Englishहिन्दीമലയാളംதமிழ்తెలుగు

ಹೋಂ ವರ್ಕ್ ಮಾಡಿಲ್ಲ ಎಂದು ಗೇಟ್ ಪಾಸ್

Posted by:
Updated: Wednesday, March 13, 2013, 17:35 [IST]
 

ಮೊಹಾಲಿ, ಮಾ.12: ತಂಡದಲ್ಲಿ ನಾಯಕನ ಜೊತೆ ಆಂತರಿಕ ಯುದ್ಧ ಆರಂಭವಾದರೆ ಆಯ್ಕೆದಾರರ ಗಮನಕ್ಕೆ ತಂದು ಹೊರಗಟ್ಟುವುದು ಟೀಂ ಇಂಡಿಯಾ ಸ್ಟೈಲ್, ಆಸ್ಟ್ರೇಲಿಯಾ ತಂಡದಲ್ಲಿ ಶಿಸ್ತು ಉಲ್ಲಂಘಿಸಿದರೆ ನೇರ ಗೇಟ್ ಪಾಸ್.

ಆಸ್ಟ್ರೇಲಿಯ ತಂಡ ತನ್ನ ಉಪನಾಯಕನನ್ನು ಕಳೆದು ಕೊಂಡಿದೆ. ಆಲ್‌ರೌಂಡರ್‌ ಶೇನ್‌ ವಾಟ್ಸನ್‌ ದಿಢೀರನೆ ತವರಿಗೆ ಪ್ರಯಾಣ ಬೆಳೆಸಿದ್ದಾರೆ. ಮೂರನೇ ಟೆಸ್ಟ್‌ ಪಂದ್ಯದಿಂದ ತನ್ನನ್ನು ಹೊರಹಾಕಿದ ಆಡಳಿತ ಮಂಡಳಿಯ ಕ್ರಮದಿಂದ ಅಸಮಾಧಾನಗೊಂಡ ವಾಟ್ಸನ್‌ ತವರಿಗೆ ಮರಳಿದ್ದಾರೆ ಎನ್ನಲಾಗಿದೆ.

ಆದರೆ ಮಗುವಿನ ನಿರೀಕ್ಷೆಯಲ್ಲಿರುವ ವಾಟ್ಸನ್‌ ಸ್ವದೇಶಕ್ಕೆ ಮರಳಿದ್ದು, ತಂಡದಿಂದ ಕೈಬಿಟ್ಟಿರುವ ವಿಷಯಕ್ಕೂ ಸಂಬಂಧ ಇಲ್ಲ ಎಂದು ಸುದ್ದಿ ಬಂದಿದೆ.

'ವಾಟ್ಸನ್‌ ಆಕ್ರೋಶಗೊಂಡು ತವರಿಗೆ ಮರಳಿಲ್ಲ. ಅವರ ಪತ್ನಿ ತುಂಬು ಗರ್ಭಿಣಿಯಾಗಿದ್ದು, ಪ್ರಸವ ವೇಳೆಯಲ್ಲಿ ಜತೆಗಿರಬೇಕೆಂಬ ಉದ್ದೇಶದಿಂದ ಹೋಗಿದ್ದಾರೆ. ಅವರ ಅಮಾನತಿಗೂ ಆಸ್ಟ್ರೇಲಿಯ ಪ್ರಯಾಣಕ್ಕೂ ಸಂಬಂಧ ಕಲ್ಪಿಸುವುದು ಸರಿಯಲ್ಲ...' ಎಂದು ತಂಡದ ಮೀಡಿಯಾ ಮ್ಯಾನೇಜರ್‌ ಮ್ಯಾಟ್‌ ಕೆನಿನ್‌ ಹೇಳಿದ್ದಾರೆ.

ಮಾಜಿ ಕ್ರಿಕೆಟರ್ ಗಳ ಕಿಡಿ: ಶೇನ್ ವಾಟ್ಸನ್ ಸೇರಿದಂತೆ ನಾಲ್ವರು ಆಟಗಾರರನ್ನು ಶಿಸ್ತು ಕ್ರಮದ ಹೆಸರಿನಲ್ಲಿ ತಂಡದಿಂದ ಹೊರಗಟ್ಟಿರುವ ಕ್ರಮವನ್ನು ಮಾಜಿ ಕ್ರಿಕೆಟರ್ ಶೇನ್ ವಾಟ್ಸನ್ ಹಾಗೂ ಮಾರ್ಕ್ ವಾ ಕಟುವಾಗಿ ಟೀಕಿಸಿದ್ದಾರೆ.

ಶೇನ್ ವಾಟ್ಸನ್ ಹಾಗೂ ನಾಯಕ ಮೈಕಲ್‌ ಕ್ಲಾರ್ಕ್‌ ಅವರ ನಡುವಿನ ಅಸಮಾಧಾನ ತಂಡದ ಮೇಲೆ ಪರಿಣಾಮ ಬೀರಿದ್ದು ನಿಜ. ಆದರೆ, ಕೋಚ್ ಆದವರು ಆಯ್ಕೆದಾರರಂತೆ ವರ್ತಿಸುವುದು ಸರಿಯಲ್ಲ. ವಾಟ್ಸನ್ ಅಗತ್ಯ ತಂಡಕ್ಕಿದೆ. ಆಸೀಸ್ ತಂಡದ ಶಿಸ್ತು ತಂಡಕ್ಕೆ ಪೂರಕವಾಗಿರಬೇಕೆ ಹೊರತು ಮಾರಕವಾಗಬಾರದು ಎಂದು ವಾರ್ನ್ ಹೇಳಿದ್ದಾರೆ.

"Re the issue of 4 players being unavailable for Aust selection due to not delivering homework or a report to the coach, the answer is simple"

"The Capt runs the team & in conjunction with the selectors picks the team.The Capt should always have final say.Ridiculous what's happening" Warne wrote on his twitter page (@warne888). ಎಂದು ವಾರ್ನ್ ಟ್ವೀಟಿಸಿದ್ದಾರೆ.

ಅಶಿಸ್ತಿನಿಂದ ವರ್ತಿಸಿದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯ ತಂಡ ಇಂದು ಉಪ ನಾಯಕ ಶೇನ್ ವ್ಯಾಟ್ಸನ್ ಸಹಿತ ನಾಲ್ವರು ಆಟಗಾರರನ್ನು ಮೂರನೆ ಟೆಸ್ಟ್ ಪಂದ್ಯದಿಂದ ಕೈಬಿಡಲಾಗಿದೆ. ಈ ಬೆಳವಣಿಗೆ ಈಗಾಗಲೆ ಭಾರತದ ವಿರುದ್ಧ ಟೆಸ್ಟ್ ಸರಣಿಯಲ್ಲಿ ಸತತ 2 ಪಂದ್ಯಗಳಲ್ಲಿ ಸೋತಿರುವ ಆಸ್ಟ್ರೇಲಿಯ ತಂಡಕ್ಕೆ ಆತಂಕಕಾರಿಯಾಗಿದೆ.

Story first published:  Tuesday, March 12, 2013, 12:29 [IST]
English summary
Former Australian legspinner Shane Warne, and Batsmen Mark Wagh has termed the axing of four players as "ridiculous" and wants captain Michael Clarke to have the final say in selection matters.
ಅಭಿಪ್ರಾಯ ಬರೆಯಿರಿ