Englishहिन्दीമലയാളംதமிழ்తెలుగు

ವಿಶೇಷ ತಂಡಕ್ಕೆ ತಲೆ ಬಾಗಿದ ಕ್ರಿಕೆಟ್ ದೇವರು

Posted by:
Updated: Monday, April 22, 2013, 15:41 [IST]
 

ಬೆಂಗಳೂರು, ಫೆ.18: ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರು ಮತ್ತೊಮ್ಮೆ ಏಕದಿನ ಕ್ರಿಕೆಟ್ ಪಂದ್ಯ ಆಡಲಿ ಎಂಬುದು ಅಸಂಖ್ಯ ಅಭಿಮಾನಿಗಳ ಕೋರಿಕೆ ನಿಜ. ಆದರೆ, ಸಚಿನ್ ಮಾತ್ರ ತಮ್ಮ ನಿರ್ಧಾರದಿಂದ ಹಿಂದೆ ಸರಿದಿಲ್ಲ. ಆದರೆ, ಭಾನುವಾರ ಸಚಿನ್ ಅವರನ್ನು ಭೇಟಿ ಮಾಡಿದ ವಿಶೇಷ ತಂಡವೊಂದು ಅವರನ್ನು ಮತ್ತೊಮ್ಮೆODI ಪಂದ್ಯ ಆಡುವಂತೆ ಮಾಡಿದೆ.

IDL ಫೌಂಡೇಶನ್ ಅವರ ಅಂಧರ ತಂಡ ಸಚಿನ್ ಅವರನ್ನು ಭೇಟಿ ಮಾಡಿ ಕೊನೆ ಪಕ್ಷ ಸಹಾಯಾರ್ಥ ಏಕದಿನ ಪಂದ್ಯವಾದರೂ ಆಡಲೇಬೇಕು ಎಂದು ದುಂಬಾಲು ಬಿದ್ದಾಗ ಸಚಿನ್ ಗೆ ಇಲ್ಲ ಎನ್ನಲಾಗಲಿಲ್ಲ. ಐಡಿಎಲ್ ಅಂಧರ ಬ್ಯಾಂಡ್(ಮ್ಯೂಸಿಕ್) ಮುಖ್ಯಸ್ಥ ಪಿ.ಕೆ ಪಾಲ್ ಅವರಿತ್ತ ಮನವಿಗೆ ಸಚಿನ್ ಒಪ್ಪಿಗೆ ಸೂಚಿಸಿದ್ದಾರೆ.

ಸಚಿನ್ ಮರಳಿ ಬಾ ಎಂದು ಐಡಿಎಲ್ ಮ್ಯೂಸಿಕ್ ಬ್ಯಾಂಡ್ ನ ಅಂಧರು ಕಳೆದ ಜನವರಿ 10 ರಂದು ಬೆಂಗಳೂರಿನಲ್ಲಿ ಸತತ 10 ಗಂಟೆಗಳ ಕಾಲ ನಿರಂತರವಾಗಿ ಸಂಗೀತ ನುಡಿಸಿದ್ದರು. ಈ ಬಗ್ಗೆ ಕೇಳಿ ತಿಳಿದಾಗ ಸಚಿನ್ ಅವರ ಕಣ್ಣಾಲಿಗಳು ತುಂಬಿ ಬಂದಿತು. ಖಂಡಿತವಾಗಿಯೂ ಐಡಿಎಲ್ ಪರವಾಗಿ ಒಂದು ಪಂದ್ಯ ಆಡುತ್ತೇನೆ. ನಿಮ್ಮ ನೇತ್ರದಾನ ಅಭಿಯಾನಕ್ಕೆ ಬೆಂಬಲ ಎಂದಿನಂತೆ ಸೂಚಿಸುತ್ತೇನೆ ಎಂದು ಸಚಿನ್ ಭರವಸೆ ನೀಡಿದರು.

