Englishहिन्दीമലയാളംதமிழ்తెలుగు

ಚಿತ್ರಗಳಲ್ಲಿ: ಬೆಂಗಳೂರಿನಲ್ಲಿ ಬೆವರಿಳಿಸಿದ ಧೋನಿ ಪಡೆ

Posted by:
Updated: Sunday, February 17, 2013, 15:34 [IST]
 

ಬೆಂಗಳೂರು, ಫೆ.17: ಪ್ರವಾಸಿ ಆಸ್ಟ್ರೇಲಿಯಾ ತಂಡದ ವಿರುದ್ಧದ ಟೆಸ್ಟ್ ಸರಣಿಗೆ ಎಂಎಸ್ ಧೋನಿ ನೇತೃತ್ವದ ಟೀಮ್‌ಇಂಡಿಯಾ ಭರ್ಜರಿಯಾಗಿ ತಯಾರಿ ನಡೆಸುತ್ತಿದೆ. ಆಸೀಸ್ ತಂಡ ತಂತ್ರಜ್ಞಾನಕ್ಕೆ ಮೊರೆ ಹೋಗಿ ಆಟಗಾರರ ವಿಡಿಯೋ ಚಿತ್ರೀಕರಣ ವೀಕ್ಷಿಸುತ್ತಿದ್ದರೆ, ಧೋನಿ ಪಡೆ ಮೈದಾನದಲ್ಲಿ ಸಾಕಷ್ಟು ಬೆವರಿಳಿಸಿದೆ.

ಕೆಎಸ್ ಸಿಎ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿರುವ 3 ದಿನಗಳ ತರಬೇತಿ ಶಿಬಿರ ಬೆಳಗ್ಗೆ 10ಕ್ಕೆ ಆರಂಭವದರೆ ಸಂಜೆ 4.30ಕ್ಕೆ ಮುಗಿಯುವುದು. ಮುಂದಿನ ವಾರ ಚೆನ್ನೈಯಲ್ಲಿ ಆಸ್ಟ್ರೇಲಿಯ ವಿರುದ್ಧ ಆರಂಭವಾಗಲಿರುವ ಟೆಸ್ಟ್ ಸರಣಿ ಭಾರತಕ್ಕೆ ಸತ್ವ ಪರೀಕ್ಷೆಯಾಗಿದೆ.

ಏಕದಿನ ಕ್ರಿಕೆಟ್‌ನಿಂದ ಈಗಾಗಲೆ ನಿವೃತ್ತಿಯಾಗಿರುವ ಹಿರಿಯ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್, ತಂಡಕ್ಕೆ ಮರಳಿರುವ ಸ್ಫೊಟಕ್ ಬ್ಯಾಟ್ಸ್ ಮನ್ ವೀರೇಂದರ್ ಸೆಹ್ವಾಗ್, ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ ಅವರು ನೆಟ್ ಪ್ರಾಕ್ಟೀಸ್ ಸಮಯದಲ್ಲಿ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು.

ಇದೇ ವೇಳೆ, ಟೆಸ್ಟ್ ತಂಡದ ಹೊಸ ಮುಖ ಶಿಖರ್‌ಧವನ್, ಜೊತೆಗೆ ಮುರಳಿ ವಿಜಯ್, ವೀರೇಂದ್ರ ಸೆಹ್ವಾಗ್, ರವೀಂದ್ರ ಜಡೇಜ ಗಂಭೀರವಾಗಿ ಅಭ್ಯಾಸ ನಡೆಸಿದರು. ಆಸ್ಟ್ರೇಲಿಯದ ವೇಗದ ಬೌಲರ್‌ಗಳ ಶಾರ್ಟ್‌ಪಿಚ್ ಎಸೆತವನ್ನು ಎದುರಿಸುವ ಕುರಿತಂತೆ ಬೌಲಿಂಗ್ ಕೋಚ್ ಜಾಯ್ ಡೇವಿಸ್ ಬ್ಯಾಟ್ಸ್‌ಮನ್ ಗಳಿಗೆ ಸಲಹೆ-ಸೂಚನೆ ನೀಡುತ್ತಿದ್ದರು.

ಫೆ.22ರಿಂದ ಚೆನ್ನೈನಲ್ಲಿ ಆರಂಭವಾಗುವ ಮೊದಲ ಟೆಸ್ಟ್‌ನಲ್ಲಿ ಭಾರತ, ಆಸ್ಟ್ರೇಲಿಯವನ್ನು ಎದುರಿಸಲಿದೆ. ಬಿಗಿ ಭದ್ರತೆಯ ನಡುವೆ ಭಾರತ ತಂಡದ ಅಭ್ಯಾಸ ಹೇಗಿತ್ತು ಚಿತ್ರಗಳಲ್ಲಿ ನೋಡಿ....

