Englishहिन्दीമലയാളംதமிழ்తెలుగు

ಆಸೀಸ್ ರನ್ ಗತಿಗೆ ಬ್ರೇಕ್ ಹಾಕಿದ ಜಡೇಜ ಸ್ಪಿನ್

Posted by:
Updated: Friday, March 15, 2013, 18:08 [IST]
 

ಮೊಹಾಲಿ, ಮಾ.15 : ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನ ಕಳೆದುಕೊಂಡಿದ್ದ ಭಾರತ ತಂಡ ಎರಡನೇ ನಿಧಾನಗತಿಯಲ್ಲಿ ಹಿಡಿತ ಸಾಧಿಸುತ್ತಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆಸೀಸ್ ಪಡೆ ಉತ್ತಮ ಆರಂಭ ಪಡೆಯಿತು.

ಡೇವಿಡ್ ವಾರ್ನರ್ ಹಾಗೂ ಎಡ್ ಕೋವನ್ ಅವರು 109 ರನ್ ಗಳ ಜೊತೆಯಾಟ ಭೋಜನ ವಿರಾಮದವರೆಗೂ ಕಾಯ್ದುಕೊಂಡರು. ಆದರೆ, ಭೋಜನ ವಿರಾಮದ ನಂತರ ಎರಡು ವಿಕೆಟ್ ಕಳೆದುಕೊಂಡಿತು. ನಂತರ ಎಡಗೈ ಸ್ಪಿನ್ನರ್ ಓಜಾ ಅವರು ಫಿಲಿಫ್ ಹ್ಯೂಸ್ ವಿಕೆಟ್ ಕಿತ್ತರು.

ನಂತರ ಎಡಗೈ ಸ್ಪಿನ್ನರ್ ಓಜಾ ಅವರು ಫಿಲಿಫ್ ಹ್ಯೂಸ್ ವಿಕೆಟ್ ಕಿತ್ತರು. ಆದರೆ, ನಂತರ ಬಂದ ಸ್ಟೀವನ್ ಸ್ಮಿತ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ ಕ್ರೀಸ್ ನ ಒಂದು ತುದಿಯನ್ನು ಕಾಯ್ದುಕೊಂಡು ದಿನದ ಅಂತ್ಯಕ್ಕೆ ಅರ್ಧಶತಕ 58 ರನ್(7 ಬೌಂಡರಿ, 1 ಸಿಕ್ಸರ್) ಗಳಿಸಿ ಔಟಾಗದೆ ಉಳಿದಿದ್ದಾರೆ. 2ನೇ ದಿನದ ಅಂತ್ಯಕ್ಕೆ ಆಸೀಸ್ ತಂಡ 104 ಓವರ್ ಗಳಲ್ಲಿ 273/7 ಸ್ಕೋರ್ ಮಾಡಿದೆ. ಸ್ಕೋರ್ ಕಾರ್ಡ್ ನೋಡಿ


ರವೀಂದ್ರ ಜಡೇಜ 71 ರನ್ ಗಳಿಸಿದ್ದ ಡೇವಿಡ್ ವಾರ್ನರ್ ಅವರನ್ನು ಪೆವಿಲಿಯನ್ ಗೆ ಕಳಿಸಿದರು, ನಂತರ ನಾಯಕ ಮೈಕಲ್ ಕ್ಲಾರ್ಕ್ ಅವರನ್ನು ಬಲಿ ತೆಗೆದುಕೊಂಡರು. ಬಹುದಿನಗಳ ನಂತರ ಕ್ಲಾರ್ಕ್ ಡಕ್ ಔಟ್ ಆದರು. ಕೋವನ್ 84 ರನ್ ಗಳಿಸಿ ಇನ್ನಿಂಗ್ಸ್ ಸಂಭಾಳಿಸಿದರು.

ಉಳಿದಂತೆ ಸ್ಮಿತ್ ಗೆ 21 ರನ್ ಹೊಡೆದ ಹಡ್ಡೀನ್ ಸಾಥ್ ನೀಡಿದರು. ಹೆನ್ರಿಕ್ಯೂಸ್ ಹಾಗೂ ಸಿಡ್ಲ್ ಶೂನ್ಯಕ್ಕೆ ಔಟಾದರು. ಮಿಚೆಲ್ ಸ್ಟಾರ್ಕ್ ಪ್ರತಿರೋಧ ತೋರಿ 20 ರನ್ ಗಳಿಸಿ ಔಟಾಗದೆ ಉಳಿದಿದ್ದಾರೆ. ಭಾರತದ ಪರ ಇಶಾಂತ್ ಶರ್ಮ 41ಕ್ಕೆ 2, ಅಶ್ಚಿನ್ ಹಾಗೂ ಓಜಾ ತಲಾ 1 ವಿಕೆಟ್ ಪಡೆದರೆ, ರವೀಂದ್ರ ಜಡೇಜಾ 3 ವಿಕೆಟ್ ಕಿತ್ತರು.

ಭಾರತ: ಮಹೇಂದ್ರ ಸಿಂಗ್ ಧೋನಿ(ನಾಯಕ), ಮುರಳಿ ವಿಜಯ್, ಶಿಖರ್ ಧವನ್, ಚೇತೇಶ್ವರ ಪೂಜಾರ, ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರವೀಂದ್ರ ಜಡೇಜ, ರವಿಚಂದ್ರನ್ ಅಶ್ವಿನ್, ಹರ್ಭಜನ್ ಸಿಂಗ್, ಪ್ರಗ್ಯಾನ್ ಓಜಾ, ಇಶಾಂತ್ ಶರ್ಮ, ಅಶೋಕ್ ದಿಂಡಾ, ಭುವನೇಶ್ವರ ಕುಮಾರ.

ಆಸ್ಟ್ರೇಲಿಯ: ಮೈಕಲ್ ಕ್ಲಾರ್ಕ್(ನಾಯಕ), ಎಡ್ ಕೋವನ್, ಡೇವಿಡ್ ವಾರ್ನರ್, ಫಿಲಿಪ್ಸ್ ಹ್ಯೂಸ್, ಮ್ಯಾಥ್ಯೂ ವಾಡೆ, ಗ್ಲೆನ್ ಮ್ಯಾಕ್ಸ್‌ವೆಲ್, ಪೀಟರ್ ಸಿಡ್ಲ್, ಮಿಚೆಲ್ ಸ್ಟಾರ್ಕ್, ನಥಾನ್ ಲಿನ್, ಮೊಯ್ಸಿಸ್ ಹೆನ್ರಿಕ್ಸ್, ಜೇವಿಯರ್ ಡೋಹೆರ್ಟಿ, ಸ್ಟೀವ್ ಸ್ಮಿತ್, ಬ್ರಾಡ್ ಹಡ್ಡಿನ್.

Story first published:  Friday, March 15, 2013, 13:28 [IST]
English summary
Spinners did the job for India as Australia lost quick wickets to end up scoring 273/7 at stumps in their first innings on Day 2 of the third Test at PCA in Mohali.
ಅಭಿಪ್ರಾಯ ಬರೆಯಿರಿ