ಐಡಿಯಲ್ ಸಂಸ್ಥೆಗೆ 10 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ತಮ್ಮ ಸಾಮಾಜಿಕ ಸೇವೆಯನ್ನು ಇನ್ನಷ್ಟು ಹೆಚ್ಚಿಸಲು ನಿರ್ಧರಿಸಿದೆ. ಸುಮಾರು 30 ಸಾವಿರಕ್ಕೂ ಅಧಿಕ ಮಂದಿಗೆ ಐಡಿಎಲ್ ನೆರವಾಗಿದೆ. 2006ರಲ್ಲಿ ರಾಜ್ಯ ಪ್ರಶಸ್ತಿ, 2013ರ ಬಿಬಿಎಂಪಿ ಕೆಂಪೇಗೌಡ ಪ್ರಶಸ್ತಿಗಳು ಸಂಸ್ಥೆಗೆ ಲಭಿಸಿದೆ. 80 ಸಾವಿರಕ್ಕೂ ಅಧಿಕ ನೇತ್ರದಾನ ಅಭಿಯಾನವನ್ನು ಸಂಸ್ಥೆ ಯಶಸ್ವಿಯಾಗಿ ಪೂರೈಸಿದೆ.

ವಿಶೇಷ ತಂಡಕ್ಕೆ ತಲೆ ಬಾಗಿದ ಕ್ರಿಕೆಟ್ ದೇವರು

ಐಡಿಎಲ್ ಅಂಧರ ಬ್ಯಾಂಡ್(ಮ್ಯೂಸಿಕ್) ಮುಖ್ಯಸ್ಥ ಪಿ.ಕೆ ಪಾಲ್ ಅವರಿತ್ತ ಮನವಿ ನೋಡುತ್ತಿರುವ ಕ್ರಿಕೆಟ್ ದೇವರು

ವಿಶೇಷ ತಂಡಕ್ಕೆ ತಲೆ ಬಾಗಿದ ಕ್ರಿಕೆಟ್ ದೇವರು

ಐಡಿಎಲ್ ಅಂಧರ ಬ್ಯಾಂಡ್(ಮ್ಯೂಸಿಕ್) ಮುಖ್ಯಸ್ಥ ಪಿ.ಕೆ ಪಾಲ್ ಅವರಿತ್ತ ಮನವಿ ನೋಡುತ್ತಿರುವ ಕ್ರಿಕೆಟ್ ದೇವರು

ವಿಶೇಷ ತಂಡಕ್ಕೆ ತಲೆ ಬಾಗಿದ ಕ್ರಿಕೆಟ್ ದೇವರು

ಮರಳಿ ಬಾ ಸಚಿನ್ ಎಂದು 2500ಕ್ಕೂ ಅಧಿಕ ಅಂಧರು LTM ಸಹಿ ಹಾಕಿರುವ ಬ್ಯಾನರ್ ವೀಕ್ಷಿಸುತ್ತಿರುವ ಸಚಿನ್

ವಿಶೇಷ ತಂಡಕ್ಕೆ ತಲೆ ಬಾಗಿದ ಕ್ರಿಕೆಟ್ ದೇವರು

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಫೀಲ್ಡಿಂಗ್ ಅಭ್ಯಾಸ ನಿರತ ಸಚಿನ್ ತೆಂಡೂಲ್ಕರ್

ವಿಶೇಷ ತಂಡಕ್ಕೆ ತಲೆ ಬಾಗಿದ ಕ್ರಿಕೆಟ್ ದೇವರು

ಮನಸ್ಸು ಉಲ್ಲಾಸವಾಗಿದ್ದರೆ ಆಟವೂ ಸೂಪರ್, ಅಜಿಂಕ್ಯ ರಹಾನೆ ಜೊತೆ ಸಚಿನ್

ವಿಶೇಷ ತಂಡಕ್ಕೆ ತಲೆ ಬಾಗಿದ ಕ್ರಿಕೆಟ್ ದೇವರು

ಕಠಿಣ ಅಭ್ಯಾಸದಲ್ಲಿ ಕನ್ನಡಕಧಾರಿ ಸೆಹ್ವಾಗ್

ವಿಶೇಷ ತಂಡಕ್ಕೆ ತಲೆ ಬಾಗಿದ ಕ್ರಿಕೆಟ್ ದೇವರು

ಹೊಸ ಆರಂಭಿಕ ಜೋಡಿ? ಸೆಹ್ವಾಗ್ ಜೊತೆ ಶಿಖರ್ ಧವನ್ ಮಾತುಕತೆ


Story first published:  Monday, February 18, 2013, 18:22 [IST]
English summary
Master Blaster Sachin Tendulkar and Captain MS Dhoni met IDL TEAM with blind & visually challenged on Sunday(Feb.17) at KSCA Stadium. P.K.Paul, Founder & Executive of IDL Blind Band requested Sachin to play final last one ODI or a farewell match or a benefit for IDL Foundation who are in 10th year service to humanity 2003-2013
ಅಭಿಪ್ರಾಯ ಬರೆಯಿರಿ