Englishहिन्दीമലയാളംதமிழ்తెలుగు

ಚೆನ್ನೈ ಟೆಸ್ಟ್ :ಸೋಲಿನ ದವಡೆಯಲ್ಲಿ ಆಸ್ಟ್ರೇಲಿಯಾ

Posted by:
Updated: Monday, February 25, 2013, 17:13 [IST]
 

ಚೆನ್ನೈ, ಫೆ.25: ಭಾರತದ ಸ್ಪಿನ್ ತ್ರಯರಾದ ಆರ್ ಅಶ್ವಿನ್, ಹರ್ಭಜನ್ ಹಾಗೂ ಜಡೇಜ ದಾಳಿಗೆ ಸಿಲುಕಿದ ಆಸ್ಟ್ರೇಲಿಯಾ ತಂಡ ತತ್ತರಿಸಿದೆ. ಸೋಮವಾರ ಭಾರತವನ್ನು 572 ರನ್ ಗಳಿಗೆ ಆಲೌಟ್ ಮಾಡಿದ ಆಸೀಸ್ ತಂಡ ಸೋಲಿನ ದವಡೆಯಲ್ಲಿದೆ. ಆಸೀಸ್ ತಂಡ ಭಾರತದ ಮೊತ್ತ ದಾಟಿದರೂ 9 ವಿಕೆಟ್ ಕಳೆದುಕೊಂಡು ದುಃಸ್ಥಿತಿಯಲ್ಲಿದೆ.

ನಾಲ್ಕನೇ ದಿನವೇ ವಿಜಯ ಪತಾಕೆ ಹಾರಿಸುವ ಉತ್ಸಾಹದಲ್ಲಿದ್ದ ಭಾರತಕ್ಕೆ ಮೊಯಿಸ್ ಹೆನ್ರಿಕ್ಯೂಸಸ್ ಅಡ್ಡ ನಿಂತರು ದಿನದ ಅಂತ್ಯಕ್ಕೆ ಬಾಲಂಗೋಚಿಗಳ ಜೊತೆ ಗೂಡಿ 75 ರನ್ ಮಾಡಿ ಔಟಾಗದೆ ಉಳಿದಿದ್ದಲ್ಲದೆ ಮತ್ತೊಮ್ಮೆ ಭಾರತ ಬ್ಯಾಟ್ ಮಾಡಬೇಕಾದ ಸ್ಥಿತಿ ತಂದರು. ಸ್ಪಿನ್ನರ್ ನಾಥನ್ ಲಿಯಾನ್ 12 ರನ್ ಗಳಿಸಿ ಉಳಿದಿದ್ದರು. 84 ಓವರ್ ಗಳಲ್ಲಿ ಆಸ್ಟ್ರೇಲಿಯಾ 232/9 ಸ್ಕೋರ್ ಮಾಡಿ 40 ರನ್ ಗಳ ಮುನ್ನಡೆ ಪಡೆದಿದೆ. ಸ್ಕೋರ್ ಕಾರ್ಡ್ ನೋಡಿ

ಆಸ್ಟ್ರೇಲಿಯಾ ತಂಡ ಚಹಾ ವಿರಾಮದ ವೇಳೆ 128/5 ರನ್ ಮಾಡಿ 64 ರನ್ ಹಿಂದೆ ಬಿದ್ದಿತ್ತು. ಆರ್ ಅಶ್ವಿನ್ ಮತ್ತೊಮ್ಮೆ ಮಿಂಚಿ 5 ವಿಕೆಟ್ ಕಿತ್ತರೆ, ಹರ್ಭಜನ್ ಹಾಗೂ ಜಡೇಜ ತಲಾ 2 ವಿಕೆಟ್ ಕಬಳಿಸಿದರು. ಜಡೇಜ ಅವರು ಹೆಚ್ಚು ವಿಕೆಟ್ ಕೀಳದಿದ್ದರೂ ಮಾರಕವಾಗಿ ಚೆಂಡನ್ನು ತಿರುಗಿಸಿ ಬ್ಯಾಟ್ಸ್ ಮನ್ ಗಳನ್ನು ಕಾಡಿದರು. ಚಹಾ ವಿರಾಮದ ವೇಳೆಗೆ ಕ್ಲಾರ್ಕ್ 31, ಹೆನ್ರಿಕ್ಯೂಸ್ 5 ರನ್ ಮಾಡಿ ಆಡುತ್ತಿದ್ದರು.

