Englishहिन्दीമലയാളംதமிழ்తెలుగు

ಎಂಎಸ್ ಧೋನಿ ಭರ್ಜರಿ ದ್ವಿಶತಕ, ಆಸೀಸ್ ತತ್ತರ

Posted by:
Updated: Sunday, February 24, 2013, 17:21 [IST]
 

ಚೆನ್ನೈ, ಫೆ.24: ಶತಕ ಹೊಡೆಯುವ ಭರವಸೆ ಮೂಡಿಸಿದ್ದ ಮಾಸ್ಟರ್ ಬ್ಲಾಸ್ಟರ್ ಮತ್ತೊಮ್ಮೆ ವಿಫಲರಾಗಿದ್ದಾರೆ. ಲಂಚ್ ಗೂ ಮುನ್ನವೇ ಸಚಿನ್ ಪೆವಿಲಿಯನ್ ಗೆ ತೆರಳಿದಾಗ ಅವರ ವೈಯಕ್ತಿಕ ಸ್ಕೋರ್ 81. ಆದರೆ, ಸಿಕ್ಕ ಅವಕಾಶವನ್ನು ಪೂರ್ತಿಯಾಗಿ ಬಳಸಿಕೊಂಡು ಯುವ ಪ್ರತಿಭೆ ವಿರಾಟ್ ಕೊಹ್ಲಿ ಭರ್ಜರಿ ಶತಕ ದಾಖಲಿಸಿ ಔಟಾದರೆ, ಧೋನಿ ನಾಯಕನ ಆಟ ಪ್ರದರ್ಶಿಸಿ ಅರ್ಹಆಕರ್ಷಕ ದ್ವಿಶತಕ ಬಾರಿಸಿದರು.

ನಾಯಕನಾಗಿ, ವಿಕೆಟ್ ಕೀಪರ್ ಆಗಿ ಚೊಚ್ಚಲ ದ್ವಿಶತಕ ಬಾರಿಸಿದ ಎಂಎಸ್ ಧೋನಿ ದಿನದ ಅಂತ್ಯಕ್ಕೆ 243 ಎಸೆತದಲ್ಲಿ 206 ರನ್ ಬಾರಿಸಿ ಔಟಾಗದೆ ಉಳಿದಿದ್ದಾರೆ. 22 ಬೌಂಡರಿ, 5 ಸಿಕ್ಸರ್ ಇದೆ.

ಭುವನೇಶ್ವರ್ ಕುಮಾರ್ ಜೊತೆ ಸೇರಿ 8ನೇ ವಿಕೆಟ್ ಗೆ 100 ರನ್ ಜೊತೆಯಾಟ ಪ್ರದರ್ಶಿಸಿದ ಧೋನಿ ತಂಡದ ಮೊತ್ತವನ್ನು 515 ರನ್ ಗೆ ಏರಿಸಿದರು. ಭುವನೇಶ್ವರ್ ಕುಮಾರ್ 16 ರನ್ ಗಳಿಸಿ ಉತ್ತಮ ಸಾಥ್ ನೀಡಿದ್ದಾರೆ. ಧೋನಿ ಇನ್ನೂ ಇನ್ನಿಂಗ್ಸ್ ಡಿಕ್ಲೇರ್ ಮಾಡುವ ಮೂಡ್ ನಲ್ಲಿದ್ದಂತೆ ತೋರುತ್ತಿಲ್ಲ. ಆಸೀಸ್ ಪರ ಪ್ಯಾಟಿಸನ್ 89ಕ್ಕೆ 4, ಲಿಯಾನ್ 182ಕ್ಕೆ 3, ಹೆನ್ರಿಕ್ಯೂಸ್ 48ಕ್ಕೆ 1 ವಿಕೆಟ್ ಗಳಿಸಿದರು.

