Englishहिन्दीമലയാളംதமிழ்తెలుగు

ಐಪಿಎಲ್ ಅಂಗಳಕ್ಕೆ ಕಾಲಿಟ್ಟ ಮೊಟ್ಟ ಮೊದಲ ಕಾಶ್ಮೀರಿ

Posted by:
Published: Friday, February 15, 2013, 16:25 [IST]
 

ಬೆಂಗಳೂರು, ಫೆ.15: ಜಮ್ಮು-ಕಾಶ್ಮೀರದ ಆಲ್‌ರೌಂಡರ್ ಪರ್ವೇಜ್ ರಸೂಲ್ ಅವರನ್ನು ಪುಣೆ ವಾರಿಯರ್ಸ್‌ ತಂಡ ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಐಪಿಎಲ್‌ 6ರಲ್ಲಿ ಪರ್ವೇಜ್ ಆಡುವುದು ಖಚಿತವಾಗಿದೆ. ಬೆಂಗಳೂರು ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆದ ಕಹಿ ನೆನಪು ಮರೆತಿರುವ ಪರ್ವೇಜ್ ಸರಿ ದಾರಿಯಲ್ಲಿ ವೃತ್ತಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ಆಸ್ಟ್ರೇಲಿಯ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಅಧ್ಯಕ್ಷರ ಇಲೆವೆನ್ ಪರ 7 ವಿಕೆಟ್‌ಗಳನ್ನು ಉಡಾಯಿಸಿ ಗಮನಸೆಳೆದಿದ್ದ ರಸೂಲ್, ಐಪಿಎಲ್ ತಂಡದೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿ ರುವ ಮೊದಲ ಜಮ್ಮು-ಕಾಶ್ಮೀರದ ಕ್ರಿಕೆಟಿಗನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

24ರ ಹರೆಯದ ರಸೂಲ್‌ರೊಂದಿಗೆ ಒಪ್ಪಂದ ಮಾಡಿಕೊಳ್ಳಲು ಮೂರು ಫ್ರಾಂಚೈಸಿಗಳು ಪೈಪೋಟಿ ನಡೆಸಿದ್ದು, ಸಹರಾ ಪರಿವಾರ್ ಮಾಲಕತ್ವದ ಪುಣೆ ವಾರಿಯರ್ಸ್‌ ರಸೂಲ್‌ರನ್ನು ಬಲೆಗೆ ಹಾಕಿಕೊಳ್ಳಲು ಯಶಸ್ವಿಯಾಗಿದೆ. 'ಆಸ್ಟ್ರೇಲಿಯದ ನಾಯಕ ಮೈಕಲ್‌ಕ್ಲಾರ್ಕ್, ಯುವರಾಜ್ ಸಿಂಗ್‌ರೊಂದಿಗೆ ಡ್ರೆಸ್ಸಿಂಗ್‌ರೂಮ್ ಹಂಚಿಕೊಳ್ಳುವ ಅವಕಾಶ ಲಭಿಸಿದ್ದಕ್ಕೆ ಬಹಳಷ್ಟು ಖುಷಿಯಾಗುತ್ತಿದೆ. ಐಪಿಎಲ್ ಟೂರ್ನಿ ತನ್ನ ವೃತ್ತಿಜೀವನಕ್ಕೆ ತಿರುವು ನೀಡುವ ವಿಶ್ವಾಸವಿದೆ' ಎಂದು ರಸೂಲ್ ಪ್ರತಿಕ್ರಿಯಿಸಿದ್ದಾರೆ.

ಐಪಿಎಲ್ ಅಂಗಳಕ್ಕೆ ಕಾಲಿಟ್ಟ ಮೊಟ್ಟ ಮೊದಲ ಕಾಶ್ಮೀರಿ

'ಹಲವು ಫ್ರಾಂಚೈಸಿಗಳು ನನ್ನನ್ನು ಸಂಪರ್ಕಿಸಿದ್ದವು. ಪುಣೆ ಫ್ರಾಂಚೈಸಿ ನಾನು ಆಸ್ಟ್ರೇಲಿಯ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡುವ ಮೊದಲೇ ನನ್ನನ್ನು ಸಂಪರ್ಕಿಸಿತ್ತು. ಹೀಗಾಗಿ, ಆ ತಂಡವನ್ನು ಸೇರಲು ಬಯಸಿದ್ದೇನೆ. ಐಪಿಎಲ್‌ನಲ್ಲಿ ಆಡಲು ಉತ್ಸುಕನಾಗಿದ್ದು, ಐಪಿಎಲ್‌ನಲ್ಲಿ ಸ್ಥಾನ ಪಡೆದ ಕಾಶ್ಮೀರ ಕಣಿವೆಯ ಮೊದಲ ಕ್ರಿಕೆಟಿಗನೆಂಬ ಹೆಮ್ಮೆ ನನಗಿದೆ' ಎಂದು ಪರ್ವೇಜ್ ರಸೂಲ್ ಹೇಳಿದ್ದಾರೆ.

English summary
All-rounder Parvez Rassol on Thursday became the first player from Jammu and Kashmir to bag an IPL contract after Pune Warriors signed him for the sixth edition of IPL.
ಅಭಿಪ್ರಾಯ ಬರೆಯಿರಿ