Englishहिन्दीമലയാളംதமிழ்తెలుగు

ದಿಲ್ಶನ್, ಸಂಗಕ್ಕಾರ, ಮಾಲಿಂಗಗೆ ಭಯ ಬೇಡ

Posted by:
Updated: Wednesday, March 20, 2013, 19:27 [IST]
 

ಚೆನ್ನೈ, ಮಾ.19: ಯುಪಿಎ ಸರ್ಕಾರಕ್ಕೆ ಡಿಎಂಕೆ ವಾಪಸ್ ತೆಗೆದುಕೊಂಡಿದ್ದೇ ಬಂತು ರಾಜಕೀಯ ಕ್ಷೇತ್ರ ಮಾತ್ರವಲ್ಲದೆ, ಮಾಧ್ಯಮ, ವಿಮಾನಯಾನ, ಕ್ರೀಡೆ ಎಲ್ಲಾ ಕ್ಷೇತ್ರದಲ್ಲೂ ಅದರ ಬಿಸಿ ಪರೋಕ್ಷವಾಗಿ ತಟ್ಟಿದೆ. ಚೆನ್ನೈನಲ್ಲಿ ಶ್ರೀಲಂಕನ್ನರಿಗೆ ರಕ್ಷಣೆ ಸಿಗುತ್ತದೆ ಎಂಬ ಭರವಸೆ ನೀಡಲು ಸಾಧ್ಯವೇ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಬಿಸಿಸಿಐಗೆ ಪ್ರಶ್ನೆ ಎಸೆದಿದೆ.

'ಹೋ ಅದಕ್ಕೇನಂತೆ ನಿಮ್ಮ ಆಟಗಾರರು ತುಂಬಾ ಸುರಕ್ಷಿತವಾಗಿ ಇಲ್ಲಿ ಆಟವಾಡಬಹುದು. ಯಾವುದೇ ಪಂದ್ಯಗಳನ್ನು ನಾವು ರದ್ದು ಮಾಡ್ತಾ ಇಲ್ಲ. ಡೋಂಟ್ ವೆರಿ' ಎಂದು ಇಂಡಿಯನ್ ಪ್ರಿಮಿಯರ್ ಲೀಗ್ ಎಂಬ ಹಣದ ಹೊಳೆ ಹರಿಸುವ ಚುಟುಕು ಕ್ರೀಡಾಕೂಟದ ಚೇರ್ಮನ್ ರಾಜೀವ್ ಶುಕ್ಲಾ ಭರವಸೆ ನೀಡಿದ್ದಾರೆ.

ಆದರೆ, ಚೆನ್ನೈನಲ್ಲಿ ಸುಮಾರು 10ಕ್ಕೂ ಅಧಿಕ ಪಂದ್ಯವಾಡಬೇಕಿರುವ 11 ಕ್ಕೂ ಅಧಿಕ ಶ್ರೀಲಂಕಾ ಆಟಗಾರರಿಗೆ ಭಯ ಇನ್ನೂ ಕಡಿಮೆಯಾಗಿಲ್ಲ. ಏ.3 ರಿಂದ ಐಪಿಎಲ್ 6ನೇ ಆವೃತ್ತಿಗೆ ಭರ್ಜರಿ ಆರಂಭ ಸಿಗಲಿದೆ.

