Englishहिन्दीമലയാളംதமிழ்తెలుగు

ಪಾಕಿಸ್ತಾನವನ್ನು ಕೆಳದೂಡಿ ಮೇಲಕ್ಕೇರಿದ ಭಾರತ

Posted by:
Published: Thursday, February 28, 2013, 12:26 [IST]
 

ಪಾಕಿಸ್ತಾನವನ್ನು ಕೆಳದೂಡಿ ಮೇಲಕ್ಕೇರಿದ ಭಾರತ
 

ದುಬೈ, ಫೆ.28: ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಪಾಕಿಸ್ತಾನವನ್ನು ಕೆಳಕ್ಕೆ ಹಾಕಿ ಭಾರತ ನಾಲ್ಕನೆ ಸ್ಥಾನಕ್ಕೆ ಭಡ್ತಿ ಪಡೆದಿದೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮೂರು ಸ್ಥಾನ ಮೇಲಕ್ಕೇರಿ 17ನೆ ಸ್ಥಾನ ತಲುಪಿದ್ದಾರೆ. ಸ್ಪಿನ್ನರ್ ಆರ್ ಅಶ್ವಿನ್ 11ನೇ ಸ್ಥಾನಕ್ಕೇರಿದ್ದಾರೆ.

ಚೆನ್ನೈಯಲ್ಲಿ ನಡೆದ ಆಸ್ಟ್ರೇಲಿಯ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ 198 ರನ್‌ಗೆ 12 ವಿಕೆಟ್‌ಗಳನ್ನು ಕಬಳಿಸಿದ ಆಫ್-ಸ್ಪಿನ್ನರ್ ಆರ್.ಅಶ್ವಿನ್ ಅವರು 11ನೇ ಸ್ಥಾನಕ್ಕೇರಿರುವುದು ಈ ವರೆಗಿನ ಶ್ರೇಷ್ಠ ಸಾಧನೆಯಾಗಿದೆ. ಚೆನ್ನೈನಲ್ಲಿ ದ್ವಿಶತಕವನ್ನು ಸಿಡಿಸಿರುವ ಭಾರತದ ನಾಯಕ ಮಹೇಂದ್ರ ಸಿಂಗ್ ಧೋನಿ 15 ಸ್ಥಾನ ಭಡ್ತಿ ಪಡೆದು 21ನೆ ಸ್ಥಾನದಲ್ಲಿದ್ದಾರೆ. ಚೆನ್ನೈ ಟೆಸ್ಟ್‌ನಲ್ಲಿ ಶತಕ ಸಿಡಿಸಿರುವ ವಿರಾಟ್ ಕೊಹ್ಲಿ 10 ಸ್ಥಾನ ಮೇಲಕ್ಕೇರಿ ಜೀವನಶ್ರೇಷ್ಠ 25ನೇ ಸ್ಥಾನದಲ್ಲಿದ್ದಾರೆ.

ಇತ್ತೀಚೆಗೆ ಸೆಂಚೂರಿಯನ್‌ನಲ್ಲಿ ಪಾಕಿಸ್ತಾನದ ವಿರುದ್ಧದ ಮೂರನೆ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಗೆಲುವಿನೊಂದಿಗೆ ಸರಣಿ ಗೆಲುವು ಸಾಧಿಸಿದ ದಕ್ಷಿಣ ಆಫ್ರಿಕಾ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದೆ. ಬೌಲರ್‌ಗಳ ಅಗ್ರ-10ಸ್ಥಾನಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಬೌಲರ್‌ಗಳ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಡೇಲ್ ಸ್ಟೇಯ್ನ್ ಅಗ್ರ ಸ್ಥಾನದಲ್ಲಿದ್ದರೆ ಅವರ ಸಹ ಆಟಗಾರ ವೆರ್ನೊನ್‌ ಫಿಲ್ಯಾಂಡರ್ ಎರಡನೆ ಸ್ಥಾನ ಪಡೆದಿದ್ದಾರೆ. ಟೆಸ್ಟ್ ಬ್ಯಾಟ್ಸ್‌ಮನ್‌ಗಳ ಪೈಕಿ ದಕ್ಷಿಣ ಆಫ್ರಿಕಾದ ಹಾಶೀಮ್ ಅಮ್ಲ ಅಗ್ರಸ್ಥಾನ ಗಳಿಸಿದ್ದು, ಭರ್ಜರಿ ಪ್ರದರ್ಶನ ಮುಂದುವರೆಸಿದ್ದಾರೆ. ಆಸ್ಟ್ರೇಲಿಯಾದ ನಾಯಕ ಮೈಕಲ್ ಕ್ಲಾರ್ಕ್ ಎರಡನೆ ಸ್ಥಾನದಲ್ಲಿದ್ದಾರೆ. (ಪಿಟಿಐ)

English summary
India moved up a rung to fourth in the ICC Test rankings for teams replacing Pakistan, while veteran Sachin Tendulkar jumped three places to be 17th in the batsmen's chart announced on Wednesday.
ಅಭಿಪ್ರಾಯ ಬರೆಯಿರಿ