Englishहिन्दीമലയാളംதமிழ்తెలుగు

ಧೋನಿ ವಿದೇಶದಲ್ಲೂ ಗೆದ್ದು ತೋರಿಸಲಿ: ದಾದಾ

Posted by:
Published: Wednesday, March 6, 2013, 15:01 [IST]
 

ಧೋನಿ ವಿದೇಶದಲ್ಲೂ ಗೆದ್ದು ತೋರಿಸಲಿ: ದಾದಾ
 

ಕೋಲ್ಕತ್ತಾ, ಮಾ.6: ಆಸ್ಟ್ರೇಲಿಯ ವಿರುದ್ಧ ಅಮೋಘ ಜಯ ದಾಖಲಿಸಿದ ಮಹೇಂದ್ರ ಸಿಂಗ್‌ ಧೋನಿ ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ ಭಾರತದ ಅತ್ಯಂತ ಯಶಸ್ವೀ ನಾಯಕರಾಗಿದ್ದಕ್ಕೆ ಮಾಜಿ ನಾಯಕ ಸೌರವ್ ಗಂಗೂಲಿ ಅಭಿನಂದಿಸಿದ್ದಾರೆ. ಜೊತೆಗೆ, ಇದೇ ಸಾಧನೆಯನ್ನು ವಿದೇಶಿ ನೆಲದಲ್ಲೂ ಮುಂದುವರೆಸಲಿ ಎಂದು ಗಂಗೂಲಿ ಹಾರೈಸಿದ್ದಾರೆ.

ವಿದೇಶದಲ್ಲಿ ಭಾರತಕ್ಕೆ ಹೆಚ್ಚು ಜಯ ತಂದುಕೊಟ್ಟ ದಾಖಲೆಯನ್ನು ಗಂಗೂಲಿ ಹೆಸರಲ್ಲೇ ಉಳಿದುಕೊಂಡಿದೆ. ಧೋನಿ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲಂಡ್‌ ಪ್ರವಾಸಗಳಲ್ಲಿ ಜಯ ಸಾಧಿಸಿದರೂ ಆಸ್ಟ್ರೇಲಿಯ ಮತ್ತು ಇಂಗ್ಲಂಡ್‌ನ‌ಲ್ಲಿ ವೈಟ್‌ವಾಶ್‌ ಅನುಭವಿಸಬೇಕಾಯಿತು. ಹೀಗಾಗಿ ವಿದೇಶದಲ್ಲಿ ಧೋನಿ ಇದೇ ರೀತಿ ಗೆದ್ದು ತೋರಿಸಲಿ. ನಾಯಕನಾಗಿ 22 ಟೆಸ್ಟ್ ಗೆಲುವು ಸಾಧಿಸುವುದು ಕಡಿಮೆ ಸಾಧನೆ ಏನಲ್ಲ ಎಂದು ದಾದಾ ಅಭಿಪ್ರಾಯಪಟ್ಟಿದ್ದಾರೆ.

ಹೈದರಾಬಾದ್‌ನಲ್ಲಿ ಆಸ್ಟ್ರೇಲಿಯ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ಇನಿಂಗ್ಸ್‌ ಹಾಗೂ 135 ರನ್‌ಗಳಿಂದ ಜಯ ಗಳಿಸಿತು. ಇದರೊಂದಿಗೆ ಶೇಕಡಾ 50ರಷ್ಟು ಗೆಲುವಿನ ಸರಾಸರಿ ದಾಖಲಿಸುವ ಮೂಲಕ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲೂ ಭಾರತದ ಯಶಸ್ವೀ ನಾಯಕ ಎಂಬ ಮತ್ತೂಂದು ಮೈಲುಗಲ್ಲನ್ನೂ ಧೋನಿ ದಾಟಿದರು.

