Englishहिन्दीമലയാളംதமிழ்తెలుగు

ಭಾರತಕ್ಕೆ ಇನ್ನಿಂಗ್ಸ್ ಹಾಗೂ 135 ರನ್ ಗಳ ಜಯ

Posted by:
Updated: Tuesday, March 5, 2013, 12:14 [IST]
 

ಹೈದರಾಬಾದ್, ಮಾ.5: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು ಭಾರತ ತಂಡ ಇನ್ನಿಂಗ್ಸ್ ಹಾಗೂ 134 ರನ್ ಗಳಿಂದ ಗೆದ್ದುಕೊಂಡಿದೆ. ಆಸ್ಟ್ರೇಲಿಯಾ ತಂಡ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ ಮಂಗಳವಾರ (ಮಾ.5) ಕೇವಲ 131 ರನ್ ಗಳಿಗೆ ಆಲೌಟ್ ಆಗಿದೆ. ಭರ್ಜರಿ ದ್ವಿಶತಕ ಸಿಡಿಸಿದ ಚೇತೇಶ್ವರ್ ಪೂಜಾರಾ ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದರು.

ಆಸ್ಟ್ರೇಲಿಯಾ ಪರ ಆರಂಭಿಕ ಆಟಗಾರ ಕೋವನ್ 44 ರನ್ ಹೊಡೆದಿದ್ದು ಬಿಟ್ಟರೆ ಉಳಿದವರು ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲುವ ಧೈರ್ಯ ಮಾಡಲಿಲ್ಲ. ಭಾರತದ ಪರ ಆರ್ ಅಶ್ವಿನ್ ಮತ್ತೊಮ್ಮೆ ಮಿಂಚಿ 63ರನ್ನಿತ್ತು 5 ವಿಕೆಟ್ ಕಬಳಿಸಿದರು. ರವೀಂದ್ರ ಜಡೇಜ 33 ರನ್ನಿತ್ತು 3, ಇಶಾಂತ್ ಶರ್ಮ 1 ವಿಕೆಟ್ ಗಳಿಸಿದರು. [ಸ್ಕೋರ್ ಕಾರ್ಡ್ ನೋಡಿ]

ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 2-0 ಮುನ್ನಡೆ ಪಡೆದಿದೆ. ಎರಡು ಟೆಸ್ಟ್ ಪಂದ್ಯಗಳನ್ನು ಹೀನಾಯವಾಗಿ ಸೋತಿರುವ ಆಸ್ಟ್ರೇಲಿಯಾ ತಂಡ ಮಾ.14 ರಂದು ಮೋಹಾಲಿಯಲ್ಲಿ ಮೂರನೇ ಪಂದ್ಯಕ್ಕೆ ತಯಾರಾಗಬೇಕಿದೆ. ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಭಾರತ ತಂಡ 8 ವಿಕೆಟ್ ಗಳಿಂದ ಗೆದ್ದುಕೊಂಡಿತ್ತು.

ನಾಲ್ಕನೇ ದಿನ ವಾಟ್ಸನ್ ಕೊಂಚ ಪ್ರತಿರೋಧ ಒಡ್ಡುವ ನಿರೀಕ್ಷೆಯಿತ್ತು. ಆದರೆ, ಇಶಾಂತ್ ಶರ್ಮ ಅವರು ವಾಟ್ಸನ್ ಅವರ ವಿಕೆಟ್ ಪಡೆಯುತ್ತಿದ್ದಂತೆ, ಉಳಿದ ವಿಕೆಟ್ ಗಳು ಪತಪತನೆ ಉದುರಿದವು. ಜಡೇಜ ಹಾಗೂ ಅಶ್ವಿನ್ ಜುಗಲ್ ಬಂದಿಗೆ ಆಸೀಸ್ ತತ್ತರಿಸಿದರು.

ಇದಕ್ಕೂ ಮುನ್ನ ಚೇತೇಶ್ವರ್ ಪೂಜಾರಾ ಹಾಗೂ ಮುರಳಿ ವಿಜಯ್ ಭರ್ಜರಿ ಜೊತೆಯಾಟದಿಂದ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ 503 ರನ್ ಗಳಿಸಿ ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿತ್ತು.

ಮಾಸ್ಟರ್ ಬ್ಲಾಸ್ಟರ್ ಸಚಿನ್ ಸಿಡಿಯದೆ. 7 ರನ್ ಗಳಿಸಿ ಪ್ಯಾಟಿಸನ್ ಗೆ ಬಲಿಯಾದರು. ವಿರಾಟ್ ಕೊಹ್ಲಿ 34 ರನ್ ಹಾಗೂ ನಾಯಕ ಧೋನಿ 44 ರನ್(43 ಎಸೆತ, 8 ಬೌಂಡರಿ) ಹೊಡೆದು ತಂಡದ ಮೊತ್ತ ಹೆಚ್ಚಿಸಿದರು. ಭಾರತ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 154.1 ಓವರ್ ಗಳಲ್ಲಿ 503ರನ್ ಗಳಿಸಿ ಆಲೌಟ್ ಆಯಿತು. ಒಟ್ಟು 266ರನ್ ಮುನ್ನಡೆ ಪಡೆಯಿತು.

ಗವಾಸ್ಕರ್ ಹಾಗೂ ವೆಂಗ್ ಸರ್ಕಾರ್ ಹೆಸರಿನಲ್ಲಿದ್ದ 35 ವರ್ಷ ಹಳೆಯ ಜೊತೆಯಾಟದ ದಾಖಲೆಯನ್ನು ಪೂಜಾರ ಹಾಗೂ ವಿಜಯ್ ಧೂಳಿಪಟ ಮಾಡಿದ್ದು, ಪಂದ್ಯದ ವಿಶೇಷವಾಗಿತ್ತು.ಚೇತೇಶ್ವರ್ ಪೂಜಾರಾ ಮತ್ತೊಮ್ಮೆ ದ್ವಿಶತಕ ಸಿಡಿಸಿದ್ದು 341 ಎಸೆತದಲ್ಲಿ 204 ರನ್ (30 ಬೌಂಡರಿ, 1 ಸಿಕ್ಸರ್) 1000 ರನ್ ಪೂರೈಸಿದ್ದು ಮತ್ತೊಂದು ವಿಶೇಷ. ವಿರಾಟ್ ಕೊಹ್ಲಿ ಕೂಡಾ ಈ ಪಂದ್ಯದಲ್ಲಿ ತಮ್ಮ ಟೆಸ್ಟ್ ಜೀವನದ 1000 ರನ್ ಗಡಿ ದಾಟಿದರು.

Story first published:  Tuesday, March 5, 2013, 11:43 [IST]
English summary
Australian batsmen were spun out in Hyderabad on Tuesday. The visitors were sent crashing to an innings and 135-run defeat by Indian spinners in the second Test on the fourth day here. Ravindra Jadeja and R Ashwin were the architects of India's easy triumph at Rajiv Gandhi International Stadium.
ಅಭಿಪ್ರಾಯ ಬರೆಯಿರಿ