Englishहिन्दीമലയാളംதமிழ்తెలుగు

ಸೆಹ್ವಾಗ್ ಡ್ರಾಪ್, ಮಿಕ್ಕಂತೆ ಅದೇ ತಂಡ ಆಯ್ಕೆ

Posted by:
Updated: Thursday, March 7, 2013, 13:17 [IST]
 

ಸೆಹ್ವಾಗ್ ಡ್ರಾಪ್, ಮಿಕ್ಕಂತೆ ಅದೇ ತಂಡ ಆಯ್ಕೆ
 

ಚೆನ್ನೈ, ಮಾ.6: ಸ್ಫೋಟಕ ಆರಂಭಿಕ ಆಟಗಾರ ವೀರೆಂದರ್ ಸೆಹ್ವಾಗ್ ಅವರನ್ನು ತಂಡದಿಂದ ಹೊರ ಹಾಕಲಾಗಿದೆ. ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಉಳಿದ ಟೆಸ್ಟ್ ಪಂದ್ಯಗಳಿಗೆ ಟೀಂ ಇಂಡಿಯಾವನ್ನು ಗುರುವಾರ(ಮಾ.6) ಆಯ್ಕೆ ಮಾಡಲಾಗಿದ್ದು, ಸೆಹ್ವಾಗ್ ಅವರಿಗೆ ಕೊಕ್ ನೀಡಲಾಗಿದೆ.

ಕಳಪೆ ಫಾರ್ಮ್ ನಿಂದ ಬಳಲುತ್ತಿದ್ದ ಸೆಹ್ವಾಗ್ ಅವರನ್ನು ಆಸ್ಟ್ರೇಲಿಯಾ ವಿರುದ್ಧದ 3 ಹಾಗೂ 4ನೇ ಟೆಸ್ಟ್ ಪಂದ್ಯಗಳಿಗೆ ಆಯ್ಕೆ ಮಾಡಲಾದ ತಂಡಕ್ಕೆ ಸೇರಿಸಿಕೊಂಡಿಲ್ಲ. ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿದ್ದ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಬಿಸಿಸಿಐ ಆಯ್ಕೆದಾರರ ಕೃಪೆಗೆ ಪಾತ್ರವಾಗಿದ್ದು, ತಂಡದಲ್ಲಿ ಉಳಿದಿದ್ದಾರೆ.

ಅಸ್ಟ್ರೇಲಿಯಾ ವಿರುದ್ಧದ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾರತ 2-0ಯಿಂದ ಮುನ್ನಡೆ ಪಡೆದಿದೆ. 3ನೇ ಟೆಸ್ಟ್ ಪಂದ್ಯ ಮೊಹಾಲಿಯಲ್ಲಿ ಮಾ.14 ರಂದು ನಡೆಯಲಿದೆ. ಸೆಹ್ವಾಗ್ ಬದಲಿಗೆ ಆರಂಭಿಕ ಆಟಗಾರರಾಗಿ ಅಜಿಂಕ್ಯ ರಹಾನೆ ಅಥವಾ ಶಿಖರ್ ಧವನ್ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಿದೆ.

ಕಳಪೆ ಫಾರ್ಮ್ ನಿಂದ ಬಳಲುತ್ತಿದ್ದ ಸೆಹ್ವಾಗ್ ಅವರನ್ನು ಆಸ್ಟ್ರೇಲಿಯಾ ವಿರುದ್ಧದ 3 ಹಾಗೂ 4ನೇ ಟೆಸ್ಟ್ ಪಂದ್ಯಗಳಿಗೆ ಆಯ್ಕೆ ಮಾಡಲಾದ ತಂಡಕ್ಕೆ ಸೇರಿಸಿಕೊಂಡಿಲ್ಲ. ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿದ್ದ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಬಿಸಿಸಿಐ ಆಯ್ಕೆದಾರರ ಕೃಪೆಗೆ ಪಾತ್ರವಾಗಿದ್ದು, ತಂಡದಲ್ಲಿ ಉಳಿದಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ 11, 17 ರನ್ ಮಾತ್ರ ಗಳಿಸಿದ್ದರು. 2010ರಲ್ಲಿ ಇಂಗ್ಲೆಂಡ್ ವಿರುದ್ಧ ಶತಕ ಬಾರಿಸಿದ್ದು ಬಿಟ್ಟರೆ ಸತತವಾಗಿ ಸೆಹ್ವಾಗ್ ವೈಫಲ್ಯ ಕಂಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಅರ್ಧಶತಕ ಕೂಡಾ ಬಾರಿಸಲಿಲ್ಲ.