ಆದರೆ, ವಿರಾಮದ ನಂತರ ಅಶ್ವಿನ್ ಬಲೆಗೆ ಬಿದ್ದ ನಾಯಕ ಕ್ಲಾರ್ಕ್ ಒಂದು ರನ್ ಕೂಡಾ ಮಾಡದೆ ಪೆವಿಲಿಯನ್ ಹಾದಿ ಹಿಡಿದರು. ಬಾಲಂಗೋಚಿಗಳು ಉದುರಿದರೂ ಹೆನ್ರಿಕ್ಯೂಸ್ ಮಾತ್ರ ನೆಲಕಚ್ಚಿ ಆಡಿದರು.

ಇದಕ್ಕೂ ಮುನ್ನ ನಾಲ್ಕನೇ ದಿನದ ಆರಂಭದಲ್ಲೇ ಎಂಎಸ್ ಧೋನಿ ನಾಯಕನಾಗಿ ಅತಿ ಹೆಚ್ಚು ರನ್ ಹೊಡೆದು ಸಚಿನ್ ತೆಂಡೂಲ್ಕರ್ ದಾಖಲೆ ಮುರಿದರು. ಅಹಮದಾಬಾದಿನಲ್ಲಿ 1999ರಲ್ಲಿ ಸಚಿನ್ ಅವರು ನಾಯಕನಾಗಿ 217ರನ್ ಚೆಚ್ಚಿದ್ದರು. ಧೋನಿ ಈ ಪಂದ್ಯದಲ್ಲಿ 224ರನ್(265 ಎಸೆತ, 24 ಬೌಂಡರಿ, 6 ಸಿಕ್ಸರ್) ಬಾರಿಸಿದರು. ಧೋನಿ ವಿಕೆಟ್ ಬೀಳುತ್ತಿದ್ದಂತೆ ಭಾರತದ ಇನ್ನಿಂಗ್ಸ್ ಕೂಡಾ ಬೇಗನೇ ಅಂತ್ಯ ಕಂಡಿತು. ಭಾರತ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 572ರನ್ ಮಾಡಿ ಆಲೌಟ್ ಆಯಿತು.

ನಂತರ ಎರಡನೇ ಇನ್ನಿಂಗ್ಸ್ ಆಡಲು ಬಂದ ಆಸ್ಟ್ರೇಲಿಯಾ ಭೋಜನ ವಿರಾಮದ ವೇಳೆಗೆ 34/1 ಮಾಡಿತ್ತು. ಆದರೆ, ನಂತರ ಸ್ಪಿನ್ ದಾಳಿಗೆ ಸಿಲುಕಿ ಬೇಗನೇ ವಿಕೆಟ್ ಕಳೆದುಕೊಂಡಿತು. ಗಾಯಾಳು ಡೇವಿಡ್ ವಾರ್ನರ್ ಅವರು ಮೊದಲ ವಿಕೆಟ್ ಪತನ ನಂತರ ಆಡಲು ಬಂದು 23 ರನ್ ಹೊಡೆದರು. ಕೋವನ್ 32, ವಾಟ್ಸನ್ 17, ಕ್ಲಾರ್ಕ್ 31 ಹೊಡೆದು ಔಟಾದರು.

Story first published:  Monday, February 25, 2013, 15:59 [IST]
English summary
India are on the brink of victory in the first Test against Australia. R Ashwin was the star with five wickets as Australian batsmen were caught in a spin web on the fourth day on Monday. With just one wicket remaining, Australia lead by 40 runs.
ಅಭಿಪ್ರಾಯ ಬರೆಯಿರಿ