Englishहिन्दीമലയാളംதமிழ்తెలుగు

ನಾಯರ್ ಎಸೆದರೆ ಆ ಓವರ್ ಗೆ ಕೊನೆಯಿಲ್ಲ

Posted by:
Updated: Wednesday, March 13, 2013, 15:05 [IST]
 

ಗುವಹಾಟಿ, ಮಾ.13: ದೇವಧರ್ ಟ್ರೋಫಿಯಿಂದ ಕರ್ನಾಟಕದ ವಿನಯ ಕುಮಾರ್ ಅವರ ದಕ್ಷಿಣ ವಲಯ ತಂಡ ಹೊರಬಿದ್ದಿದೆ. ಪಶ್ಚಿಮ ಟ್ರೋಫಿ ತಂಡ ಫೈನಲ್ ಪ್ರವೇಶಿಸಿದೆ. ಸೆಮಿಫೈನಲ್ ಪಂದ್ಯದಲ್ಲಿ ಪಶ್ಚಿಮ ವಲಯದ ಅಭಿಶೇಕ್ ನಾಯರ್ ಅವರು ಎಸೆದ ಓವರ್ ಹೊಸ ದಾಖಲೆ ನಿರ್ಮಿಸಿದ್ದು ಪಂದ್ಯದ ಆಕರ್ಷಣೆ.

ಗುವಾಹಟಿಯ ನೆಹರೂ ಕ್ರೀಡಾಂಗಣದಲ್ಲಿ ಮಾ.11 ರಂದು ನಡೆದ ಪಂದ್ಯದಲ್ಲಿ ಮುಂಬೈನ ಬಲಗೈ ಮಧ್ಯಮ ವೇಗಿ ಬೌಲ್ ಮಾಡುತ್ತಿದ್ದರೆ ವಿಂಡೀಸ್ ದೈತ್ಯ ಆಂಬ್ರೋಸ್ ನೆನಪಾದರು. ನಾಯರ್ ಆಂಬ್ರೋಸ್ ರಂತೆ ಅದ್ಭುತ ಬೌಲರ್ ಅಲ್ಲದಿದ್ದರೂ ಆಂಬ್ರೋಸ್ ಗೆ ಪೈಪೋಟಿ ನೀಡುವಂತೆ ಅತಿ ದೀರ್ಘ ಓವರ್ ಎಸೆದಿದ್ದಂತೂ ನಿಜ.

ನಾಯರ್ ತನ್ನ ಓವರ್ ನಲ್ಲಿ 10 ವೈಡ್ ಗಳು, 1 ನೋಬಾಲ್ ಎಸೆದಿದ್ದಲ್ಲದೆ ಒಂದು ವಿಕೆಟ್ ಕೂಡಾ ಪಡೆದರು. ಮೊದಲ ಎಸೆತದಲ್ಲಿ ವಿಕೆಟ್ ಕಿತ್ತ ನಾಯರ್ ಗೆ ಚೆಂಡಿನ ಮೇಲೆ ಹಿಡಿತವೇ ಇಲ್ಲದಂತೆ ಎಲ್ಲೆಂದರಲ್ಲಿ ಎಸೆತ ಹಾಕಿದರು. ಮುಂದಿನ 16 ಎಸೆತಗಳಲ್ಲಿ 13 ರನ್ ನೀಡಿದ್ದಲ್ಲದೆ 17 ಎಸೆತದ ನಂತರ ಓವರ್ ಮುಗಿಸಿದರು. 50 ಓವರ್ ಗಳ ಪಂದ್ಯದಲ್ಲಿ ಅತಿ ದೀರ್ಘ ಎಸೆತಗಳನ್ನು ಹೊಂದಿದ ಓವರ್ ಎಸೆದ ಸಾಧನೆ ನಾಯರ್ ಹೆಸರಿನಲ್ಲಿ ದಾಖಲಾಯಿತು.

ನಾಯರ್ ಎಸೆದ ಓವರ್ ಹೀಗಿತ್ತು: ವಿಕೆಟ್, 2 ರನ್, ವೈಡ್, 0, ವೈಡ್, ವೈಡ್, ವೈಡ್, 0, ವೈಡ್, 0, ವೈಡ್, ವೈಡ್, ವೈಡ್, ವೈಡ್, ವೈಡ್, ನೋಬಾಲ್, 0 (ಫ್ರೀ ಹಿಟ್)

ದಕ್ಷಿಣ ವಲಯದ ಬ್ಯಾಟ್ಸ್ ಮನ್ ಹನುಮ ವಿಹಾರಿ ಅವರನ್ನು ಮೊದಲ ಎಸೆತದಲ್ಲಿ ಔಟ್ ಮಾಡಿದ ನಾಯರ್ ನಂತರ ಆಫ್ ಸೈಡ್ ವಿಕೆಟ್ ನಿಂದ ದೂರ ಚೆಂಡು ಎಸೆದು ಎಸೆದು ಸುಸ್ತಾದರು. ದಕ್ಷಿಣ ವಲಯದ ಇನ್ನಿಂಗ್ಸ್ ನ 12 ನೇ ಓವರ್ ಇದಾಗಿತ್ತು. ಎರಡನೇ ಎಸೆತವನ್ನು ದಿನೇಶ್ ಕಾರ್ತಿಕ್ ಎದುರಿಸಿ 2 ರನ್ ಕದ್ದರು ನಂತರ ಹ್ಯಾಟ್ರಿಕ್ ವೈಡ್ ಜೊತೆ 10 ವೈಡ್ ಒಂದು ನೋಬಾಲ್ ಎಸೆದ ನಾಯರ್ ಜೊತೆಗೆ ಅಂಪೈರ್ ಕೂಡಾ ಸುಸ್ತಾಗಿಬಿಟ್ಟರು.

ಆದರೆ, ಕೊನೆಗೆ ಪಶ್ಚಿಮ ವಲಯ ತಂದ ದಕ್ಷಿಣ ವಲಯದ ಮೇಲೆ 5 ವಿಕೆಟ್ ಗಳ ಜಯ ಸಾಧಿಸಿ ಫೈನಲ್ ಪ್ರವೇಶಿಸಿತು.

ಪಾಕಿಸ್ತಾನದ ಮೊಹಮ್ಮದ್ ಸಮಿ ಕೂಡಾ 17 ಎಸೆತಗಳ ಓವರ್ ಎಸೆದಿದ್ದರು. 2004ರ ಏಷ್ಯಾ ಕಪ್ ನಲ್ಲಿ ಬಾಂಗ್ಲಾದೇಶದ ವಿರುದ್ಧ ಸಮಿ ಎಸೆತ ಓವರ್ ನಲ್ಲಿ 7 ವೈಡ್ ಗಳು ಹಾಗೂ 4 ನೋಬಾಲ್ ಗಳಿತ್ತು.

Read more about: ಕ್ರಿಕೆಟ್, cricket
Story first published:  Wednesday, March 13, 2013, 14:52 [IST]
English summary
West Zone's Abhishek Nayar bowled a 17-ball over to equal the world record during the Deodhar Trophy semi-final against South Zone here in Guhawati.
ಅಭಿಪ್ರಾಯ ಬರೆಯಿರಿ