Englishहिन्दीമലയാളംதமிழ்తెలుగు

ಅಶ್ವಿನ್ ಕೈ ಚಳಕ,ಆಸೀಸ್ ಗೆ ಕ್ಲಾರ್ಕ್ ಶತಕ ಆಸರೆ

Posted by:
Updated: Friday, February 22, 2013, 16:51 [IST]
 

ಕ್ಲಾರ್ಕ್ ಭರ್ಜರಿ ಆಟ : ದಿನದ ಅಂತ್ಯಕ್ಕೆ ನಾಯಕ ಮೈಕಲ್ ಕ್ಲಾರ್ಕ್ 168 ಎಸೆತದಲ್ಲಿ 103 ರನ್(11 ಬೌಂಡರಿ, 1 ಸಿಕ್ಸರ್) ಗಳಿಸಿ ಔಟಾಗದೆ ಉಳಿದರು. ಆಸೀಸ್ ತಂಡದ ವಿಕೆಟ್ ಗಳು ಉದುರುತ್ತಿದ್ದರೆ, ಕ್ಲಾರ್ಕ್ ನೆಲಕಚ್ಚಿ ನಿಂತು ಭರ್ಜರಿ ಶತಕ ಬಾರಿಸಿದರು. ಸತತ 4 ದ್ವಿಶತಕ ಬಾರಿಸಿದ ಸಾಧನೆ ಮಾಡಿರುವ ಕ್ಲಾರ್ಕ್ ಅವರಿಗೆ ಇದು 23ನೇ ಟೆಸ್ಟ್ ಶತಕವಾಗಿದೆ.

ಚಹಾ ವಿರಾಮದ ವೇಳೆಗೆ ಆಸ್ಟ್ರೇಲಿಯಾದ ಮೊತ್ತ 66 ಓವರ್ ಗಳಲ್ಲಿ 215/5 ರನ್ ಆಗಿತ್ತು. ಡೇವಿಡ್ ವಾರ್ನರ್ 59 ರನ್ (93 ಎಸೆತ, 6 ಬೌಂಡರಿ) ಉತ್ತಮ ಆರಂಭ ಒದಗಿಸಿದರು. ಕೋವನ್ 29 ರನ್ ಹೊಡೆದು ಉತ್ತಮ ಸಾಥ್ ನೀಡಿದರು.

ಆದರೆ, ಫಿಲಿಫ್ ಹ್ಯೂಸ್ 6 ರನ್ ಹೊಡೆದು ಅಶ್ವಿನ್ ಗೆ ಬೋಲ್ಡ್ ಆದರು. ಆಲ್ ರೌಂಡರ್ ವಾಟ್ಸನ್ 28 ರನ್, ವೇಡ್ 12 ರನ್ ಹೊಡೆದು ಪೆವಿಲಿಯನ್ ಗೆ ಮರಳಿದರು. ಮೈಕಲ್ ಕ್ಲಾರ್ಕ್ 45 ರನ್, ಹೆನ್ರಿಕ್ಯೂಸ್ 29 ರನ್ ಗಳಿಸಿ ಆಡುತ್ತಿದ್ದರು.

ತಂಡ ಭಾರತ: ಎಂಎಸ್ ಧೋನಿ(ನಾಯಕ) ವೀರೆಂದರ್ ಸೆಹ್ವಾಗ್, ಮುರಳಿ ವಿಜಯ್, ಚೇತೇಶ್ವರ್ ಪೂಜಾರಾ, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ರವೀಂದ್ರ ಜಡೇಜ, ಇಶಾಂತ್ ಶರ್ಮ, ಭುವನೇಶ್ವರ್ ಕುಮಾರ್, ಆರ್ ಅಶ್ವಿನ್, ಹರ್ಭಜನ್ ಸಿಂಗ್

ಅಸ್ಟ್ರೇಲಿಯಾ: ಮೈಕಲ್ ಕ್ಲಾರ್ಕ್ (ನಾಯಕ), ಎಡ್ ಕೋವನ್, ಡೇವಿಡ್ ವಾರ್ನರ್, ಫಿಲ್ ಹ್ಯೂಸ್, ಶೇನ್ ವಾಟ್ಸನ್, ಮೊಸಿಸ್ ಹೆನ್ರಿಕ್ಯೂಸ್, ಮ್ಯಾಥ್ಯೂ ವೇಡ್, ಪೀಟರ್ ಸಿಡ್ಲ್, ಜೇಮ್ಸ್ ಪಾಟಿಸನ್, ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್

Story first published:  Friday, February 22, 2013, 14:19 [IST]
English summary
R Ashwin and Michael Clarke shared the honours on the opening day of the first Test between India and Australia here on Friday. Ashwin took six wickets and threatened to bowl the visitors out cheaply. But lucky Clarke led team's fightback with his 23rd Test century.
ಅಭಿಪ್ರಾಯ ಬರೆಯಿರಿ