Englishहिन्दीമലയാളംதமிழ்తెలుగు

ರಾಬಿನ್, ರಾಹುಲ್ ಆರ್ಭಟ, ಕರ್ನಾಟಕಕ್ಕೆ ಜಯ

Posted by:
Published: Tuesday, February 19, 2013, 11:54 [IST]
 

ರಾಬಿನ್, ರಾಹುಲ್ ಆರ್ಭಟ, ಕರ್ನಾಟಕಕ್ಕೆ ಜಯ
 

ಗೋವಾ, ಫೆ.18: ಕೆಎಸ್ ಸುಬ್ಬಯ್ಯ ಪಿಳ್ಳೆ ಕ್ರಿಕೆಟ್ ಟೂರ್ನಿಯಲ್ಲಿ ಸತತ ನಾಲ್ಕನೆ ಗೆಲುವು ಸಾಧಿಸುವ ಮೂಲಕ ಕರ್ನಾಟಕ ತಂಡ ನಾಕೌಟ್ ಹಂತ ತಲುಪಿದೆ. ಹೈದರಾಬಾದ್ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ರಾಬಿನ್ ಉತ್ತಪ್ಪ, ಕೆಎಲ್ ರಾಹುಲ್ ಭರ್ಜರಿ ಶತಕ ಸಿಡಿಸಿ ರಾಜ್ಯಕ್ಕೆ ಅರ್ಹ ಜಯ ತಂದಿತ್ತರು.

ಹೈದರಾಬಾದ್‌ ತಂಡವನ್ನು 47 ರನ್‌ಗಳ ಅಂತರದಲ್ಲಿ ಮಣಿಸಿದ ಕರ್ನಾಟಕ ತಂಡ, 4 ಪಂದ್ಯಗಳಲ್ಲಿ 16 ಅಂಕಗಳನ್ನು ಗಳಿಸಿ ಸುಲಭವಾಗಿ ಮುಂದಿನ ಹಂತಕ್ಕೆ ಅರ್ಹತೆ ಪಡೆಯಿತು. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಲೊಕೇಶ್ ರಾಹುಲ್ 110 ರನ್(107ಎಸೆತ, 9 ಬೌಂಡರಿ) ಹಾಗೂ ರಾಬಿನ್ ಉತ್ತಪ್ಪ 103 ರನ್(108ಎಸೆತ, 10 ಬೌಂಡರಿ) ಶತಕಗಳ ನೆರವಿನಿಂದ 9 ವಿಕೆಟ್‌ಗೆ 305 ರನ್ ಗಳಿಸಿತ್ತು.

ಗೆಲುವಿಗೆ ಕಠಿಣ ಸವಾಲು ಪಡೆದ ಹೈದರಾಬಾದ್ 46.4 ಓವರ್‌ಗಳಲ್ಲಿ 258 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಸ್ಟುವರ್ಟ್ ಬಿನ್ನಿ(4/56) ಹಾಗೂ ಅಕ್ಷಯ್(4/50) 8 ವಿಕೆಟ್‌ಗಳನ್ನು ಹಂಚಿಕೊಂಡರು.

ಉಳಿದಂತೆ ದಕ್ಷಿಣ ವಲಯದಲ್ಲಿ ಕೇರಳ ತಂಡ ಬಲಿಷ್ಠ ತಮಿಳುನಾಡಿಗೆ 5 ವಿಕೆಟ್ ಗಳ ಸೋಲುಣಿಸಿದರೆ, ಗೋವಾ ತಂಡ ಸತತ ನಾಲ್ಕನೇ ಸೋಲು ಕಂಡಿತು. ಆಂಧ್ರ ತಂಡ ಗೋವಾವನ್ನು ಕೇವಲ 91 ರನ್ ಗೆ ಆಲೌಟ್ ಮಾಡಿತು. ಅಂಕ ಪಟ್ಟಿಯಲ್ಲಿ ಕರ್ನಾಟಕದ ನಂತರ ಆಂಧ್ರ ಹಾಗೂ ಕೇರಳ ತಲಾ 13 ಅಂಕ ಪಡೆದು ನಂತರದ ಸ್ಥಾನದಲ್ಲಿದ್ದಾರೆ.

ಸಂಕ್ಷಿಪ್ತ ಸ್ಕೋರ್: ಕರ್ನಾಟಕ 305/9, 50 ಓವರ್ಸ್(ಕೆಎಲ್ ರಾಹುಲ್ 110, ರಾಬಿನ್ ಉತ್ತಪ್ಪ 103, ಮನೀಶ್ ಪಾಂಡೆ 42, ಆಶೀಶ್ ರೆಡ್ಡಿ 3/88) ಹೈದರಾಬಾದ್ 258 ಆಲೌಟ್ ,46.4 ಓವರ್ (ಹನುಮ ವಿಹಾರಿ 84, ಸಂದೀಪ್ 72, ಎಸ್ ಎಲ್ ಅಕ್ಷಯ್ 4/50, ಸ್ಟುವರ್ಟ್ ಬಿನ್ನಿ 4/56)

English summary
KL Rahul (110) and Robin Uthappa's (103) fine centuries helped Karnataka defeat Hyderabad by 47 runs in the KS Subbaiah Pillai Trophy South Zone 50-over tournament here on Monday. This was Karnataka's fourth straight victory.
ಅಭಿಪ್ರಾಯ ಬರೆಯಿರಿ