ಐಪಿಎಲ್ 6 ರ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಪಂದ್ಯಗಳು ನಿಗದಿಯಂತೆ ನಡೆಯಲಿದೆ. ಶ್ರೀಲಂಕಾ ಆಟಗಾರರ ಸುರಕ್ಷತೆ ಬಗ್ಗೆ ತಮಿಳುನಾಡು ಸರ್ಕಾರದೊಡನೆ ಮಾತನಾಡುತ್ತೇನೆ ಎಂದು ಸಂಸತ್ ಅಧಿವೇಶನದಿಂದ ಹೊರ ಬಂದ ನಂತರ ರಾಜೀವ್ ಶುಕ್ಲಾ ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಶ್ರೀಲಂಕಾದಿಂದ ಯಾವುದೇ ತಂಡ ಇಲ್ಲಿಗೆ ಕರೆಸಿಕೊಳ್ಳುತ್ತಿಲ್ಲ. ಕೆಲವು ಆಟಗಾರರು ಭಾಗವಹಿಸುತ್ತಿದ್ದಾರೆ. ಹೀಗಾಗಿ ಯಾವುದೇ ತೊಂದರೆಯಾಗುವುದಿಲ್ಲ ಎಂದು ಶುಕ್ಲಾ ಹೇಳಿದ್ದಾರೆ. SLCPA ಲಂಕಾದ ಕ್ರಿಕೆಟ್ ಮಂಡಳಿ ಆಟಗಾರರ ಸುರಕ್ಷತೆ ಬಗ್ಗೆ ಇನ್ನೂ ಆತಂಕ ವ್ಯಕ್ತಪಡಿಸಿ ಪತ್ರ ಬರೆದಿದೆ.

ಹೊಸದಾಗಿ ರೂಪುಗೊಂಡಿರುವ ಸನ್ ರೈಸರ್ಸ್ ಹೈದರಾಬಾದ್ ತಂಡದ ಕುಮಾರ ಸಂಗಕ್ಕಾರ, ಮಹೇಲ ಜಯವರ್ಧನೆ, ಲಸಿತ್ ಮಾಲಿಂಗ, ತಿಲಕರತ್ನೆ ದಿಲ್ಶನ್, ತಿಸಾರ ಪೆರೆರಾ, ನುವಾನ್ ಕುಲಶೇಖರ್, ಏಂಜೆಲೊ ಮ್ಯಾಥ್ಯುಸ್ ಸೇರಿದಂತೆ ಇತರೆ ಆಟಗಾರರು ವಿವಿಧ ಐಪಿಎಲ್ ತಂಡಗಳ ಭಾಗವಾಗಿದ್ದಾರೆ. ಚೆನ್ನೈ ಮೂಲದ ಸೂಪರ್ ಕಿಂಗ್ಸ್ ತಂಡದಲ್ಲೂ ಲಂಕಾ ಆಟಗಾರರಿದ್ದಾರೆ. ಚೆನ್ನೈನಲ್ಲಿ ಇನ್ನೂ ಲಂಕಾ ವಿರೋಧಿ ಅಲೆ ಸುತ್ತಾಡುತ್ತಲೇ ಇದೆ.

ಐಪಿಎಲ್‌ 6ರಲ್ಲಿ ಶ್ರೀಲಂಕಾದ 13 ಆಟಗಾರರು ಭಾಗವಹಿಸುತ್ತಿದ್ದಾರೆ. ಅಖಿಲ ಧನಂಜಯ ಹಾಗೂ ನುವಾನ್ ಕುಲಶೇಖರ(ಚೆನ್ನೈ ಸೂಪರ್‌ಕಿಂಗ್ಸ್), ಜೀವನ್ ಮೆಂಡಿಸ್ ಹಾಗೂ ಮಹೇಲ ಜಯವರ್ಧನೆ(ಡೆಲ್ಲಿ ಡೇರ್‌ಡೆವಿಲ್ಸ್), ಸಚಿತ್ರಾ ಸೇನಾನಾಯಕೆ(ಕೋಲ್ಕತಾ ನೈಟ್‌ರೈಡರ್ಸ್), ಲಸಿತ ಮಾಲಿಂಗ(ಮುಂಬೈ ಇಂಡಿಯನ್ಸ್), ಅಜಂತಾ ಮೆಂಡಿಸ್ ಹಾಗೂ ಆ್ಯಂಜೆಲೊ ಮ್ಯಾಥ್ಯೂಸ್(ಪುಣೆ ವಾರಿಯರ್ಸ್), ಕುಶಾಲ್ ಪಿರೇರಾ(ರಾಜಸ್ಥಾನ ರಾಯಲ್ಸ್), ಮುತ್ತಯ್ಯ ಮರಳೀಧರನ್ ಹಾಗೂ ತಿಲಕರತ್ನೆ ದಿಲ್ಶನ್(ಆರ್‌ಸಿಬಿ) ಕುಮಾರ ಸಂಗಕ್ಕರ ಹಾಗೂ ತಿಸ್ಸರ ಪಿರೇರಾ(ಸನ್‌ರೈಸ್ ಹೈದರಾಬಾದ್).

