Englishहिन्दीമലയാളംதமிழ்తెలుగు

ಸಚಿನ್ ಸರ್ವಕಾಲಿಕ ದಾಖಲೆ ಸ್ಕೋರ್ ಶೀಟ್ ಭಸ್ಮ

Posted by:
Updated: Wednesday, February 27, 2013, 18:33 [IST]
 

ಸಚಿನ್ ಸರ್ವಕಾಲಿಕ ದಾಖಲೆ ಸ್ಕೋರ್ ಶೀಟ್ ಭಸ್ಮ
 

ಮುಂಬೈ, ಫೆ.27: ಫೆ.24,1988 ಸಚಿನ್ ಪಾಲಿಗೆ ಎಂದೂ ಮರೆಯಲಾರದ ದಿನ. ಶಾಲಾ ದಿನಗಳಲ್ಲಿ ಸಚಿನ್ ತೆಂಡೂಲ್ಕರ್ ಹಾಗೂ ವಿನೋದ್ ಕಾಂಬ್ಳಿ ಸೃಷ್ಟಿಸಿದ ದಾಖಲೆ ಜೊತೆಯಾಟ ಕ್ರಿಕೆಟ್ ಜಗತ್ತಿನ ಅಚ್ಚಳಿಯದ ದಾಖಲೆಗಳಲ್ಲಿ ಒಂದಾಗಿದೆ. ಆದರೆ, ಸಚಿನ್ -ಕಾಂಬ್ಳಿ ಜೊತೆಯಾಟದ ದಾಖಲೆಯಂತಿದ್ದ ಸ್ಕೋರ್ ಕಾರ್ಡ್ ಶೀಟ್ ಬೆಂಕಿಗೆ ಆಹುತಿಯಾಗಿರುವ ದುರಂತ ಸುದ್ದಿ ಹೊರಬಿದ್ದಿದೆ.

ಶಾರದಾಶ್ರಮ ವಿದ್ಯಾ ಮಂದಿರ ಪರ ಅಡುತ್ತಿದ್ದ ಸಚಿನ್ ತೆಂಡೂಲ್ಕರ್ ಹಾಗೂ ವಿನೋದ್ ಕಾಂಬ್ಳಿ ಅವರು 664 ರನ್ ಜೊತೆಯಾಟದಲ್ಲಿ ಭಾಗಿಯಾಗಿದ್ದು ದಾಖಲೆಯಾಗಿತ್ತು. ಹ್ಯಾರಿಸ್ ಶೀಲ್ಡ್ ಪಂದ್ಯದಲ್ಲಿ ಸೈಂಟ್ ಕ್ಸೇವಿಯರ್ಸ್ ವಿರುದ್ಧ ಮುಂಬೈನ ಸ್ಕೂಲ್ ಕ್ರೀಡಾ ಅಸೋಸಿಯೇಷನ್(MSSA) ಈ ಪಂದ್ಯವನ್ನುಆಯೋಜಿಸಿತ್ತು.

ಆದರೆ, ಮೂಲ ಸ್ಕೋರ್ ಕಾರ್ಡ್ ಶೀಟ್ ಬೆಂಕಿಗೆ ಆಹುತಿಯಾಗಿದೆ ಎಂದು MSSA ಬುಧವಾರ (ಫೆ.27) ಹೇಳಿಕೆ ನೀಡಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಸ್ಕೋರ್ ಕಾರ್ಡ್ ಇಡಲು ಸರಿಯಾದ ಜಾಗ ಇಲ್ಲದೆ ಎಲ್ಲೆಂದರಲ್ಲಿ ಪತ್ರಗಳನ್ನು ಹರಡಲಾಗಿತ್ತು, ಈಗ ಎಲ್ಲವೂ ನಾಶವಾಗಿದೆ. ಅದರಲ್ಲಿ ಸಚಿನ್ ಕಾಂಬ್ಳಿ ಜೊತೆಯಾಟದ ಪಂದ್ಯದ ಸ್ಕೋರ್ ಕಾರ್ಡ್ ಇತ್ತು ಎಂಬುದು ದುರಂತ.