ಇದು ಧೋನಿ ನಾಯಕತ್ವದಲ್ಲಿ ಆಡಿದ 45 ಪಂದ್ಯಗಳಲ್ಲಿ ಭಾರತಕ್ಕೆ ಲಭಿಸಿದ 22ನೇ ಜಯ. ಇದರೊಂದಿಗೆ ಗಂಗೂಲಿ ನಾಯಕತ್ವದಲ್ಲಿ ಒಲಿದ 21 ಗೆಲುವಿನ ದಾಖಲೆ ಎರಡನೇ ಸ್ಥಾನಕ್ಕೆ ಕುಸಿಯಿತು.

ಭಾರತದ ಉಳಿದೆಲ್ಲ ನಾಯಕರು ಗೆಲುವಿನ ಲೆಕ್ಕಾಚಾರದಲ್ಲಿ ಧೋನಿ ಮತ್ತು ಗಂಗೂಲಿ ಅವರಿಗಿಂತ ಎಷ್ಟೋ ಹಿಂದಿದ್ದಾರೆ. ಮೊಹಮ್ಮದ್‌ ಅಜರುದ್ದೀನ್‌ 14 ಜಯ ತಂದಿತ್ತರೆ, ಪಟೌಡಿ-ಗಾವಸ್ಕರ್‌ ತಲಾ 9 ಹಾಗೂ ರಾಹುಲ್‌ ದ್ರಾವಿಡ್‌ 8 ಜಯ ತಂದುಕೊಟ್ಟಿದ್ದಾರೆ.

'ಸೋಲುಂಡಾಗ ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕು. ನಾವು ಎಲ್ಲಿ ಎಡವಿದೆವು ಎಂಬುದರ ಪರಾಮರ್ಶೆ ನಡೆಸಬೇಕು. ವೈಯಕ್ತಿಕವಾಗಿಯೂ ಪ್ರಶ್ನೆಗಳನ್ನು ಡ್ರೆಸ್ಸಿಂಗ್‌ ರೂಮ್‌ನಲ್ಲಿ ನಾವು ದಾಖಲೆಗಳ ಬಗ್ಗೆ ಯೋಚಿಸಲೇ ಇಲ್ಲ. ನಾವು ಎಷ್ಟು ಗೆದ್ದಿದ್ದೇವೆ ಎಂಬುದು ಮುಖ್ಯವಲ್ಲ. ಟೆಸ್ಟ್‌ ಪಂದ್ಯ ಗೆಲ್ಲುವುದು ಮುಖ್ಯವೇ ಹೊರತು ಅಂಕಿ-ಸಂಖ್ಯೆಗಳಲ್ಲ. ಕಳೆದ ಎರಡೂ ಟೆಸ್ಟ್‌ಗಳಲ್ಲಿ ನಾವು ಉತ್ತಮವಾಗಿ ಆಡಿದೆವು ಎಂಬುದು ಮುಖ್ಯ ಎಂದು ಎಂಎಸ್ ಧೋನಿ ಪ್ರತಿಕ್ರಿಯಿಸಿದ್ದಾರೆ.

ನಾಯಕ ಟೆಸ್ಟ್‌ ಗೆಲುವು ಸೋಲು ಡ್ರಾ ಟೈ
ಎಂಎಸ್ ಧೋನಿ 45 22 12 11 --
ಸೌರವ್ ಗಂಗೂಲಿ 49 21 13 15 --
ಮಹಮ್ಮದ್ ಅಜರುದ್ದೀನ್‌ 47 14 14 19 --
ಟೈಗರ್ ಪಟೌಡಿ 40 09 19 12 --
ಸುನಿಲ್ ಗವಾಸ್ಕರ್‌ 47 09 08 30 --
ರಾಹುಲ್ ದ್ರಾವಿಡ್‌ 25 08 06 11 --
ಕಪಿಲ್‌ ದೇವ್‌ 34 04 07 22 01
ಸಚಿನ್ ತೆಂಡೂಲ್ಕರ್‌ 25 04 09 12 --

English summary
MS Dhoni, on Tuesday, became India's most successful Test captain, surpassing former skipper Sourav Ganguly. after his 22nd success as India captain. Former India skipper Sourav Ganguly on Tuesday (March 5) lauded MS Dhoni for becoming the most successful Indian Test captain
ಅಭಿಪ್ರಾಯ ಬರೆಯಿರಿ