ಕ್ರಿಕೆಟ್ ಪ್ರೇಮಿಗಳಿಗೆ ಟಿ20 ಕಾವು ಹೆಚ್ಚಿಸಲು ದಟ್ಸ್ ಕ್ರಿಕೆಟ್ ಕೂಡಾ ಸಜ್ಜಾಗುತ್ತಿದೆ. ಈ ಬಾರಿ ಐಪಿಎಲ್ ನಲ್ಲಿ ಆಡುವ 9 ತಂಡಗಳ ಆಟಗಾರರ ಪ್ರತ್ಯೇಕ ವ್ಯಕ್ತಿ ಚಿತ್ರಣ ಓದುಗರಿಗೆ ಲಭ್ಯವಾಗಲಿದೆ. ಪ್ರತಿ ಪಂದ್ಯದ ಲೈವ್ ಸ್ಕೋರ್ ಕಾರ್ಡ್, ಸಮಗ್ರ ವೇಳಾಪಟ್ಟಿ, ಪಂದ್ಯಗಳ ಫಲಿತಾಂಶ, ಸುದ್ದಿ, ವಿಶ್ಲೇಷಣೆ ಇನ್ನಿತರ ಅಂಕಿ ಅಂಶಗಳು ಪ್ರತಿದಿನ ಅಭಿಮಾನಿಗಳಿಗೆ ಲಭ್ಯವಾಗಿರುತ್ತದೆ.[ ಐಪಿಎಲ್ 6 : ಎಲ್ಲಾ ಆಟಗಾರರ ಸಂಪೂರ್ಣ ಪಟ್ಟಿ]

ಐಪಿಎಲ್ 6 ಏ.3 ರಂದು ಆರಂಭವಾಗಿ ಮೇ 26 ರಂದು ಮುಕ್ತಾಯಗೊಳ್ಳಲಿದೆ. ಸಂಜೆ 4 ಗಂಟೆಗೆ ಮೊದಲ ಪಂದ್ಯ 8 ಗಂಟೆಗೆ ಎರಡನೇ ಪಂದ್ಯ ಆರಂಭ. ಇತ್ತೀಚೆಗೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 101 ಮಂದಿ ಆಟಗಾರರು ಕಾಣಿಸಿಕೊಂಡಿದ್ದರೂ 37 ಮಂದಿ ಮಾತ್ರ ಮಾರಾಟವಾಗಿ ವಿವಿಧ ತಂಡ ಸೇರ್ಪಡೆಗೊಂಡರು. 64 ಮಂದಿ ಮಾರಾಟವಾಗದೆ ಉಳಿದರು. 24ರ ಹರೆಯದ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ ಅತ್ಯಧಿಕ ಮೊತ್ತಕ್ಕೆ ಹರಜಾಗಿದ್ದರು.

Story first published:  Tuesday, March 19, 2013, 18:03 [IST]
English summary
After Sri Lanka Cricket Players' Association expressed concerns over ongoing attacks against Sri Lankan nationals in Tamil Nadu, IPL commissioner Rajiv Shukla today said that there is no threat to the upcoming mega-tournament, scheduled to commence from April 3.
ಅಭಿಪ್ರಾಯ ಬರೆಯಿರಿ