Englishहिन्दीമലയാളംதமிழ்తెలుగు

ವೇಗಿ ಪ್ರವೀಣ್ ಕುಮಾರ್ 'ಮೆಂಟಲ್' ಅಂತೆ

Posted by:
Published: Thursday, February 7, 2013, 12:38 [IST]
 

ವೇಗಿ ಪ್ರವೀಣ್ ಕುಮಾರ್ 'ಮೆಂಟಲ್' ಅಂತೆ
 

ಬೆಂಗಳೂರು, ಫೆ.7: ಟೀಂ ಇಂಡಿಯಾದ ವೇಗಿ ಪ್ರವೀಣ್ ಕುಮಾರ್ ಮತ್ತೆ ತಂಡ ಸೇರುವುದು ಸಕತ್ ಕಷ್ಟವಾಗಲಿದೆ. ಗಾಯಾಳುವಾಗಿರುವ ಪ್ರವೀಣ್ ಅವರು ಮೈದಾನದಲ್ಲಿ ಆಡಲು 'ಮಾನಸಿಕ ಸಾಮರ್ಥ್ಯ' ಹೊಂದಿಲ್ಲ ಎಂದು ಮ್ಯಾಚ್ ರೆಫ್ರಿಯೊಬ್ಬರು ಸರ್ಟಿಫಿಕೇಟ್ ನೀಡಿದ್ದಾರೆ.

ಎದುರಾಳಿ ತಂಡದ ಆಟಗಾರರ ಜೊತೆ ಪ್ರವೀಣ್ ನಡೆದುಕೊಳ್ಳುವ ರೀತಿ ಭಯ ಹುಟ್ಟಿಸುತ್ತದೆ. ಪ್ರವೀಣ್ ನಡವಳಿಕೆ ಗಮನಿಸಿದರೆ ಮೈದಾನದಲ್ಲಿ ಆಡಲು ಬೇಕಾದ ಮಾನಸಿಕ ಸ್ವಾಸ್ಥ್ಯ ಕಳೆದುಕೊಂಡಿರುವುದು ಕಂಡುಬರುತ್ತದೆ ಎಂದು ರೆಫ್ರಿ ಹೇಳಿದ್ದಾರೆ. ಪ್ರವೀಣ್ ಕುಮಾರ್ ಸ್ಥಿತಿ ಗತಿ ಬಗ್ಗೆ ವಿವರವಾಗಿ ಬರೆದಿರುವ ಡಿಎನ್ ಎ ಪತ್ರಿಕೆ, ಬಿಸಿಸಿಐನ ಕಾರ್ಪೋರೇಟ್ ಟ್ರೋಫಿ ಟೂರ್ನಮೆಂಟ್ ನಲ್ಲಿ ನಡೆದ ಘಟನೆಯನ್ನು ಉಲ್ಲೇಖಿಸಿದೆ.

ಫೆ.4 ರಂದು ಒಎನ್ ಜಿಸಿ ಹಾಗೂ ಆದಾಯ ತೆರಿಗೆ ಇಲಾಖೆ ತಂಡಗಳ ನಡುವೆ ರಾಯ್ ಪುರ್ ನಲ್ಲಿ ಪಂದ್ಯ ನಡೆದಿತ್ತು. 26 ವರ್ಷದ ಪ್ರವೀಣ್ ಕುಮಾರ್ ಅವರು ಒಎನ್ ಜಿಸಿ ಪರ ಆಡುತ್ತಿದ್ದರು. ಒಂದು ಹಂತದಲ್ಲಿ ಎದುರಾಳಿ ತಂಡದ ಬ್ಯಾಟ್ಸ್ ಮನ್ ಅಜಿತೇಶ್ ಅರ್ಗಲ್ ಅವರನ್ನು ನಿಂದಿಸಿದ್ದಲ್ಲದೆ ದೈಹಿಕವಾಗಿ ಹಲ್ಲೆ ಮಾಡಲು ಮುಂದಾದರು.

