕಿಂಗ್ ಫಿಷರ್ ಏರ್ ಲೈನ್ ನಿರ್ವಾಹಕರ ಅಸೋಸಿಯೇಷನ್ ಅಧ್ಯಕ್ಷ ಸಂತೋಷ್ ಗೌತಮ್ ಪ್ರಶ್ನಿಸಿದ್ದಾರೆ.

ಆರ್ ಸಿಬಿ ಆಟಗಾರರಂತೆ ನಾವು ಮಲ್ಯ ಅವರ ತಂಡದ ಸಿಬ್ಬಂದಿಗಳು ನಮಗೆ ಅನ್ಯಾಯವಾಗಿರುವ ಸಂದರ್ಭದಲ್ಲಿ ಆರ್ ಸಿಬಿ ಆಟಗಾರರು ಮಜಾ ಮಾಡುವುದು ಎಷ್ಟು ಸರಿ? ಆರ್ ಸಿಬಿ ಆಟಗಾರರು ಮಲ್ಯ ತಂಡದಿಂದ ಹೊರ ಬರಬೇಕು. ಬಿಸಿಸಿಐ ಆರ್ ಸಿಬಿ ಮೇಲೆ ನಿರ್ಬಂಧ ಹೇರಿ ಯಾವುದೇ ಐಪಿಎಲ್ ಪಂದ್ಯ ಆಡದಂತೆ ತಡೆಯಬೇಕು ಎಂದು ಸಂತೋಷ್ ಆಗ್ರಹಿಸಿದ್ದಾರೆ.

ಈ ಹಿಂದೆ ಎಫ್ 1 ರೇಸ್ ಗೆ ಹಾನಿ ಉಂಟಾಗಲಿದೆ ಎಂಬ ಭಯದಿಂದ ಅಲ್ಪಸ್ವಲ್ಪ ಸಂಬಳ ನೀಡಿದ್ದರು. ಒಂದು ತಿಂಗಳ ನಂತರ ಮತ್ತೆದೇ ಚಾಳಿ ಶುರುವಾಯಿತು. ಹಂತ ಹಂತವಾಗಿ ಸಂಬಳ ನೀಡುತ್ತಾರೆ ಎಂಬ ಭರವಸೆಯೂ ಸುಳ್ಳಾಯಿತು. ಆರ್ ಸಿಬಿ ಪಂದ್ಯಗಳು ನಡೆಯುವ ಕ್ರೀಡಾಂಗಣದ ಎದುರು ನಾವು ಪ್ರತಿಭಟನೆ ಹಮ್ಮಿಕೊಳ್ಳುತ್ತಿದ್ದೇವೆ ಎಂದು ಸಂತೋಷ್ ಹೇಳಿದರು.

ಈಗಾಗಲೇ ಕೆಎಫ್ ಎ ಸಿಬ್ಬಂದಿಗಳು ಕಾರ್ಮಿಕರ ಕಿರುಕುಳದ ಬಗ್ಗೆ ವಿವರಿಸಿ, ಕಾಯ್ದೆ ಉಲ್ಲೇಖಿಸಿ ರಾಷ್ಟ್ರಾಧ್ಯಕ್ಷ, ಪ್ರಧಾನಮಂತ್ರಿ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ನಾಗರಿಕ ವಿಮಾನಯಾನ ಸಚಿವ ಅಜಿತ್ ಸಿಂಗ್ ಹಾಗೂ ಡಿಜಿಸಿಎ ಮುಖ್ಯಸ್ಥ ಅರುಣ್ ಮಿಶ್ರಾ ಅವರಿಗೆ ಪತ್ರ ಬರೆದಿದೆ.

Story first published:  Thursday, March 21, 2013, 19:15 [IST]
English summary
Frustrated over not getting salary for last 10 months, Kingfisher Airlines employees on Wednesday asked the government to prosecute promoter Vijay Mallya and threatened to disrupt IPL 6 matches.
ಅಭಿಪ್ರಾಯ ಬರೆಯಿರಿ