25 ವರ್ಷಕ್ಕೂ ಹಳೆಯದಾದ ಪಂದ್ಯಗಳ ಸ್ಕೋರ್ ಕಾರ್ಡ್ ಶೀಟ್ ಇಟ್ಟುಕೊಂಡು ನಾವೇನು ಮಾಡೋಣ. ಹಳೆಯ ಪೇಪರ್ ಗಳಿಗೆ ನೀಡಬೇಕಾದ ಮರ್ಯಾದೆಯಂತೆ ಆ ಸ್ಕೋರ್ ಕಾರ್ಡ್ ಶೀಟ್ ಗೂ ಮರ್ಯಾದೆ ಸಿಕ್ಕಿದೆ. ನಮಗೆ ಬೇರೆ ಎಲ್ಲಾ ಪಂದ್ಯದಂತೆ ಇದು ಕೂಡಾ ಒಂದು ಸ್ಕೋರ್ ಕಾರ್ಡ್ ಶೀಟ್ ಅಷ್ಟೇ ಎಂದು MSSA ಕ್ರಿಕೆಟ್ ಕಾರ್ಯದರ್ಶಿ ಎಚ್ ಎಸ್ ಬೋರ್ ಹೇಳಿದ್ದಾರೆ.

ಸ್ಕೋರ್ ಕಾರ್ಡ್ ಶೀಟ್ ನಾಶವಾಗಿರುವ ಬಗ್ಗೆ ಸಚಿನ್ ಅಥವಾ ಕಾಂಬ್ಳಿ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಬಿಸಿಸಿಐ, ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಆಗಲಿ ಸ್ಕೋರ್ ಕಾರ್ಡ್ ಶೀಟ್ ಸಂರಕ್ಷಿಸಲು ಮುಂದಾಗದಿದ್ದದ್ದು ವಿಪರ್ಯಾಸ ಎಂದು ಕ್ರೀಡಾಭಿಮಾನಿಗಳು ಹೇಳಿದ್ದಾರೆ.

ದಾಖಲೆ ಬ್ರೇಕ್ ಆಗಿತ್ತು: ಹೈದರಾಬಾದಿನ ಸೈಂಟ್ ಪೀಟರ್ಸ್ ಪ್ರೌಢಶಾಲೆಯ ಬಿ. ಮನೋಜ್ ಕುಮಾರ್ ಹಾಗೂ ಮಹಮ್ಮದ್ ಶಹಬಾಜ್ ತಾಂಬಿ ಅಜೇಯ 721 ರನ್‌ಗಳ ಜೊತೆಯಾಟದಲ್ಲಿ ಪಾಲ್ಗೊಂಡು ಸಚಿನ್ ಹಾಗೂ ವಿನೋದ್ ಕಾಂಬ್ಳಿ ಅವರ ಶಾಲಾ ದಿನದ ದಾಖಲೆಯ ಜೊತೆಯಾಟವನ್ನು ಮುರಿದಿದ್ದರು.

ಬೊವೆನ್‌ಪಳ್ಳಿಯ ಸೈಂಟ್ ಪೀಟರ್ಸ್ ಪ್ರೌಢಶಾಲೆ ಹಾಗೂ ಸೈಂಟ್ ಫಿಲಿಫ್ ಪ್ರೌಢಶಾಲೆ ನಡುವೆ ನಡೆದ 13 ವರ್ಷ ವಯೋಮಿತಿ ಒಳಗಿನವರ ಪಂದ್ಯಾವಳಿಯಲ್ಲಿ ಸೈಂಟ್ ಪೀಟರ್ಸ್ ಪ್ರೌಢಶಾಲೆ 700 ರನ್‌ಗಳ ಬೃಹತ್ ಅಂತರದ ಜಯ ಗಳಿಸಿತ್ತು. ಸೈಂಟ್ ಫಿಲಿಫ್ ಪ್ರೌಢಶಾಲೆ ಕೇವಲ 21 ರನ್ ಗಳಿಸಿ ಸೋಲನ್ನು ಒಪ್ಪಿಕೊಂಡಿತು.

ಸೈಂಟ್ ಪೀಟರ್ಸ್ ಪ್ರೌಢಶಾಲೆಯ ತಂಡ 40 ಓವರ್ ಗಳಲ್ಲಿಗಳಿಸಿದ 721 ರನ್‌ಗಳು ಕೂಡ ದಾಖಲೆ ಸೇರಿತ್ತು. ಈವರೆಗೂ ಉತ್ತರ ಕ್ಯಾಲಿಫೋರ್ನಿಯಾ ಲೀಗ್‌ನಲ್ಲಿ ತಂಡವೊಂದು 45 ಓವರ್‌ಗಳಲ್ಲಿ ಗಳಿಸಿದ 630/5 ರನ್‌ಗಳು ದಾಖಲೆಯಾಗಿತ್ತು.

Story first published:  Wednesday, February 27, 2013, 18:32 [IST]
English summary
In what can be termed as shocking, the score-sheet of the world record partnership between Sachin Tendulkar and Vinod Kambli for their school, has been obliterated.
ಅಭಿಪ್ರಾಯ ಬರೆಯಿರಿ