Englishहिन्दीമലയാളംதமிழ்తెలుగు

ಗವಾಸ್ಕರ್ ದಾಖಲೆ ಧೂಳಿಪಟ ಮಾಡಿದ ಸಚಿನ್

Posted by:
Updated: Friday, February 8, 2013, 16:54 [IST]
 

ಮುಂಬೈ, ಫೆ.8: ಸಚಿನ್ ತೆಂಡೂಲ್ಕರ್ ಮೈದಾನಕ್ಕೆ ಇಳಿದರೆ ಒಂದು ದಾಖಲೆ ನಿರ್ಮಾಣ ಎಂಬ ಮಾತು ಹಳೆಯದಾದರೂ ಶುಕ್ರವಾರ(ಫೆ.8) ವಿಶಿಷ್ಟ ಸಾಧನೆ ಮಾಡಿದ್ದಾರೆ. ಭಾರತ ಕ್ರಿಕೆಟ್ ನ ದಂತ ಕಥೆ ಸುನಿಲ್ ಗವಾಸ್ಕರ್ ಅವರು ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಬಾರಿಸಿದ್ದ 81 ಶತಕಗಳ ದಾಖಲೆಯನ್ನು ಸಚಿನ್ ಸರಿಗಟ್ಟಿದ್ದಾರೆ.

ಮುಂಬೈನ ವಾಂಖೆಡೆಯಲ್ಲಿ ನಡೆದಿರುವ ಇರಾನಿ ಟ್ರೋಫಿ ಪಂದ್ಯದಲ್ಲಿ ಮುಂಬೈ ಪರ ಆಡಿದ ತೆಂಡೂಲ್ಕರ್ ಅವರು ಅದ್ಭುತ ಶತಕ ಬಾರಿಸಿ ಗವಾಸ್ಕರ್ ದಾಖಲೆಯನ್ನು ಸರಿಗಟ್ಟಿದ್ದಾರೆ. ತಮ್ಮ 303ನೇ ಪ್ರಥಮ ದರ್ಜೆ ಪಂದ್ಯವಾಡಿದ ತೆಂಡೂಲ್ಕರ್ ಅವರು ಇತರೆ ಭಾರತ ತಂಡದ ವಿರುದ್ಧ 140 ರನ್ ಹೊಡೆದು ಶುಕ್ರವಾರ ಔಟಾಗದೆ ಉಳಿದಿದ್ದಾರೆ.

ಇದು ಇರಾನಿ ಟ್ರೋಫಿಯಲ್ಲಿ ತೆಂಡೂಲ್ಕರ್ ಅವರ ಎರಡನೇ ಶತಕವಾಗಿದ್ದು, 1989ರಲ್ಲಿ 16 ವರ್ಷ ವಯಸ್ಸಿನಲ್ಲೇ ದೆಹಲಿ ವಿರುದ್ಧ ಶತಕ ಬಾರಿಸಿದ್ದರು. ಇತರೆ ಭಾರತ ತಂಡದ ವೇಗಿ ಶ್ರೀಶಾಂತ್ ಎಸೆತವನ್ನು ಬೌಂಡರಿಗಟ್ಟಿದ ಸಚಿನ್, ಸಿಂಗಲ್ ಹೊಡೆದು 139 ಎಸೆತಗಳಲ್ಲಿ 100ರನ್ ಹೊಡೆದರು.

ಇದರ ಜೊತೆಗೆ ತೆಂಡೂಲ್ಕರ್ ಅವರು ಪ್ರಥಮ ದರ್ಜೆಯಲ್ಲಿ 25,000 ರನ್ ಪೂರೈಸಿದ ದಾಖಲೆ ಬರೆದರು. ಸಚಿನ್ ಗಿಂತ ಸುನಿಲ್ ಗವಾಸ್ಕರ್ ಮುಂದಿದ್ದು 25,834 ರನ್ ಗಳಿಸಿದ್ದಾರೆ. ಈ ಹಿಂದೆ ಟೆಸ್ಟ್ ಕ್ರಿಕೆಟ್ ನಲ್ಲಿ ಗವಾಸ್ಕರ್ ಅವರ 34 ಶತಕಗಳ ದಾಖಲೆ ಮುರಿದಿದ್ದ ಸಚಿನ್ ಗೆ 34 ಶಾಂಪೇನ್ ಬಾಟಲಿಗಳ ಉಡುಗೊರೆ ಸಿಕ್ಕಿತ್ತು.

ಭಾರತೀಯ ಕ್ರಿಕೆಟ್ ಶತಕ ವೀರರು:
ಸಚಿನ್ ತೆಂಡೂಲ್ಕರ್ ಹಾಗೂ ಸುನಿಲ್ ಗವಾಸ್ಕರ್ : 81
ರಾಹುಲ್ ದ್ರಾವಿಡ್ : 68
ದಿಲೀಪ್ ವೆಂಗ ಸರ್ಕಾರ್/ ವಿವಿಎಸ್ ಲಕ್ಷ್ಮಣ್ : 55
ಮಹಮ್ಮದ್ ಅಜರುದ್ದೀನ್ : 54

ದಟ್ಸ್ ಕ್ರಿಕೆಟ್

Story first published:  Friday, February 8, 2013, 16:43 [IST]
English summary
Sachin Tendulkar scored a magnificent century for Mumbai against Rest of India in Irani Cup on Friday to equal Sunil Gavaskar's Indian first-class record of 81 hundreds.
ಅಭಿಪ್ರಾಯ ಬರೆಯಿರಿ