ಟೀಂ ಇಂಡಿಯಾ ಅಭ್ಯಾಸ ಆರಂಭ

ಕ್ರಿಕೆಟ್ ದೇವರು ಅಭ್ಯಾಸದ ನಡುವೆ ಹಾಸ್ಯ ಸನ್ನಿವೇಶದಲ್ಲಿ ಮನಸಾರೆ ನಗೆ ಹಾರಿಸಿದ್ದು ಹೀಗೆ

ಟೀಂ ಇಂಡಿಯಾ ಅಭ್ಯಾಸ ಆರಂಭ

ಕರ್ನಾಟಕ ಪೊಲೀಸರ ಜೊತೆ ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಪೋಸ್

ಟೀಂ ಇಂಡಿಯಾ ಅಭ್ಯಾಸ ಆರಂಭ

ಆಕಸ್ಮಿಕ ಬೆಂಕಿ ಆಘಾತದ ನಂತರ ಸ್ಕ್ರೀನ್ ಇಳಿಸುತ್ತಿರುವ ಚಿನ್ನಸ್ವಾಮಿ ಕ್ರೀಡಾಂಗಣದ ಸಿಬ್ಬಂದಿ

ಟೀಂ ಇಂಡಿಯಾ ಅಭ್ಯಾಸ ಆರಂಭ

ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಸೆಂಟರ್ ಪಿಚ್ ನಲ್ಲಿ ಅಭ್ಯಾಸ ನಿರತ ನಾಯಕ ಧೋನಿ

ಟೀಂ ಇಂಡಿಯಾ ಅಭ್ಯಾಸ ಆರಂಭ

ಭಾರತದ ಭರವಸೆಯ ಆಟಗಾರ ಚೇತೇಶ್ವರ ಪೂಜಾರಾ ಮದುವೆಯಾದ ಎರಡು ದಿನಕ್ಕೆ ಮೈದಾನಕ್ಕೆ ಇಳಿದು ಅಭ್ಯಾಸ ನಿರತನಾಗಿದ್ದಾರೆ.

ಟೀಂ ಇಂಡಿಯಾ ಅಭ್ಯಾಸ ಆರಂಭ

ತರಬೇತಿ ನಿರತರಾದ ಹರ್ಭಜನ್ ಸಿಂಗ್, ರವೀಂದ್ರ ಜಡೇಜ ಹಾಗೂ ಆರ್ ಅಶ್ಚಿನ್

ಟೀಂ ಇಂಡಿಯಾ ಅಭ್ಯಾಸ ಆರಂಭ

ಆರಂಭಿಕ ಆಟಗಾರ ಎಂ ವಿಜಯ್ ಅವರು ಕಠಿಣ ಅಭ್ಯಾಸ ನಿರತರಾಗಿರುವುದು

ಟೀಂ ಇಂಡಿಯಾ ಅಭ್ಯಾಸ ಆರಂಭ

ಟೆಸ್ಟ್ ಕ್ರಿಕೆಟ್ ನಲ್ಲಿ ನೂರನೇ ವಿಕೆಟ್ ಕೀಳುವ ಗುರಿ ಹೊಂದಿರುವ ಭಜ್ಜಿ ಬೌಲಿಂಗ್ ಶೈಲಿ

ಟೀಂ ಇಂಡಿಯಾ ಅಭ್ಯಾಸ ಆರಂಭ

ವೀರೆಂದರ್ ಸೆಹ್ವಾಗ್, ಸಚಿನ್ ತೆಂಡೂಲ್ಕರ್ ಹಾಗೂ ಹರ್ಭಜನ್ ಸಿಂಗ್

ಟೀಂ ಇಂಡಿಯಾ ಅಭ್ಯಾಸ ಆರಂಭ

ಆರಂಭಿಕ ಆಟಗಾರರಾದ ವೀರೇಂದರ್ ಸೆಹ್ವಾಗ್ ಹಾಗೂ ಎಂ. ವಿಜಯ್

ಟೀಂ ಇಂಡಿಯಾ ಅಭ್ಯಾಸ ಆರಂಭ

ಎಂಎಸ್ ಧೋನಿ ಹಾಗೂ ಕೋಚ್ ಡಂಕನ್ ಫ್ಲೆಚರ್

ಟೀಂ ಇಂಡಿಯಾ ಅಭ್ಯಾಸ ಆರಂಭ

ಸಚಿನ್ ಹಾಗೂ ಧೋನಿ ಹಾಸ್ಯ ಚಟಾಕಿ ಹಂಚಿಕೊಂಡು ನಗೆಯಾಡಿದ್ದು ಹೀಗೆ

Story first published:  Sunday, February 17, 2013, 14:00 [IST]
English summary
M Chinnaswamy Stadium was the setting as Men in Blue started their preparations for Australia Test series on Saturday. All 15 Indian Test players were put through their paces by coach Duncan Fletcher and support staff.
ಅಭಿಪ್ರಾಯ ಬರೆಯಿರಿ