Englishहिन्दीമലയാളംதமிழ்తెలుగు

ಆಸೀಸ್ ಟೆಸ್ಟ್ ಸರಣಿ, ಗಂಭೀರ್ ಔಟ್, ಭಜ್ಜಿ ಇನ್

Posted by:
Updated: Sunday, February 10, 2013, 14:43 [IST]
 

ಬೆಂಗಳೂರು, ಫೆ.10: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಮಹತ್ವದ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಿಗೆ ತಂಡವನ್ನು ಬಿಸಿಸಿಐ ಭಾನುವಾರ(ಫೆ.10) ಘೋಷಿಸಿದೆ. ಆರಂಭಿಕ ಆಟಗಾರ ಗೌತಮ್ ಗಂಭೀರ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.

ರಣಜಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಶಿಖರ್ ಧವನ್ ಹಾಗೂ ಮುರಳಿ ವಿಜಯ್ ಅವರು 15 ಜನ ಆಟಗಾರರ ತಂಡಕ್ಕೆ ಆಯ್ಕೆಯಾಗಿದ್ದಾರೆ. ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ತಂಡಕ್ಕೆ ಮರಳಿದ್ದಾರೆ.

ಏಕದಿನ ಪಂದ್ಯಗಳಲ್ಲಿ ಉತ್ತಮ ನಿರ್ವಹಣೆ ತೋರಿರುವ ವೇಗಿ ಭುವನೇಶ್ವರ್ ಕುಮಾರ್ ಅವರು ಟೆಸ್ಟ್ ತಂಡಕ್ಕೆ ಆಯ್ಕೆಯಾಗುವ ಮೂಲಕ ಬಡ್ತಿ ಪಡೆದಿದ್ದಾರೆ. ಅಶೋಕ್ ದಿಂಡಾ ಹಾಗೂ ಇಶಾಂತ್ ಶರ್ಮ ತಂಡದಲ್ಲಿರುವ ಇತರೆ ವೇಗಿಗಳಾಗಿದ್ದಾರೆ. ಗಾಯಾಳುವಾಗಿದ್ದ ಶ್ರೀಶಾಂತ್ ಅವರು ತಂಡಕ್ಕೆ ಮರಳುವಲ್ಲಿ ವಿಫಲರಾಗಿದ್ದಾರೆ.

ಆಲ್ ರೌಂಡರ್ ರವೀಂದ್ರ ಜಡೇಜ ತಮ್ಮ ಸ್ಥಾನ ಉಳಿಸಿಕೊಂಡಿದ್ದರೆ, ಉತ್ತಮ ಪ್ರದರ್ಶನದ ನಡುವೆಯೂ ಎಡಗೈ ಆಟಗಾರ ಸುರೇಶ್ ರೈನಾ ಅವರು ಆಯ್ಕೆದಾರರ ಗಮನ ಸೆಳೆಯಲು ಆಗಿಲ್ಲ.

ಕಳೆದ ರಣಜಿ ಋತುವಿನಲ್ಲಿ ಭರ್ಜರಿ ಪ್ರದರ್ಶನ ನೀಡಿದ ಮುಂಬೈ ಆರಂಭಿಕ ಆಟಗಾರ ವಾಸಿಂ ಜಾಫರ್, ಕರ್ನಾಟಕದ ಸಿ.ಎಂ ಗೌತಮ್ ಅವರನ್ನು ಆಯ್ಕೆದಾರರು ಕಡೆಗಣಿಸಿದ್ದಾರೆ.

ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಫೆ.22 ರಂದು ಚೆನ್ನೈನಲ್ಲಿ ನಡೆಯಲಿದೆ. ನಾಲ್ಕು ಟೆಸ್ಟ್ ಪಂದ್ಯಗಳ ಸರಣಿ ಇದಾಗಿದೆ. ಮಾ.2 ರಂದು ಹೈದರಾಬಾದ್, ಮಾ.14 ರಂದು ಮೊಹಾಲಿ, ಮಾ.22 ರಂದು ದೆಹಲಿಯಲ್ಲಿ ಉಳಿದ ಪಂದ್ಯಗಳು ನಡೆಯಲಿದೆ. [ವೇಳಾಪಟ್ಟಿ]

ಭಾರತ ತಂಡ ಇಂತಿದೆ: ಎಂಎಸ್ ಧೋನಿ (ನಾಯಕ), ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಆರ್ ಅಶ್ವಿನ್, ಪ್ರಜ್ಞಾನ ಓಜಾ, ಶಿಖರ್ ಧವನ್, ಚೇತೇಶ್ವರ್ ಪೂಜಾರಾ, ಇಶಾಂತ್ ಶರ್ಮ, ವೀರೆಂದರ್ ಸೆಹ್ವಾಗ್, ಹರ್ಭಜನ್ ಸಿಂಗ್, ಭುವನೇಶ್ವರ್ ಕುಮಾರ್, ಅಶೋಕ್ ದಿಂಡಾ, ಅಜಿಂಕ್ಯ ರಹಾನೆ, ರವೀಂದ್ರ ಜಡೇಜ, ಮುರಳಿ ವಿಜಯ್

ಆಸ್ಟ್ರೇಲಿಯಾ ತಂಡ: ಮೈಕಲ್ ಕ್ಲಾರ್ಕ್ (ನಾಯಕ), ಶೇನ್ ವಾಟ್ಸನ್(ಉಪ ನಾಯಕ), ಜಾಕ್ಸನ್ ಬರ್ಡ್, ಎಡ್ ಕೋವನ್, ಕ್ಸೇವಿಯರ್ ಡೊಹೆರ್ತಿ, ಮೊಯಿಸಿಸ್ ಹೆನ್ರಿಕ್ಯೂಸ್, ಫಿಲಿಫ್ ಹ್ಯೂಸ್, ಮಿಚೆಲ್ ಜಾನ್ಸನ್, ಉಸ್ಮಾನ್ ಖ್ವಾಜ, ನಾಥನ್ ಲಿಯನ್, ಗ್ಲೆನ್ ಮೆಕ್ಸ್ ಮೆಲ್, ಜೇಮ್ಸ್ ಪ್ಯಾಟಿಸನ್, ಪೀಟರ್ ಸಿಡ್ಲ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮ್ಯಾಥ್ಯೂ ವೇಡ್(ವಿಕೆಟ್ ಕೀಪರ್), ಡೇವಿಡ್ ವಾರ್ನರ್

Story first published:  Sunday, February 10, 2013, 14:26 [IST]
English summary
The selectors have dropped opener Gautam Gambhir for first two India-Australia Tests. Shikhar Dhawan and Murali Vijay are in the squad of 15 while Harbhajan Singh has made a comeback.
ಅಭಿಪ್ರಾಯ ಬರೆಯಿರಿ