Englishहिन्दीമലയാളംதமிழ்తెలుగు

ಚೊಚ್ಚಲ ಪಂದ್ಯದಲ್ಲೇ ತ್ವರಿತ ಶತಕ ಚೆಚ್ಚಿದ ಧವನ್

Posted by:
Updated: Saturday, March 16, 2013, 17:05 [IST]
 

ಮೊಹಾಲಿ, ಮಾ.16:ಚೊಚ್ಚಲ ಪಂದ್ಯದಲ್ಲೇ ಭರ್ಜರಿಯಾಗಿ ತ್ವರಿತಗತಿಯಲ್ಲಿ ಶಿಖರ್ ಧವನ್ ಶತಕ ಸಿಡಿಸಿ ಹೊಸ ದಾಖಲೆ ಬರೆದಿದ್ದಾರೆ. 85 ಎಸೆತದಲ್ಲಿ ಶತಕ ಗಳಿಸಿದ ಧವನ್ ಅವರು ಮ್ಯಾಟ್ ಪಿಯರ್ ಹೆಸರಿನಲ್ಲಿದ್ದ ದಾಖಲೆ ಅಳಿಸಿ ಹಾಕಿದರು. ಧವನ್ ಧಮಾಕದಿಂದ ಮೂರನೇ ದಿನದ ಅಂತ್ಯಕ್ಕೆ ಭಾರತ ತಂಡ ವಿಕೆಟ್ ನಷ್ಟವಿಲ್ಲದೆ 283 ರನ್ ಗಳಿಸಿ ಸುಸ್ಥಿತಿಯಲ್ಲಿದೆ.

ಚೊಚ್ಚಲ ಪಂದ್ಯದಲ್ಲಿ ಮ್ಯಾಟ್ ಪಿಯರ್ ಅವರು 105 ಎಸೆತಗಳಲ್ಲಿ 100ರನ್ ಗಳಿಸಿದ್ದರು. ಮೂರನೇ ದಿನದ ಅಂತ್ಯಕ್ಕೆ ಮುರಳಿ ವಿಜಯ್ 83 ರನ್ (181 ಎಸೆತ, 10 ಬೌಂಡರಿ, 2 ಸಿಕ್ಸರ್) ಹಾಗೂ ಧವನ್ 185 ರನ್ (166 ಎಸೆತ, 33 ಬೌಂಡರಿ, 2 ಸಿಕ್ಸರ್) ಚೆಚ್ಚಿದರು. ಆಸ್ಟ್ರೇಲಿಯಾದ ಮೊತ್ತದಿಂದ ಭಾರತ 125 ರನ್ ಹಿಂದಿದೆ.

ಮೂರನೇ ದಿನ ಆರಂಭದಲ್ಲೇ ಆಸ್ಟ್ರೇಲಿಯಾ ತಂಡದ ಕುಸಿತಕ್ಕೆ ನಾಂದಿ ಹಾಡಬೇಕಿದ್ದ ಭಾರತ ಸ್ವಲ್ಪ ಯಾಮಾರಿತು. ಮಿಚೆಲ್ ಸ್ಟಾರ್ಕ್ ಹಾಗೂ ಸ್ಟೀವನ್ ಸ್ಮಿತ್ ಅರ್ಹ ಶತಕದಿಂದ ವಂಚಿತರಾದರು. ಆಸ್ಟ್ರೇಲಿಯಾದ ಇನ್ನಿಂಗ್ಸ್ 141.5 ಓವರ್ ಗಳಲ್ಲಿ 408 ರನ್ ಗಳಿಗೆ ಕೊನೆಗೊಂಡಿತು. ನಂತರ ಇನ್ನಿಂಗ್ಸ್ ಆರಂಭಿಸಿದ ಭಾರತದ ತಂಡ ಭರ್ಜರಿ ಆರಂಭ ಪಡೆಯಿತು. 14 ಓವರ್ ನಲ್ಲಿ ಮುರಳಿ ವಿಜಯ್ 35, ಮೊದಲ ಪಂದ್ಯವಾಡುತ್ತಿರುವ ಶಿಖರ್ ಧವನ್ 60ರನ್(60 ಎಸೆತ, 13 ಬೌಂಡರಿ)  ಹೊಡೆದಿದ್ದರು.  

ಎರಡನೇ ದಿನದ ಅಂತ್ಯಕ್ಕೆ 273 ರನ್ ಗಳಿಸಿದ್ದ ಆಸೀಸ್ ತಂಡ ಸ್ಮಿತ್ ಹಾಗೂ ಮಿಚೆಲ್ ಅದ್ಭುತ ಜೊತೆಯಾಟದ ನೆರವಿನಿಂದ ತಂಡದ ಮೊತ್ತವನ್ನು 400ರನ್ ಗಡಿ ದಾಟಿತು. ಸ್ಮಿತ್ 92 ರನ್(185 ಎಸೆತ, 10 ಬೌಂಡರಿ, 1 ಸಿಕ್ಸರ್) ಹಾಗೂ ಮಿಚೆಲ್ ಸ್ಟಾರ್ಕ್ 99 ರನ್ (144 ಎಸೆತ, 14 ಬೌಂಡರಿ) ಗಳಿಸಿ ಭಾರತದ ಬೌಲರ್ ಗಳನ್ನು ಕಾಡಿದರು.

ಭಾರತದ ಪರ ಇಶಾಂತ್ ಶರ್ಮ ಹಾಗೂ ರವೀಂದ್ರ ಜಡೇಜ ತಲಾ 3 ವಿಕೆಟ್ ಗಳಿಸಿದರೆ, ಆರ್ ಅಶ್ವಿನ್ ಹಾಗೂ ಓಜಾ ತಲಾ 2 ವಿಕೆಟ್ ಕಿತ್ತರು. ಭುವನೇಶ್ವರ್ ಕುಮಾರ್ ಯಾವುದೇ ವಿಕೆಟ್ ಪಡೆಯುವಲ್ಲಿ ವಿಫಲರಾದರು.

Story first published:  Saturday, March 16, 2013, 13:35 [IST]
English summary
India's Shikhar Dhawan blazed his way to a quick-fire ton on Test debut against Australia. His 85-ball century is the quickest ever for any batsman on debut, surpassing Matt Prior's 105-ball ton.
ಅಭಿಪ್ರಾಯ ಬರೆಯಿರಿ