ಲಂಚ್ ಸಮಯಕ್ಕೆ 79 ಓವರ್ ಗಳಲ್ಲಿ 263/4 ಸ್ಕೋರ್ ಮಾಡಿದ್ದ ಭಾರತ ನಂತರ ವಿರಾಟ್ ಕೊಹ್ಲಿ ಹಾಗೂ ನಾಯಕ ಎಂಎಸ್ ಧೋನಿ ಅವರ ಶತಕದ ಜೊತೆಯಾಟದ ನೆರವಿನಿಂದ ಉತ್ತಮ ಮೊತ್ತ ದಾಖಲಿಸಿತು. ಆಸೀಸ್ ಪರ ಪೀಟರ್ ಸಿಡ್ಲ್, ಜೇಮ್ಸ್ ಪ್ಯಾಟಿಸನ್ ಉತ್ತಮ ಬೌಲಿಂಗ್ ಪ್ರದರ್ಶಿಸಿದರು, ಇತ್ತೀಚಿನ ವರದಿ ಬಂದಾಗ ಚಹಾ ವಿರಾಮಕ್ಕೆ 105 ಓವರ್ ಗಳಲ್ಲಿ ಭಾರತ 371/6 ರನ್ ಮಾಡಿದೆ. ಸ್ಕೋರ್ ಕಾರ್ಡ್ ನೋಡಿ

ಇದಕ್ಕೂ ಮುನ್ನ ಸಚಿನ್ ತೆಂಡೂಲ್ಕರ್ 81 ರನ್(159 ಎಸೆತ, 7 ಬೌಂಡರಿ) ಮಾಡಿ ಸ್ಪಿನ್ನರ್ ಲಿಯಾನ್ ಗೆ ಬೋಲ್ಡ್ ಆದರು. ಕ್ರೀಸ್ ಗೆ ಬಂದ ನಾಯಕ ಧೋನಿ ಆಕ್ರಮಣಕಾರಿ ಆಟ ಪ್ರದರ್ಶಿಸಿ ರನ್ ಗತಿ ಹೆಚ್ಚಿಸಿದರು. ಕೊಹ್ಲಿ ನಂತರ ಬಂದ ಜಡೇಜ 45 ಎಸೆತ ಎದುರಿಸಿ 16 ರನ್ ಗಳಿಸಿ ಪ್ಯಾಟಿಸನ್ ಗೆ ಕೆಟ್ಟದಾಗಿ ಬೋಲ್ಡ್ ಆಗಿ ಪೆವಿಲಿಯನ್ ಗೆ ತೆರಳಿದರು.

ಇದಕ್ಕೂ ಮುನ್ನ ಟೆಸ್ಟ್ ಕ್ರಿಕೆಟ್ ನಲ್ಲಿ 6ನೇ ಶತಕ ಸಿಡಿಸಿದ್ದ ಧೋನಿ, ಟೆಸ್ಟ್ ನಲ್ಲಿ 4000 ರನ್ ಪೂರೈಸಿದರು. ಧೋನಿಗೆ ಕೊಹ್ಲಿ ನಂತರ ಉತ್ತಮ ಜೊತೆಗಾರರು ಸಿಗಲಿಲ್ಲ. 79 ಎಸೆತಗಳಲ್ಲಿ 85 ರನ್ ಗಳಿಸಿದ್ದ ಧೋನಿ ನಂತರ ನಿಧಾನಗತಿಯಲ್ಲಿ ಆಡಿ, ಚಹಾ ವಿರಾಮದ ನಂತರ ಕೊನೆಗೂ ಶತಕ ಗಳಿಸಿದರು. ಆರ್ ಅಶ್ವಿನ್ ಕೂಡಾ 3 ರನ್ ಗಳಿಸಿ ಸ್ಪಿನ್ನರ್ ಲಿಯಾನ್ ಗೆ ಬೋಲ್ಡ್ ಆದರು. ಹರ್ಭಜನ್ ಸಿಂಗ್ ಬಿರುಸಿನ ಹೊಡೆತ ಬಾರಿಸಿದರೂ 11 ರನ್ ಗಳಿಸಿ ಔಟಾದರು. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಭಜ್ಜಿ ವಿಫಲರಾದರು.

Story first published:  Sunday, February 24, 2013, 14:58 [IST]
English summary
It was one of the best Test innings in India and came from the home captain. MS Dhoni was just brilliant at MA Chidambaram Stadium on Sunday. On way to an exceptional double hundred, Dhoni broke few records in the first Test against Australia.
ಅಭಿಪ್ರಾಯ ಬರೆಯಿರಿ