ಆಸ್ಟ್ರೇಲಿಯಾ ಪ್ರವಾಸದಲ್ಲಿ 8 ಇನ್ನಿಂಗ್ಸ್ ನಲ್ಲಿ 198 ರನ್ ಮಾತ್ರ ಗಳಿಸಿದ್ದರು. ಸಾಲದ್ದಕ್ಕೆ, ನೆಟ್ ಪ್ರಾಕ್ಟೀಸ್ ವೇಳೆ ಕನ್ನಡಕಧಾರಿಯಾಗಿದ್ದ ಸೆಹ್ವಾಗ್ ಅವರು ಪಂದ್ಯದಲ್ಲೂ ಕನ್ನಡಕ ಧರಿಸಿ ಆಡಿ ವಿಫಲತೆ ಹೊಂದಿದ್ದರು. ದೇಶಿ ಕ್ರಿಕೆಟ್ ಋತು ಮುಗಿಯುತ್ತಾ ಬಂದಿರುವುದರಿಂದ ಸೆಹ್ವಾಗ್ ಅವರು ಬ್ಯಾಟ್ ಪಕ್ಕಕ್ಕಿಟ್ಟು ಮನೆಯಲ್ಲೇ ಕೂರುವ ಪರಿಸ್ಥಿತಿ ಒದಗಿ ಬಂದಿದೆ.

34 ವರ್ಷ ದಿಲ್ಲಿ ಆಟಗಾರ ಸೆಹ್ವಾಗ್ ಅವರು ಇನ್ಮುಂದೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವುದು ಅನುಮಾನವಾಗಿದೆ. ಇಂಡಿಯನ್ ಪ್ರಿಮಿಯರ್ ಲೀಗ್ ಮಾತ್ರ ಸೆಹ್ವಾಗ್ ಗೆ ಬಾಗಿಲು ತೆಗೆದುಕೊಂಡು ಕಾದಿದೆ.

ಭಾರತ ತಂಡ: ಎಂಎಸ್ ಧೋನಿ(ನಾಯಕ), ಶಿಖರ್ ಧವನ್, ಮುರಳಿ ವಿಜಯ್, ಚೇತೇಶ್ವರ್ ಪೂಜಾರ, ಸಚಿನ್ ತೆಂಡೂಲ್ಕರ್, ರವೀಂದ್ರ ಜಡೇಜ, ವಿರಾಟ್ ಕೊಹ್ಲಿ, ಇಶಾಂತ್ ಶರ್ಮ, ಭುವನೇಶ್ವರ್ ಕುಮಾರ್, ಪ್ರಗ್ನಾನ್ ಓಝಾ, ಅಜಿಂಕ್ಯ ರಹಾನೆ, ಹರ್ಭಜನ್ ಸಿಂಗ್, ಆರ್ ಅಶ್ವಿನ್, ಅಶೋಕ್ ದಿಂಡಾ

Story first published:  Thursday, March 7, 2013, 12:52 [IST]
English summary
Virender Sehwag failed to retain his place in the Indian Test team for the remaining two Tests against touring Australia. Harbhajan Singh manages to stay in the sqaud despite poor performance.
ಅಭಿಪ್ರಾಯ ಬರೆಯಿರಿ