Englishहिन्दीമലയാളംதமிழ்తెలుగు

ಅಜೇಯ ಕರ್ನಾಟಕಕ್ಕೆ ದಕ್ಷಿಣ ಪಥೇಶ್ವರ ಪಟ್ಟ

Posted by:
Published: Wednesday, February 20, 2013, 19:11 [IST]
 

ಗೋವಾ, ಫೆ.20: ಸುಬ್ಬಯ್ಯ ಪಿಳ್ಳೆ ಏಕದಿನ ಟೂರ್ನಿ ಯುದ್ಧಕ್ಕೂ ಭರ್ಜರಿ ಅಟ ಪ್ರದರ್ಶಿಸುವ ಮೂಲಕ ಕರ್ನಾಟಕ ತಂಡ ದಕ್ಷಿಣ ವಿಭಾಗದ ಕಿಂಗ್ ಎನಿಸಿದೆ. ಬುಧವಾರ ಇಲ್ಲಿ ನಡೆದ ವಲಯದ ಅಂತಿಮ ಪಂದ್ಯದಲ್ಲಿ ಆಂಧ್ರಪ್ರದೇಶದ ಮೇಲೆ 1 ವಿಕೆಟ್ ಗಳ ರೋಚಕ ಜಯ ದಾಖಲಿಸಿದೆ.ಈ ಮೂಲಕ ವಿಜಯ್ ಹಜಾರೆ ಟ್ರೋಫಿಗೆ ಕೇರಳ ಜೊತೆ ಕರ್ನಾಟಕವೂ ಆಯ್ಕೆಯಾಗಿದೆ.

ನಾಯಕ ಆರ್ ವಿನಯ್ ಕುಮಾರ್, ಅಭಿಮನ್ಯು ಮಿಥುನ್, ಕೆಎಲ್ ರಾಹುಲ್ ಹಾಗೂ ರಾಬಿನ್ ಉತ್ತಪ್ಪ ಅದ್ಭುತ ಆಟ ಪ್ರದರ್ಶಿಸಿ ತಂಡದ ಜಯಕ್ಕೆ ಕಾರಣರಾದರು, ಇಂಡಿಯಾ ಎ ಪರ ಆಡುತ್ತಿದ್ದ ನಾಯಕ ವಿನಯ್ ಮಂಗಳವಾರವಷ್ಟೇ ಕರ್ನಾಟಕ ತಂಡ ಸೇರಿದ್ದರು. ಈ ಪಂದ್ಯದಲ್ಲಿ 38 ರನ್ನಿತ್ತು 4 ವಿಕೆಟ್ ಕಿತ್ತರು. ಮಿಥುನ್ 42 ರನ್ನಿತ್ತು 3 ವಿಕೆಟ್ ಪಡೆದರು. ಆಂಧ್ರ 228 ರನ್ನಿಗೆ ಆಲೌಟ್ ಆಗಿ ಬಿಟ್ಟಿತು.

ಅಜೇಯ ಕರ್ನಾಟಕಕ್ಕೆ  ದಕ್ಷಿಣ ಪಥೇಶ್ವರ ಪಟ್ಟ

229 ರನ್ ಗಳನ್ನು ಚೇಸ್ ಮಾಡಿದ ಕರ್ನಾಟಕ ತಂಡಕ್ಕೆ ಮತ್ತೊಮ್ಮೆ ರಾಬಿನ್ ಉತ್ತಪ್ಪ ಆಸರೆಯಾದರು. ಉತ್ತಪ 50, ರಾಹುಲ್ 75 ರನ್ ಚೆಚ್ಚಿ 97 ರನ್ ಜೊತೆಯಾಟ ಪ್ರದರ್ಶಿಸಿದರು. ಅದರೆ, ಮಧ್ಯಮ ಕ್ರಮಾಂಕದಲ್ಲಿ ತಪತಪನೆ ವಿಕೆಟ್ ಗಳು ಉದುರಿಬಿಟ್ಟಿತು.

ಕೊನೆ ಗಳಿಗೆಯಲ್ಲಿ 32 ಎಸೆತದಲ್ಲಿ 13ರನ್ ಬೇಕಿತ್ತು. 2 ವಿಕೆಟ್ ಮಾತ್ರ ಇತ್ತು. ರಾಜು ಭಟ್ಕಳ, ಆರ್ ನಿನಾನ್ ಹಾಗೂ ಹೀಗೂ 6 ರನ್ ಬೇಕು ಎನ್ನುವಂತೆ ಮಾಡಿದರು. ಆದರೆ, ನಿನಾನ್ ವಿಕೆಟ್ ಒಪ್ಪಿಸಿ ಹೊರಟಾಗ 10 ಎಸೆತ ಮಾತ್ರ ಬಾಕಿ ಇತ್ತು. 1 ವಿಕೆಟ್ ಮಾತ್ರ ಕರ್ನಾಟಕ ಉಳಿಸಿಕೊಂಡಿತ್ತು.

ಆತಂಕದ ಕೊನೆ ಓವರ್: 5 ರನ್ ಬೇಕಿತ್ತು. ಕೊನೆಗೆ 3 ಎಸೆತದಲ್ಲಿ 4 ರನ್ ಗೆ ಇಳಿಯಿತು. ಸ್ಪಿನ್ನರ್ ಅಪ್ಪಣ್ಣ ಜ್ಞಾನೇಶ್ವರ್ ರಾವ್ ಅವರ ಎಸೆತವನ್ನು ಬೌಂಡರಿಗೆ ಅಟ್ಟುವ ಮೂಲಕ ಕರ್ನಾಟಕಕ್ಕೆ ಜಯ ತಂದಿತ್ತರು.

ಕರ್ನಾಟಕ ಒಟ್ಟು 20 ಅಂಕ ಸಂಪಾದಿಸಿದ್ದು, 17 ಅಂಕ ಪಡೆದಿರುವ ಕೇರಳ ಜೊತೆಗೆ ಆಲ್ ಇಂಡಿಯಾ ವಿಜಯ್ ಹಜಾರೆ ಟ್ರೋಫಿಗೆ ಅರ್ಹತೆ ಪಡೆದು ಕೊಂಡಿದೆ. ಫೆ. 26 ರಿಂದ ಮಾ.3ರ ತನಕ ವಿಜಯ್ ಹಜಾರೆ ಟ್ರೋಫಿ ನಡೆಯಲಿದೆ.

English summary
Karnataka remained unbeaten throughout the tournament to claim the South Zone One Day Subbaiah Pillai Trophy here on Wednesday. In their last league game, Karnataka edged Andhra by one wicket in a tense finish at the Margao Cricket Club (MCC) ground.
ಅಭಿಪ್ರಾಯ ಬರೆಯಿರಿ