Englishहिन्दीമലയാളംதமிழ்తెలుగు

ಪೂಜಾರ ದ್ವಿಶತಕ, ಆಸೀಸ್ ತಂಡ ಥಕ ಥಕ

Posted by:
Updated: Tuesday, March 5, 2013, 11:48 [IST]
 

ಹೈದರಾಬಾದ್, ಮಾ.4: ಚೇತೇಶ್ವರ್ ಪೂಜಾರಾ ಹಾಗೂ ಮುರಳಿ ವಿಜಯ್ ಭರ್ಜರಿ ಜೊತೆಯಾಟದಿಂದ ಆಸ್ಟ್ರೇಲಿಯಾ ತಂಡದ ಮೇಲೆ ಟೀಂ ಇಂಡಿಯಾ ಹಿಡಿತ ಸಾಧಿಸಿದೆ.

ಶತಕವೀರರನ್ನು ಪೆವಿಲಿಯನ್ ಗೆ ಹೋದ ಮೇಲೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ಸಿಡಿಯಲಿಲ್ಲ. 7 ರನ್ ಗಳಿಸಿ ಪ್ಯಾಟಿಸನ್ ಗೆ ಬಲಿಯಾದರು. ವಿರಾಟ್ ಕೊಹ್ಲಿ 34 ರನ್ ಹಾಗೂ ನಾಯಕ ಧೋನಿ 44 ರನ್(43 ಎಸೆತ, 8 ಬೌಂಡರಿ) ಹೊಡೆದು ತಂಡದ ಮೊತ್ತ ಹೆಚ್ಚಿಸಿದರು. ಭಾರತ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 154.1 ಓವರ್ ಗಳಲ್ಲಿ 503ರನ್ ಗಳಿಸಿ ಆಲೌಟ್ ಆಯಿತು. ಒಟ್ಟು 266ರನ್ ಮುನ್ನಡೆ ಪಡೆಯಿತು.

ನಂತರ ಎರಡನೇ ಇನ್ನಿಂಗ್ಸ್ ಆಡಲು ಬಂದ ಆಸೀಸ್ ತಂಡ ಉತ್ತಮ ಆರಂಭ ಪಡೆಯಿತು. ಆದರೆ, ಡೇವಿಡ್ ವಾರ್ನರ್ 26 ರನ್ ಗಳಿಸಿ ಔಟಾದರೆ, ಫಿಲಿಫ್ ಹ್ಯೂಸ್ ಶೂನ್ಯ ಸುತ್ತಿದರು. ದಿನದ ಅಂತ್ಯಕ್ಕೆ ಕೋವನ್ 26 ಹಾಗೂ ಶೇನ್ ವಾಟ್ಸನ್ 9 ರನ್ ಗಳಿಸಿ ಆಡುತ್ತಿದ್ದರು. 32 ಓವರ್ ಗಳಲ್ಲಿ 74/2 ಸ್ಕೋರ್ ಮಾಡಿತ್ತು. ಆಸೀಸ್ ತಂಡ ಇನ್ನೂ 192ರನ್ ಗಳಿಂದ ಹಿಂದಿದೆ. [ಸ್ಕೋರ್ ಕಾರ್ಡ್ ನೋಡಿ]

ಗವಾಸ್ಕರ್ ಹಾಗೂ ವೆಂಗ್ ಸರ್ಕಾರ್ ಹೆಸರಿನಲ್ಲಿದ್ದ 35 ವರ್ಷ ಹಳೆಯ ಜೊತೆಯಾಟದ ದಾಖಲೆಯನ್ನು ಪೂಜಾರ ಹಾಗೂ ವಿಜಯ್ ಧೂಳಿಪಟ ಮಾಡಿದ್ದಾರೆ.

ಚೇತೇಶ್ವರ್ ಪೂಜಾರಾ ಹಾಗೂ ವಿಜಯ್ ಎರಡನೇ ವಿಕೆಟ್ ಗೆ 345 ರನ್ ದಾಖಲಿಸಿದರು. 1978ರಲ್ಲಿ ಈಡೆನ್ ಗಾರ್ಡನ್ಸ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಗವಾಸ್ಕರ್ ವೆಂಗ್ ಸರ್ಕಾರ್ 344 ರನ್ ಜೊತೆಯಾಟವಾಡಿದ್ದರು.

ಶತಕ ವೀರರು: ಚೇತೇಶ್ವರ್ ಪೂಜಾರಾ ಮತ್ತೊಮ್ಮೆ ದ್ವಿಶತಕ ಸಿಡಿಸಿದ್ದಾರೆ. 341 ಎಸೆತದಲ್ಲಿ 204 ರನ್ (30 ಬೌಂಡರಿ, 1 ಸಿಕ್ಸರ್) ಸಿಡಿಸಿ ಪ್ಯಾಟಿಸನ್ ಬೌಲಿಂಗ್ ನಲ್ಲಿ ಔಟಾಗಿದ್ದಾರೆ.

ಇದಕ್ಕೂ ಮುನ್ನ ಮುರಳಿ ವಿಜಯ್ ಅವರು ಮ್ಯಾಕ್ಸ್ ವೆಲ್ ಬೌಲಿಂಗ್ ನಲ್ಲಿ ಕೋವನ್ ಗೆ ಕ್ಯಾಚಿತ್ತು ಔಟಾಗಿದ್ದರು. ವಿಜಯ್ 167 ರನ್(361 ಎಸೆತ, 23 ಬೌಂಡರಿ, 2 ಸಿಕ್ಸರ್) ಸದ್ಯಕ್ಕೆ(ಸಮಯ 11.30ಕ್ಕೆ) ಕ್ರೀಸ್ ನಲ್ಲಿ ಸಚಿನ್ ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿ ಇದ್ದಾರೆ ಸ್ಕೋರ್ 122 ಓವರ್ ಗಳಲ್ಲಿ 400/3. ಭಾರತ 163 ರನ್ ಗಳ ಮುನ್ನಡೆ ಪಡೆದಿದೆ.

ಎರಡನೆ ಟೆಸ್ಟ್‌ನಲ್ಲಿ ಮೂರನೇ ದಿನದ ಅಂತ್ಯಕ್ಕೆ ಚೇತೇಶ್ವರ ಪೂಜಾರ (162) ಮತ್ತು ಮುರಳಿ ವಿಜಯ್ (129) ಅಜೇಯ ಶತಕದ ನೆರವಿನಲ್ಲಿ ಟೀಮ್ ಇಂಡಿಯಾ ಪ್ರವಾಸಿ ಆಸ್ಟ್ರೇಲಿಯ ವಿರುದ್ಧ ಮೇಲುಗೈ ಸಾಧಿಸಿತ್ತು. ಭಾರತ ಮೊದಲ ಇನಿಂಗ್ಸ್‌ನಲ್ಲಿ 93 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 311 ರನ್ ಗಳಿಸಿ, 74 ರನ್‌ಗಳ ಮೇಲುಗೈ ಸಾಧಿಸಿತ್ತು.

Story first published:  Monday, March 4, 2013, 11:33 [IST]
English summary
Cheteshwar Pujara scored a double century (204, 341 balls, 30x4, 1x6) and Murali Vijay hit 167 (361 balls, 23x4, 2x6) and together broke a 35-year-old record Indian record during the third day of the second Test against Australia on Monday. At lunch, India were 400/3 with a lead of 163.
ಅಭಿಪ್ರಾಯ ಬರೆಯಿರಿ