ಮೈದಾನದಲ್ಲಿದ್ದ ಅಂಪೈರುಗಳಾದ ಅಜಿತ್ ಎಸ್ ದಾತಾರ್ ಹಾಗೂ ಕಮಲೇಶ್ ಶರ್ಮ ಅವರು ನಿಯಮ 2.2.8 ಅಡಿಯಲ್ಲಿ ಪ್ರವೀಣ್ ನಡವಳಿಕೆ ಶಿಕ್ಷಾರ್ಹ ಎಂದು ವರದಿ ನೀಡಿದ್ದಾರೆ. ಎಲ್ಲಾ ವರದಿ ನೋಡಿದ ಮೇಲೆ ಮ್ಯಾಚ್ ರೆಫ್ರಿ ಧನಂಜಯ್ ಸಿಂಗ್ ಅವರು ಪ್ರವೀಣ್ ಅವರು 'mentally unfit' ಎಂದು ಪ್ರಮಾಣ ಪತ್ರ ನೀಡಿದ್ದಾರೆ.

ಪ್ರವೀಣ್ ಏನು ಹೇಳಿದರು: "He (Kumar) shouted, ‘M******** tu batting kar, umpiring maat kar (you just bat, don't have to be an umpire)'." "When ordered to stop it, he repeated, ‘Woh m******** batting kyon nahin karta (why doesn't he simply bat?)'"

ಇಲ್ಲಿಗೆ ಈ ಗಲಾಟೆ ನಿಲ್ಲದೆ,ಬ್ಯಾಟ್ಸ್ ಮನ್ ಗೆ ತಲೆಯಲ್ಲಿ ಗುದ್ದುತ್ತಾ, ಎದೆಗೆ ಹೊಡೆಯಲು ಪ್ರವೀಣ್ ಕುಮಾರ್ ಮುಂದಾಗಿದ್ದಾರೆ. ಪ್ರವೀಣ್ ಕುಮಾರ್ ಈ ರೀತಿ ಜಗಳವಾಡುವುದು ಹೊಸದೇನಲ್ಲ. ಆದರೆ, ಯಾರೂ ಪ್ರವೀಣ್ 'ಮೆಂಟಲ್' ಎಂದು ಹೇಳಿರಲಿಲ್ಲ. ಮೀರತ್ ನಲ್ಲಿ ಡಾಕ್ಟರ್ ರೊಬ್ಬರಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದ ಪ್ರವೀಣ್, ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ಪ್ರವಾಸದ ವೇಳೆ ಪ್ರೇಕ್ಷಕರ ಜೊತೆ ಕಿತ್ತಾಟವಾಡಿದ್ದರು.

ಗಾಯಾಳುವಾಗಿದ್ದ ಪ್ರವೀಣ್ ಕುಮಾರ್ ಅವರು ಟೀಂ ಇಂಡಿಯ ಸೇರುವ ತವಕದಲ್ಲಿದ್ದಾರೆ. ಇದಕ್ಕೂ ಮುನ್ನ ಇಂಡಿಯನ್ ಪ್ರಿಮಿಯರ್ ಲೀಗ್ ನ ಆರನೇ ಆವೃತ್ತಿಯಲ್ಲಿ ಕಿಂಗ್ಸ್ XI ಪಂಜಾಬ್ ಪರ ಆಡಲಿದ್ದು, ಏಪ್ರಿಲ್3ಕ್ಕೆ ಪಂದ್ಯವಾಡಬೇಕಿದೆ. 2011ರ ಏಷ್ಯಾಕಪ್ ನಲ್ಲಿ ಟೀಂ ಇಂಡಿಯಾದಲ್ಲಿ ಪ್ರವೀಣ್ ಕಾಣಿಸಿಕೊಂಡಿದ್ದರು. ಒಟ್ಟು 6 ಟೆಸ್ಟ್ ಪಂದ್ಯ, 68 ಏಕದಿನ ಪಂದ್ಯ ಹಾಗೂ 10 ಟಿ20 ಪಂದ್ಯಗಳನ್ನು ಆಡಿದ್ದಾರೆ.

English summary
India paceman Praveen Kumar has run into trouble, again. The right-arm bowler was involved in an on-field spat with an opposition batsman and his actions have resulted in the Match Referee describing him "mentally unfit" to play the game.
ಅಭಿಪ್ರಾಯ ಬರೆಯಿರಿ